April 26, 2024

Bhavana Tv

Its Your Channel

ಉತ್ತರ ಕನ್ನಡ ಶ್ರೀ ರಾಮ ಸೇನಾ ಘಟಕದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ

ಭಟ್ಕಳ: ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಮಾಡುವ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿ ಭಕ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಆಂಧ್ರಪ್ರದೇಶ ಸರ್ಕಾರಕ್ಕೆ ತಮ್ಮ ನೇತೃತ್ವದಲ್ಲಿ ಸಾಧು ಸಂತರ, ಭಕ್ತರ, ವಿದ್ವಾಂಸರ ಸರ್ಕಾರೇತರ ಸಮಿತಿ ಸಂಗ್ರಹಕ್ಕೆ ಮುಂದಾದ ಆಂಧ್ರಪ್ರದೇಶ ಸರ್ಕಾರಕ್ಕೆ ರಾಜ್ಯಪಾಲರ ನೇತೃತ್ವದಲ್ಲಿ ಸಾಧು ಸಂತರು, ಭಕ್ತರ, ವಿದ್ವಾಂಸರ ಸರ್ಕಾರ ರೈತರ ಸಮಿತಿ ರಚಿಸಲು ಆಗ್ರಹಿಸಿ ಉತ್ತರ ಕನ್ನಡ ಶ್ರೀ ರಾಮ ಸೇನಾ ಘಟಕದ ವತಿಯಿಂದ ಸಹಾಯಕ ಆಯುಕ್ತ ಮೂಲಕ ರಾಜ್ಯಪಾಲರಿಗೆ ಬುಧವಾರದಂದು ಮನವಿ ಸಲ್ಲಿಸಿದರು.

ದೇವಸ್ಥಾನದ ಯಾವುದೇ ಆಸ್ತಿ ಸಂಪತ್ತನ್ನು ಮಾರುವ, ಒತ್ತೆ ಇಡುವದನ್ನು ತಕ್ಷಣ ರದ್ದುಗೊಳಿಸಬೇಕು. ಈಗಾಗಲೇ ಭಕ್ತರು ದೇವರಿಗೆ ಅರ್ಪಿಸುವ ಹುಂಡಿ ಸೇವೆ ಹಣವನ್ನು ಸರಕಾರ ತೆಗೆದುಕೊಳ್ಳುತ್ತಿರುವಿದೇ ಅಪರಾಧವಾಗಿದ್ದು, ಈಗ ನೂರಾರು ವರ್ಷಗಳ ಹಿಂದೆ ರಾಜರು, ಭಕ್ತರು ದೇವರಿಗೆ ಅರ್ಪಿಸಿದ ಸಂಪತ್ತಿನ ಮೇಲೂ ಕೈ ಹಾಕಿರುವುದು ಸರ್ಕಾರದ ಭೌಧಿಕ ದಿವಾಳಿ ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನ ದಿನಗಳಲ್ಲಿ ಇಂತಹ ಕುಕೃತ್ಯ ನಡೆಯದಂತೆ ಕಾನೂನು ರಚಿಸಲು ಆಗ್ರಹಿಸಿದರು.

ಮನವಿಯನ್ನು ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಚೇರಿ ಶಿರಸೇದ್ದಾರ ಎಲ್.ಎ.ಭಟ್ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ಜಯಂತ ನಾಯ್ಕ, ತಾಲೂಕಾ ಘಟಕ ಪ್ರಮುಖರಾದ ಸಂದೀಪ, ರಾಜು ನಾಯ್ಕ, ಉದಯ ಮೋಗೇರ ಮುಂತಾದವರು ಇದ್ದರು.

error: