
ಹೊನ್ನಾವರ ;ತಾಲೂಕಿನ ಚಂದಾವರ ಹನುಮಂತ ದೇವಾಲಯದ ಸಮೀಪ ಆಹಾರ ಹುಡುಕಿ ಬಂದಿದ್ದ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಾಟಿಸಿ ಗಂಭೀರ ಗಾಯಗೊಳಿಸಿದ ಪರಿಣಾಮ ಸಾವನಪ್ಪಿದ್ದ ಘಟನೆ ಗುರುವಾರ ವರದಿಯಾಗಿದೆ.
ಚಂದಾವರದ ಹನುಮಂತ ದೇವಾಲಯದ ಸಮೀಪದ ತೇಬ್ರಿ ನದಿಗೆ ನೀರು ಕುಡಿಯಲು ಆಗಮಿಸಿದ ಗಂಡು ಜಿಂಕೆಗೆ ಬೀದಿ ನಾಯಿಗಳು ಅಟ್ಟಾಟಸಿ ಗಾಯಗೊಳಿಸಿದೆ. ಜಿಂಕೆಯ ಕಾಲು, ಹಾಗೂ ಕುತ್ತಿಗೆಗೆ ಗಂಭೀರ ಗಾಯಗೊಂಡ ಹಿನ್ನಲೆಯಲ್ಲಿ ಮೃತಪಟ್ಟಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಜಿಂಕೆಯ ಅಂತ್ಯಸAಸ್ಕಾರವನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಎಸ್.ಆಯ್. ನಾಯ್ಕ, ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.