ಹೊನ್ನಾವರ: ಕರೋನಾ ಸಂಕಷ್ಟಕ್ಕೆ ಉದ್ಯಮದ ಜೊತೆ ಅದನ್ನು ನಂಬಿರುವ ಸಿಬ್ಬಂದಿಗಳು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಸರ್ಕಾರ ಕೆಲವರನ್ನು ಸಂಕಷ್ಟದ ಪಾರುಮಾಡಲು ವಿವಿಧ ವರ್ಗದವರಿಗೆ ಪರಿಹಾರ ನೀಡಲು ಮುಂದಾಗಿದೆ. ಆದರೆ ಅತ್ತ ಕಾರ್ಮಿಕ ವರ್ಗಕ್ಕೂ ಸೇರದ ಇತ್ತ ಯಾರಿಂದಲೂ ಸಹಕಾರ ಸಿಗದವರು ಹಲವರಿದ್ದಾರೆ. ಅದರಲ್ಲಿ ಪತ್ರಿಕಾ ವಿತರಕರು ಒರ್ವರು. ಪ್ರತಿನಿತ್ಯದ ರಾಜ್ಯ ರಾಷ್ಟçದ ಬೆಳವಣೆಗೆ ಜೊತೆ ಕರೋನಾ ಸಂಭದ ಸರ್ಕಾರದ ಆದೇಶವನ್ನು ಪತ್ರಿಕೆಗಳು ವರದಿ ಮಾಡುತ್ತಿದೆ. ಅದನ್ನು ಮನೆಬಾಗಿಲಿಗೆ ತಲುಪಿಸುವವರು ಪತ್ರಿಕಾ ವಿತರಕರು. ಆದರೆ ಕಳೆದ ಹಲವು ದಿನಗಳಿಂದ ಭಯದಲ್ಲಿಯೇ ಪ್ರತಿನಿತ್ಯ ಪತ್ರಿಕೆಯನ್ನು ಮನೆಬಾಗಿಲಿಗೆ ತಲುಪಿಸಿದರೂ ನಿರಿಕ್ಷೀತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ. ಕೆಲವರು ಪತ್ರಿಕೆಯಿಂದ ದೂರ ಉಳಿದಿದ್ದು ಪಟ್ಟಣ ವ್ಯಾಪ್ತಿಯ ಹಲವರು ಪತ್ರಿಕೆಯನ್ನು ೨ರಿಂದ ೩ ತಿಂಗಳ ಕಾಲ ಬಂದ್ ಮಾಡಿದ್ದರೆ, ಇನ್ನು ಕೆಲವರು ಚಂದಾ ನವೀಕರಣವನ್ನು ಮುಂದೂಡಿದ್ದಾರೆ. ಇದರ ಪರಿಣಾಮ ಇವರಿಗೆ ಸರಿಯಾಗಿ ವೇತನವಿಲ್ಲ ತಿಂಗಳಿಗೆ ಕಮೀಷನ್ ರೂಪದಲ್ಲಿ ಸಂಬಳ ಪಡೆಯುವ ಪತ್ರಿಕಾವಿತರಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಇದುವರೆಗೆ ಯಾರೊಬ್ಬರು ಇವರಿಗೆ ನೆರವಾಗಲಿಲ್ಲ.
ನೆರೆಯ ತಾಲೂಕ ಆದ ಭಟ್ಕಳ, ಕುಮುಟಾ ಸೇರಿದಂತೆ ವಿವಿಧ ತಾಲೂಕಿನವರಿಗೆ ಸಹಕಾರ ಹೊನ್ನಾವರದವರಿಗೂ ದೊರೆಯಲಿ. ಮುಂದಿನ ದಿನದಲ್ಲಾದರೂ ಈ ವರ್ಗದತ್ತ ಗಮನಿಸಿ ಸಹಕಾರ ನೀಡುವತ್ತ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮುಂದಾಗಬೇಕಿದೆ.
……………………………………
ನೆರೆಯ ತಾಲೂಕಿಗೆ ನೀಡಿದ ಸಹಾಯ ಹೊನ್ನಾವರಕ್ಕೆ ಇಲ್ಲ: ಹಾಲಿ ಮಾಜಿ ಶಾಸಕರು, ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ದಿನಸಿ ಕಿಟ್ ಸೇರಿದಂತೆ ವಿವಿಧ ಬಗೆಯ ಆರ್ಥಿಕ ಸಹಾಯ ಜಿಲ್ಲೆಯ ಇತರೆ ತಾಲೂಕಿನವರಿಗೆ ನೀಡಿದ್ದು ಹೊನ್ನಾವರದ ೧೮ ವಿತರಕರಿಗೆ ಈ ಸಹಾಯ ಸಿಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಹೊನ್ನಾವರ ಎರಡು ವಿಧಾನಸಭಾ ಕ್ಷೇತ್ರ ಒಳಗೊಂಡಿದ್ದರೂ ಪಟ್ಟಣ ಪ್ರದೇಶ ಕುಮುಟಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಹಿಂದೆ ಶಾಸಕರು ಅಂಕಿ ಸಂಖ್ಯೆಗಳ ಮಾಹಿತಿ ಪಡೆದು ಸುಮ್ಮನಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
………………………………
ಕರೋನಾ ಭಯದಿಂದ ೩೦೦ ಪತ್ರಿಕೆ ವಿತರಣೆ ಮಾಡುತ್ತಿದ್ದವರು ೧೬೦ಕ್ಕೆ ಬಂದು ತಲುಪಿದೆ. ಇದನ್ನೆ ನಂಬಿ ನಾವು ಜೀವನ ನಡೆಸುತ್ತಿದ್ದರೂ ನಮ್ಮ ಕಷ್ಟವನ್ನು ಯಾರು ಗಮನಿಸಿಲ್ಲ. ಅಲ್ಲದೇ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕಿನವರಿಗೂ ಜನಪ್ರತಿನಿದಿಗಳು ಸಂಘ ಸಂಸ್ಥೆಗಳು ನೆರವಾದರೂ ನಮ್ಮ ತಾಲೂಕಿನಲ್ಲಿ ಇದುವರೆಗೂ ಯಾರಿಂದಲೂ ಸಹಕಾರ ದೊರೆತಿಲ್ಲ. ಆದರೂ ನಮ್ಮ ಕಾರ್ಯ ನಾವು ಮಾಡುತ್ತಿದ್ದೇವೆ. ಪ್ರಶಾಂತ ಶೇಟ್ ಪತ್ರಿಕಾ ವಿತರಕರು ಹೊನ್ನಾವರ.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ