April 19, 2024

Bhavana Tv

Its Your Channel

ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ಜನತಾ ಕರ್ಪ್ಯೂ ಉತ್ತಮ ಬೆಂಬಲ,

ಕೊರೊನಾ ವೈರಸ್ ತಡೆಗಟ್ಟುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದು ಒಂದು ದಿನದ ಜನತಾ ಕರ್ಪ್ಯೂ ಗೆ ಭಾನುವಾರ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು. ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ ಜನತಾ ಕರ್ಪ್ಯೂ ಉತ್ತಮ ಬೆಂಬಲ ದೊರೆತಿದೆ.

ಜನತಾ ಕರ್ಫ್ಯೂವನ್ನು ತಾಲೂಕಿನ ಸಾರ್ವಜನಿಕರು ಬಹಳ ಗಂಭಿರವಾಗಿ ಪರಿಗಣಿಸುದ್ದು ಮುಂಜಾನೆಯಿAದ ಯಾರು ತಮ್ಮ ಮನೆಗಳಿಂದ ಹೊರಗೆ ಬರದೆ ಮನೆಯಲ್ಲೇ ಕುಳಿತು ದಿನವನ್ನು ಕಳೆದರು, ರಸ್ತೆಯಲ್ಲಿ ಜನರ ಓಡಾಟವಿಲ್ಲದೆ ಖಾಲಿ ಖಾಲಿಯಾಗಿದ್ದು. ಅಂಗಡಿ ಮುಂಗಟ್ಟುಗಳು ಬಂದಾಗಿದ್ದು ತಾಲೂಕಿನ ಜನತೆ ಜನತಾ ಕರ್ಪ್ಯೂಗೆ ಬೆಂಬಲ ನೀಡಿದ್ದಾರೆ.
ಪರಿಸರದಲ್ಲಿ ಪೂರ್ಣ ಪ್ರಮಾಣದ ಪ್ರತಿಕ್ರಿಯೆ ದೊರೆತಿದೆ. ಇಲ್ಲಿನ ಗಲ್ಲಿ ಗಲ್ಲಿಗಳಲ್ಲಿನ ಅಂಗಡಿಗಳು ಕೂಡ ಬಾಗಿಲು ಮುಚ್ಚಿದೆ.ಹೆದ್ದಾರಿಯಲ್ಲಿ ವಾಹನ ಸಂಚಾರ ಇಲ್ಲದೇ ಬಿಕೋ ಅನ್ನುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರೂಪಕ್ಕೊಮ್ಮೆ ಒಂದೆರಡು ವಾಹನ ಸಂಚರಿಸುತ್ತಿದೆ. ಶಿರೂರು ಟೋಲ್‌ಗೇಟ್ ಬಳಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ನಸುಕಿನಿಂದ ಆರೋಗ್ಯಾಧಿಕಾರಿಗಳ ತಂಡ ಮುಂಬೈ ಹಾಗೂ ಹೊರ ಜಿಲ್ಲೆಯಿಂದ ಬರುವ ಬಸ್ಸುಗಳ ತಪಾಸಣೆ ನಡೆಸುತ್ತಿದೆ.ಇದುವರೆಗೆ ಮೂರು ವ್ಯಕ್ತಿಗಳಲ್ಲಿ ಶಂಕಿತಾ ಕೊರೊನಾ ಪತ್ತೆಯಾಗಿದ್ದು ಅವರನ್ನು ಹೆಚ್ಚಿನ ಪರೀಕ್ಷೆಗಾಗಿ ಮತ್ತು ಸ್ಪಷ್ಟ ಮಾಹಿತಿ ಪಡುವ ಉದ್ದೇಶದಿಂದ ಕೊರೊನಾ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿದೆ.

ಇದೆ ಸಂದರ್ಭದಲ್ಲಿ ಭಟ್ಕಳ ಜನತಾ ಕರ್ಫ್ಯೂ.. ಪೊಲೀಸರ ಹೊಟ್ಟೆ ತಣ್ಣಗಾಗಿಸಿದ ಸಹೃದಯಿ ಮುಸ್ಲಿಂ ಬಾಂಧವರು
ಬಿಸಿಲಿನಲ್ಲಿ ಬಸವಳಿದಿದ್ದ ಪೊಲೀಸರಿಗೆ ತಂಪು ಪಾನೀಯಗಳನ್ನ ನೀಡಿ ಮಾನವೀಯತೆ ಮೆರೆದಿದ್ದಾರೆ. ಝಳದಿಂದಾಗಿ ಸುಸ್ತಾದವರಂತೆ ಕಾಣ್ತಿದ್ದ ಪೊಲೀಸರು ಕೋಲ್ಡ್ಡ್ರಿಂಕ್ಸ್ ಕುಡಿದು ಹೊಟ್ಟೆ ತಣ್ಣಗಾಗಿಸಿಕೊಂಡಿದ್ದಾರೆ. ಅಲ್ಲದೇ ಮುಸ್ಲಿಂ ಸಮುದಾಯದವರ ನಡೆಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.
ಸಂಜೆ ೫ ಗಂಟೆಗೆ ಅಬಿನಂದನಾ ಚಪ್ಪಾಳೆ ತಾಲೂಕಿನಲ್ಲಿ ಕಂಡು ಬಂತು,

error: