May 3, 2024

Bhavana Tv

Its Your Channel

ಕೊರೋನಾ ಸಮಯದಲ್ಲಿ ರಕ್ತದ ಕೊರತೆ ನೀಗಲು ದಾನಿಗಳು ಸ್ವಯಂಪ್ರೇರಣಿಯಿOದ ರಕ್ತ ನೀಡಲು ಮುಂದಾಗಬೇಕಿದೆ: ಡಾ ಮೂಡ್ಲಗಿರಿ

ಹೊನ್ನಾವರ: ವರ್ಷಗಳ ಹಿಂದೆ ರಕ್ತದಾನಿಗಳ ಮತ್ತು ಹಣಕಾಸು ದಾನಿಗಳ ನೆರವಿನಿಂದ ಕುಮಟಾದಲ್ಲಿ ಆರಂಭಿಸಲಾದ ಉತ್ತರ ಕನ್ನಡದ ಬ್ಲಡ್ ಬ್ಯಾಂಕಿಗೆ ರಕ್ತದ ಕೊರತೆ ಉಂಟಾಗುತ್ತಿದೆ. ರಕ್ತದಾನಿಗಳು ತಮ್ಮ ರಕ್ತ ನೀಡುವ ಮುಖಾಂತರ ಲಾಭದ ಉದ್ದೇಶವಿಲ್ಲದೇ ಕಟ್ಟಲಾದ ಈ ಸಂಸ್ಥೆಗೆ ರಕ್ತದಾನ ನೀಡಿ ಜನರ ಜೀವ ಉಳಿಸಲು ನೆರವಾಗಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ಜನಪ್ರೀಯ ಶಿಶುವೈದ್ಯ ಡಾ. ಮೂಡ್ಲಗಿರಿ ಕೋರಿದ್ದಾರೆ.
ಇತ್ತಿಚಿಗೆ ಇಂತಹದೇ ಸಂದರ್ಭ ಒದಗಿ ಬಂದಾಗ ಹೊನ್ನಾವರದ ತುಳಸಿ ಮೆಡಿಕಲ್ಸ್ ಚಂದನ ಪ್ರಭು ಅವರು ತಮ್ಮ ಕುಟುಂಬದ ಐವರ ಸಹಿತ ೮ ಮಹಿಳೆಯರು ಮತ್ತು ೧೫ ಜನರ ರಕ್ತ ನೀಡಿದರು, ಇಂತಹ ಕೊಡುಗೆಯನ್ನು ನಾವು ಸ್ವಾಗತಿಸುತ್ತೇವೆ. ಬ್ಲಡ್ ಬ್ಯಾಂಕ ಕುಮಟಾದಲ್ಲಿದ್ದರೂ ಕುಮಟಾ-ಹೊನ್ನಾವರ ತಾಲೂಕಿನ ಆಸ್ಪತ್ರೆಗಳಿಗೆ ಈವರೆಗೆ ಅತಿಹೆಚ್ಚು ರಕ್ತ ಪೂರೈಸಿದ ಕುಮಟಾ ಬ್ಲಡ್ ಬ್ಯಾಂಕ್ ವೈದ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಡಾ. ಆಶಿಕ್ ಹೆಗಡೆ, ಡಾ. ಪ್ರಕಾಶ ನಾಯ್ಕ ಮೊದಲಾದವರು ಬ್ಲಡ್ ಬ್ಯಾಂಕಿಗೆ ನೆರವಾಗಿ ನಿಂತಿದ್ದಾರೆ. ಕೋವಿಡ್, ಡೆಂಗ್ಯೂ ದಿನಗಳಲ್ಲಿ ಒಂದೆಡೆ ರಕ್ತದ ಬೇಡಿಕೆ ಹೆಚ್ಚಾದರೆ ಇನ್ನೊಂದೆಡೆ ದಾನಿಗಳ ಕೊರತೆ ಉಂಟಾಗಿದೆ. ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ. ಸಮಯಕ್ಕೆ ಸರಿಯಾದ ರಕ್ತ ಸಿಗದ ಕಾರಣ ಹಲವರು ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಗ್ರಾಮೀಣ ಯುವಕ ಸಂಘಗಳು, ಮಹಿಳಾಸಂಘಗಳು ಒಂದಾಗಿ ಕನಿಷ್ಠ ೧೦ಜನ ರಕ್ತ ನೀಡುವುದಾದರೆ ನಾವು ಅಲ್ಲಿಗೆ ಬಂದು ರಕ್ತ ಸಂಗ್ರಹಿಸಲು ಸಿದ್ಧರಿದ್ದೇವೆ.
ಈಗ ಸಾಕಷ್ಟು ಸಂಗ್ರಹವಿಲ್ಲದ ಸಂದರ್ಭದಲ್ಲಿ ಕೊಡುವ ರಕ್ತದ ಪ್ರತಿಯಾಗಿ ದಾನಿಗಳಿಂದ ಅಷ್ಟೇ ರಕ್ತವನ್ನು ಪಡೆದುಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ. ನಾವು ನಡೆಸುತ್ತಿರುವ ರಕ್ತ ಬ್ಯಾಂಕ ಯಾವುದೇ ವ್ಯಾವಹಾರಿಕ ಉದ್ದೇಶಗಳಿಂದ ನಡೆಸುತ್ತಿಲ್ಲ. ಕಷ್ಟಪಟ್ಟು ರಕ್ತದಾನದ ಕೇಂದ್ರವನ್ನು ಕಟ್ಟಿದ್ದೇವೆ. ರಕ್ತ ನೀಡುವ ಮುಖಾಂತರ ನಿಮ್ಮದಾದ ಈ ಸಂಸ್ಥೆಯನ್ನು ಉಳಿಸಿ, ಉಪಯೋಗಪಡಿಸಿಕೊಳ್ಳಬೇಕಾದದ್ದು ಸಾರ್ವಜನಿಕರ ಜವಾಬ್ಧಾರಿಯಾದ್ದರಿಂದ ರಕ್ತದಾನಿಗಳಿಗೆ ಈ ಕರೆ ನೀಡಿರುವುದಾಗಿ ಡಾ. ಮೂಡ್ಲಗಿರಿ, ಡಾ. ಪ್ರಕಾಶ ನಾಯ್ಕ, ಡಾ. ಆಶಿಕ್ ಹೆಗಡೆ ಹೇಳಿದ್ದಾರೆ. ಆಸಕ್ತ ಸಂಘಟನೆಗಳು, ಸಾರ್ವಜನಿಕರು ಡಾ. ಮೂಡ್ಲಗಿರಿ ಅಥವಾ ತುಳಸಿ ಮೆಡಿಕಲ್ಸ್ ಚಂದನ್ ಪ್ರಭು ೯೮೮೦೧೧೭೪೬೪ ಸಂಪರ್ಕಿಸಬಹುದು.

error: