May 2, 2024

Bhavana Tv

Its Your Channel

ಇಮಾನಿಯಲ್ ನೂವರ್ಸ್ದ್ ಪೀಪಲ್ ಮಿಷನ್ ಟ್ರಸ್ಟ್ ವತಿಯಿಂದ ೨೦೦ ದಿನಸಿ ಕಿಟ್ ವಿತರಣೆ:-

ಬಾಗೇಪಲ್ಲಿ:-ಪಟ್ಟಣದ ನ್ಯಾಷನಲ್ ಕಾಲೇಜ್ ಮುಂಭಾಗದ ಹೊಸ ಜೀವನ ನಿಲಯ ಚರ್ಚ್ನ ಮಿನಿ ಹಾಲ್ ನಲ್ಲಿ ಐ.ಎನ್.ಪಿ.ಎಂ.ಇಮಾನಿಯಲ್ ನೂವರ್ಸ್ದ್ ಪೀಪಲ್ ಮಿಷನ್ ಟ್ರಸ್ಟ್ ವತಿಯಿಂದ ೧೦೦ ದಿನಸಿ ಕಿಟ್ ಗಳನ್ನು ತಮಿಳುನಾಡಿನ ಮೂಲದ ಸೆಲ್ವನ್ ಮತ್ತು ಉಮಾ ಸೆಲ್ವನ್‌ರವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಟೆಂಟ್ ನಲ್ಲಿ ವಾಸಿಸುವ ಅಲೆಮಾರಿ ಜನಾಂಗದವರಿಗೆ ಹಾಗೂ ಬಡ ವರ್ಗದ ಜನರಿಗೆ ಸುಮಾರು ೧೦೦೦ ರೂಪಾಯಿಗಳ ಮೌಲ್ಯದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.

ನಂತರ ಮಾತನಾಡಿದ ಉಮಾ ಸೆಲ್ವನ್ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಕೊರೋನಾ ಮಹಾಮಾರಿ ರೋಗ ಬಂದ ಮೇಲೆ ಸಮಾಜದ ಪರಿಸ್ಥಿತಿ ಬದಲಾಗಿದೆ. ಸರ್ಕಾರ ವಿಧಿಸಿದ ಲಾಕ್ ಡೌನ್ ನಿಂದ ಜನರ ಕಷ್ಟ ಹೇಳತೀರದು. ಜನರಿಗೆ ಕೆಲಸವೂ ಇಲ್ಲ, ಆದಾಯವೂ ಇಲ್ಲ. ಜೀವನ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಪರಿಸ್ಥಿತಿಯ ಸತ್ಯವನ್ನು ಅರಿತು ಇಂದು ಐ.ಎನ್.ಪಿ.ಎಂ.ಇಮಾನಿಯಲ್ ನೂವರ್ಸ್ದ್ ಪೀಪಲ್ ಮಿಷನ್ ಟ್ರಸ್ಟ್ ವತಿಯಿಂದ ಹೊಸ ಜೀವನ ನಿಲಯ ಫಾದರ್ ಪ್ರಕಾಶ್ ಅವರ ನೇತೃತ್ವದಲ್ಲಿ ೧೦೦ ದಿನಸಿ ಕಿಟ್ ಗಳನ್ನು ಹಾಗೂ ಬಾಗೇಪಲ್ಲಿ ಪಟ್ಟಣದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿರುವ ಟೆಂಟ್ ಅಲೆಮಾರಿ ಜನಾಂಗದವರಿಗೆ ಸುಮಾರು ೧೦೦ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಯಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೊಸ ಜೀವನ ನಿಲಯ ಚರ್ಚ್ ಮುಖ್ಯ ಧರ್ಮಗುರು ಪ್ರಕಾಶ್ ,ಮಾಲತಿ, ತಾಯಮ್ಮ, ಕ್ರೈಸ್ತ ಕಿಂಗ್ಟೊನ್,ಡೆವಿಡ್ ವಿಷ್ಟನ್,ದೀಪಕ್, ಶಾಂತಿ, ಸುಧಾಕರ್ ಇನ್ನೂ ಮೊದಲಾದವರು ಉಪಸ್ಥಿತರಿದ್ದರು.

ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: