May 2, 2024

Bhavana Tv

Its Your Channel

ರಸ್ತೆ ಅಪಘಾತದಿಂದ ಗುಂಡ್ಮಿ ಗ್ರಾಮದ ವಿದ್ಯಾರ್ಥಿ ಕಿಶನ್, ಕೋಮಸ್ಥಿತಿಗೆ ಆರ್ಥಿಕ ಸಹಾಯಕ್ಕೆ ಕೋರಿಕೆ

ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಈ ಪಟ್ಟ ಬಾಲಕನ ಸ್ಥಿತಿ ನೋಡಲಸಾಧ್ಯವಾಗಿದೆ.
ಗುಂಡ್ಮಿ ಅಂಬಾಗಿಲು ಮಾಣಿಚನ್ನಕೇಶವ ದೇವಳದ ಸಮೀಪದ ನಿವಾಸಿ ಗುಲಾಬಿ ಮತ್ತು ಕೃಷ್ಣ ಪೂಜಾರಿ,ಅವರ ಮಗ, ಗುಂಡ್ಮಿ ಸರಕಾರಿ ಪ್ರೌಢ -ಶಾಲೆಯ ೮ನೇ ತರಗತಿಯ ವಿದ್ಯಾರ್ಥಿ ಕಿಶನ್ ಪೂಜಾರಿ ಎಂಬಾತ ಇತ್ತೀಚಿಗಿನ ಕೆಲ ತಿಂಗಳ ಹಿಂದೆ ಗುಂಡ್ಮಿ ಅಂಬಾಗಿಲಿನ ಯೂಟರ್ನ್ ಬಳಿ ತಾಯಿಯ ಜತೆಯಲ್ಲಿ ರಸ್ತೆಯ ಬದಿಯಲ್ಲಿ ನಿಂತಿರುವಾಗ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಇದೀಗ ಹಾಸಿಗೆಯಲ್ಲಿ . ಸುಮಾರು ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಈ ಬಾಲಕ ಯಾವುದೇ ಕ್ರಿಯೆಗೆ ಸ್ಪಂದಿಸದೇ ಜೀವವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದಾಗ ಒಂದು ದಿನ ಆಸ್ಪತ್ರೆಯಲ್ಲಿ ಬಾಲಕ ಕಣ್ಣು ಬಿಟ್ಟಾಗ ಈತ ಬದುಕುಳಿಯ ಬಹುದೆನ್ನುವ ಆಸೆಭಾವನೆಯೊಂದಿಗೆ ವೈದ್ಯರು ಮನೆಯವರಿಗೆ ಭರವಸೆಯನ್ನು ಮೂಡಿಸಿದ್ದಾರೆ. ತಕ್ಷಣ ವೈದ್ಯರು, ಬಾಲಕನಿಗೆ ಮನೆಯಲ್ಲೇ ಚಿಕಿತ್ಸೆಯನ್ನು ನೀಡಲು ಸೂಚಿಸಿದಲ್ಲದೆ,ನಿಧಾನವಾಗಿ ಸರಿ ಹೊಂದುತ್ತಾನೆ ,ಸದ್ಯ ಕೋಮ ಸ್ಥಿತಿಯಲ್ಲಿ ಕಾಲಕಳೆಯುತ್ತಿದ್ದಾನೆ.
ಈ ಕುಟುಂಬಕ್ಕೆ ಒಂದೆಡೆ ಮನೆ ಕಟ್ಟಿದ ಸಾಲವಾದರೆ, ಮತ್ತೊಂದೆಡೆ ಈ ಮಗನ ಚಿಕಿತ್ಸೆಗೆ ಹಣ ಹೊಂದಿಸುವ ಚಿಂತೆ, ಇದ್ದ ಇನ್ನೊಬ್ಬ ಮಗ ಕೂಡ ಅನಾರೋಗ್ಯದಿಂದ ವೈದ್ಯರ ಚಿಕಿತ್ಸೆಯಲ್ಲಿ ತನ್ನ ಜೀವನ ಸಾಗಿಸುತ್ತಿದ್ದಾನೆ . ಈತನ ಸ್ಥಿತಿಯನ್ನು ಕಂಡ ಗುಂಡ್ಮಿ ಶಾಲೆಯ ಶಿಕ್ಷಕ ವೃಂದ ಹಾಗೂ ಸ್ಥಳೀಯರಾದ ವಿನಯಕುಮಾರ್ ಕಬಿಯಾಡಿ ಒಂದಷ್ಟು ಮಕ್ಕಳನ್ನು ಸೇರಿಸಿ ಈತನೆದುರು ಕ್ರಿಕೆಟ್ ಆಡಿಸುವುದು, ಭಜನೆ,ಇತ್ಯಾದಿ ಚಟುವಟಿಕೆಯನ್ನು ಮಾಡಿದಾಗ ಹುಡುಗ
ಕಣ್ಣ ತೆರೆದು ನೋಡುವಂತ್ತಾಗಿದೆ ,ಕೈಯನ್ನು ಅಲ್ಲಾಡಿಸಲಾರಂಭಿಸಿದ. ತದನಂತರ ಕಬಿಯಾಡಿಯವರು ಸಾಲಿಗ್ರಾಮದ ಆಶಾವಾಣಿ ಟ್ರಸ್ಟ್ನ ಗಮನಕ್ಕೆ ಈ ಹುಡುಗನ ಪರಿಸ್ಥಿತಿಯನ್ನು ವಿವರಿಸಿದಾಗ ಟ್ರಸ್ಟ್ನ ಟ್ರಸ್ಟಿಗಳಾದ ಆಶಾ
ಹೆಗ್ಡೆ ಮತ್ತು ಡಾ.ವಾಣಿ ಐತಾಳ್ ನೆರ ಹುಡುಗನ ಮನೆಗೆ ಬಂದು ಒಂದಷ್ಟು ಬೇರೆ ಬೇರೆ ರೀತಿಯ ಚಟುವಟಿಕೆಯ ಮೂಲಕ ಚಿಕಿತ್ಸೆಯನ್ನು ನೀಡಿಹುಡುನನ್ನು ಮೊದಲಿನ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಪ್ರತಿ ಭಾನುವಾರ ಟ್ರಸ್ಟ್ನ ಸದಸ್ಯರು ಒಂದಷ್ಟು ಮಕ್ಕಳನ್ನು ಸೇರಿಸಿ ಕೊಂಡು ಬಾಲಕನನ್ನು ಸರಿಪಡಿಸಬೇಕು ಎನ್ನುವ ಛಲದಲ್ಲಿದ್ದಾರೆ. ಈ ಕುಟುಂಬಕ್ಕೆ
ಪ್ರತಿ ತಿಂಗಳು ಆಸ್ಪತ್ರೆಯ ಖರ್ಚು ಒಂದೆಡೆ ಯಾದರೆ, ಇನ್ನೊಂದೆಡೆ ಮಗನನ್ನು ನೋಡಿಕೊಳ್ಳಲು ಅನುಭವವಿರುವ ನರ್ಸ್ ಒಬ್ಬರನ್ನು ಹಾಕಿಕೊಂಡಿದ್ದಾರೆ. ಮನೆಯಲ್ಲಿ ಇರಿಸಿಕೊಂಡು ಅವನ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದಾರೆ
ತಾಯಿಗೆ ಮನೆ ಸಾಲದ ಜತೆ ಮಗನ ಚಿಂತೆ ಕಾಡುತ್ತಿದೆ. ತಾಯಿ ಸದಾ ದುಃಖದಲ್ಲೇ ಮಗನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಹೋರಾಡುತ್ತಿದ್ದಾರೆ. ಸಹೃದಯಿ ದಾನಿಗಳು ಈ ಕರುಳ ಕುಡಿಗೆ ಸಾಂತ್ವಾನ ಹೇಳಬೇಕಾಗಿದೆ.

ಸಹಾಯ ನೀಡುವವರು: -ಯುನಿಯನ್ ಬ್ಯಾಂಕ್ ಸಾಸ್ತಾನ ಪಾಂಡೇಶ್ವರ ಶಾಖೆಯ
ಎಸ್.ಬಿ. ಖಾತೆ ಸಂಖ್ಯೆ 520101069083890, ಐಎಫ್‍ಎಸ್‍ಸಿ ಕೋಡ್ ಯುಬಿಐಎನ್ 0901792

error: