
ಭಟ್ಕಳ ಜನತೆ ಭಯಪಡುವ ಅವಶ್ಯಕತೆ ಇಲ ಎಂದು ಸಹಾಯ ಆಯುಕ್ತ ಭರತ್ ಸೆಲ್ವಂ ತಿಳಿಸಿದ್ದಾರೆ. ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಮಂಗಳೂರಿನಲ್ಲಿ ಭಟ್ಕಳ ಮೂಲದ ವ್ಯಕ್ತಿಗೆ ಕರೋನಾ ಸೊಂಕು ಪತ್ತೆಯಾದ ಹಿನ್ನೆಯಲ್ಲಿ ಭಾನವಾರ ಸಂಜೆ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಸುದ್ದಿಗೋಷ್ಠಿ ನಡೆಸಲಾಯಿತು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಆಯುಕ್ತರ ಅಧ್ಯಕ್ಷ ಭರತ್ ಸೆಲ್ವಂ ಕೊರೊನಾ ಸೋಂಕಿತ ವ್ಯಕ್ತಿ ಭಟ್ಕಳ ಮೂಲದವರಾಗಿದ್ದು, ಮಾ.೧೯ರಂದು ಸ್ಪೈಸ್ ಜೆಟ್ ವಿಮಾನದ ಮೂಲಕ ದುಬೈನಿಂದ ಆಗಮಿಸಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿದ್ದು, ಅವರನ್ನು ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಭಾನುವಾರ ಪಾಸಿಟಿವ್ ರಿಪೋರ್ಟ್ ದೊರೆತಿದ್ದು ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಆದರೆ ಸೋಂಕಿತ ವ್ಯಕ್ತಿ ಭಟ್ಕಳ ಬಂದಿಲ್ಲವಾಗಿದ್ದು.ಆತನನ್ನು ನೇರವಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸವಾಗಿದೆ. ಭಟ್ಕಳದ ಸಾರ್ವಜನಿಕರು ಯಾವುದೇ ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದರು.ಆದರೆ ಈತನ ಜೊತೆ ಬಂದ ೬ ಜನರಿಗೆ ಯಾವುದೇ ಸೋಂಕು ಕಂಡು ಬಂದಿಲ್ಲವಾಗಿದ್ದು. ಅವರನ್ನು ಆರೋಗ್ಯ ಇಲಾಖೆ ಇಷ್ಟು ದಿನ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದು ಅವರಿಗೆ ಜ್ವರದ ಕೆಮ್ಮು ಯಾವುದೇ ಲಕ್ಷ್ಮಣ ಕಂಡು ಬಂದಿಲ್ಲವಾಗಿದೆ ಎಂದರು
ಪತ್ರಕರ್ತರ ಒತ್ತಾಯದ ಮೇರೆಗೆ ಎಚ್ಚೆತ್ತುಕೊಂಡ ತಾಲೂಕಾಡಳಿತ:
ಇಂದು ಮಂಗಳೂರಿನಲ್ಲಿ ೨೨ ವರ್ಷದ ವ್ಯಕ್ತಿಗೆ ಸೋಂಕು ಕಂಡು ಬಂದ ಹಿನ್ನೆಯಲ್ಲಿ ತಾಲೂಕಾಢಳಿತ ಪತ್ರಿಕಾಗೋಷ್ಟಿ ಹಮ್ಮಿಕೊಂಡಿದ್ದು ಇದರಲ್ಲಿ ಸೋಂಕಿತನ ಜೊತೆಗೆ ಬಂದ ೬ ಜನರು ಎಲ್ಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಸಹಾಯಕ ಆಯುಕ್ತರು ಅವರನ್ನು ಹೋಮ್ ಒಬ್ಜೆರೇಷನಲ್ಲಿದ್ದಾರೆ ಎಂದು ಹೇಳಿದರು. ಆಗ ಪತ್ರಕರ್ತರು ಈಗಲೂ ಅವರನ್ನು ಹೋಮ್ ಒಬ್ಜೆರೇಷನಲ್ಲಿ ಇಟ್ಟರೆ ತೊಂದರೆಯಾಗುತ್ತದೆ ಕೂಡಲೇ ಅವರನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಇಲ್ಲವಾದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದರು. ಆಗ ಕೂಡಲೇ ಅವರನ್ನು ತಾಲೂಕಾಢಳಿತ ಎಚ್ಚೆತ್ತು ತಾಲೂಕಾಸ್ಪತ್ರೆಗೆ ರಾತ್ರೋ ರಾತ್ರಿ ದಾಖಲಿಸಿದ್ದಾರೆ
ಈ ಸಂದರ್ಭದಲ್ಲಿ ತಹಸೀಲ್ದಾರ್ ವಿ.ಪಿ ಕೊಟ್ರಳ್ಳಿ, ಜಿಲ್ಲಾ ವೈದ್ಯಾಧಿಕಾರಿ ಅಶೋಕ, ತಾಲೂಕಾವೈದ್ಯಾಧಿಕಾರಿ ಮೂರ್ತಿರಾಜ ಭಟ್ ಮುಂತಾದವರು ಉಪಸ್ಥಿತರಿದ್ದರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.