April 28, 2024

Bhavana Tv

Its Your Channel

ಡಾ ಸಿ ಫರ್ನಾಂಡಿಸ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜೋನ ಜೋಸೆಫ್ ಅವರಿಗೆ ಬಿಳ್ಕೋಡುಗೆ.

ಹೊನ್ನಾವರ : ೧೦೩ ವರ್ಷ ಇತಿಹಾಸವಿರುವ ಹೊನ್ನಾವರದ ಡಾ ಸಿ ಫರ್ನಾಂಡಿಸ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ರಾಗಿ ೨೧ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಮೇ ೩೧ರಂದು ನಿವೃತ್ತಿ ಹೊಂದಿದ ಜೋನ ಜೋಸೆಫ್ ಅವರಿಗೆ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು,ಹಿತೈಷಿಗಳು ಅವರ ಸೇವೆಯನ್ನು, ಸೇವಾ ಮನೋಭಾವವನ್ನು ಶ್ಲಾಘಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಮುಖ್ಯ ಕಾರ್ಯನಿರ್ವಾಹಕ ರಾಗಿ ನಿವೃತ್ತಿ ಹೊಂದಿದ ಜೋನ ಜೊಸೆಫ ರವರು ಸನ್ಮಾನ ಸ್ವಿಕರಿಸಿ ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊAಡರು.ನಮ್ಮ ಸೇವಾ ಅವಧಿಯ ಪ್ರಾರಂಭದಲ್ಲಿ ಕಾರ್ಯನಿರ್ವಹಿಸಲು ಬಳಷ್ಟು ಸಮಸ್ಯೆಗಳಿದ್ದವು ಸವಾಲುಗಳಿದ್ದವು ಆದರೆ ಈಗ ಮೊದಲಿನಂತಿಲ್ಲ ಸಮಸ್ಯೆ ಸವಾಲುಗಳು ಕಡಿಮೆ. ಈ ಸಂಸ್ಥೆ ಹಂತ ಹಂತವಾಗಿ ಏಳ್ಗೆ ಹೊಂದಲು ಇಲ್ಲಿನ ಸಿಬ್ಬಂದಿ ವರ್ಗ, ಆಡಳಿತ ಮಂಡಳಿಯ ಸಹಕಾರವು ಮಹತ್ವದಾಗಿದೆ. ನಿಸ್ವಾರ್ಥ ಸೇವಾ ಮನೋಭಾವದ ಕರ್ತವ್ಯ ನಿರ್ವಹಿಸಿದ್ದ ಹೆಮ್ಮೆ ಇದೆ ಎಂದರು. ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಪ್ರಮುಖರನ್ನು ಸ್ಮರಿಸಿದರು.

ಸಂಘದ ಹಿರಿಯ ಶಾಖಾ ವ್ಯವಸ್ಥಾಪಕ ಕೆ.ಪಿ ಲೋಕೇಶ್ ,ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಕೊಲಿನ್ ಹೊರ್ಟಾ ಮತ್ತಿತರರು ಜೊನ್ ಜೋಸೆಫ್ ಜೊತೆಗಿನ ಸೇವಾ ಅನುಭವ, ಅನಿಸಿಕೆ ವ್ಯಕ್ತಪಡಿಸಿ ಅಭಿನಂದನಾ ನುಡಿಗಳನ್ನಾಡಿದರು.

ವೇದಿಕೆಯಲ್ಲಿ ನಿರ್ದೇಶಕರಾದ ಆನಂದ ಗೊನ್ಸಾಲ್ವಿಸ್, ಅಣ್ಣಪ್ಪ ನಾಯ್ಕ, ಬ್ರೆಜಿಲ್ ಪಿಂಟೋ, ಹೆನ್ರಿ ಲಿಮಾ, ಅಮಿತ ಗೊನ್ಸಾಲ್ವಿಸ್, ಸಾವೇರ್ ರೊಡ್ರಿಗಸ್, ಎಪಿಫನ್ ಫರ್ನಾಂಡಿಸ್, ಸಂತಾನ್ ಫರ್ನಾಂಡಿಸ್ ,ಗಣಪಿ ಮುಕ್ರಿ, ಜ್ಯೂಲಿಯೆಟ್ ಮಿರಾಂದಾ, ಸಂಪಿಗೆ ಲೋಬೋ ,ಎಕ್ಜೆಲ್ ಡಯಾಸ್, ಸಾಂತೋಲಿನ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

error: