May 18, 2024

Bhavana Tv

Its Your Channel

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಆತ್ಮ ಯೋಜನೆಯಡಿಯಲ್ಲಿ ತಾಲೂಕು ಮಟ್ಟದ ಶೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ.

ಹೊನ್ನಾವರ(ಡಿ.೨೬): ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಆತ್ಮ ಯೋಜನೆಯಡಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹೊನ್ನಾವರದಲ್ಲಿ ರೈತ ದಿನಾಚರಣೆ ಆಚರಣೆ ಮತ್ತು ರೈತರಿಗೆ ತರಬೇತಿ ಸಂವಾದ ಮತ್ತು ತಾಲೂಕು ಮಟ್ಟದ ಶೇಷ್ಠ ಕೃಷಿಕ ಪ್ರಶಸ್ತಿ ವಿತರಣೆ,ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು ಕುಮಾರಿ ಸ್ಮಿತಾ ಹೆಚ್ ಎನ್ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರನ್ನು ಸ್ವಾಗತಿಸಿದ್ದರು ನಂತರ ಶ್ರೀಮತಿ ಪುನೀತಾ ಎಸ್ ಬಿ ಸಹಾಯಕ ಕೃಷಿ ನಿರ್ದೇಶಕಿ ರೈತ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷ ತಾಲೂಕಿನಲ್ಲಿ ಕೃಷಿಯಲ್ಲಿ ವಿವಿಧ ವಿಭಾಗಗಳಲ್ಲಿ ಯಶಸ್ಸು ಸಾಧಿಸಿದ ರೈತರಿಗೆ ಪ್ರೋತ್ಸಹ ನೀಡಲು ಆತ್ಮ ಯೋಜನೆಯಡಿ ಶೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದೆ ಎಂದು ಪ್ರಾಸ್ತಾವಿಕ ನುಡಿಗಳನ್ನು ತಿಳಿಸಿದರು, ನಂತರ ಕಾರ್ಯಕ್ರಮ ಉದ್ಘಾಟಿಸಿದ ಗಣಪತಿ ಆರ್ ಭಟ್ ರಾಜ್ಯ ರೈತ ಸಲಹಾ ಸಮಿತಿ ಸದಸ್ಯರು ಕೃಷಿಯಲ್ಲಿ ರೈತರು ಯಶಸ್ಸು ಕಾಣಬೇಕಾದರೆ ರೈತ ಒಬ್ಬ ಉದ್ಯಮಿಯ ರೀತಿ ಯೋಚಿಸಿ ಕೃಷಿ ಉತ್ಪನ್ನಗಳು ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಮಾಡಿದಾಗ ಮಾತ್ರ ಸಾಧ್ಯ ಎಂದರು ನಂತರದಲ್ಲಿ ವಿವಿಧ ವಿಭಾಗಗಳಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರವಿ ಗಜಾನನ ಹೆಗಡೆ ಸಾವಯವ ಕೃಷಿ ಜಲವಳ್ಳಿ ಗ್ರಾಮ , ವಿನೋದ ರಾಮನಾಥ ನಾಯ್ಕ್ ಹೊನ್ನಾವರ ಹೈನುಗಾರಿಕೆ ವಿಭಾಗ ವಿಷ್ಣು ಸುಬ್ರಾಯ ಹೆಗಡೆ ಹೊನ್ನಾವರ ಹೋಬಳಿ ಸಮಗ್ರ ಕೃಷಿ ಪದ್ಧತಿ ವಿಭಾಗ ಭಾರತಿ ಗಣೇಶ್ ಯಾಜಿ,ಕೊಟ ಗ್ರಾಮ ತೋಟಗಾರಿಕೆ ಬೆಳೆಗಳು ವಿಭಾಗ ನಾರಾಯಣ ನಾಯ್ಕ,ಹೊದಿಕೇಶಿರೂರು ರೇಷ್ಮೆ ಬೇಸಾಯ ವಿಭಾಗಗಳಲ್ಲಿ ಯಶಸ್ಸು ಸಾಧಿಸಿರುವ ರೈತರಿಗೆ ಪ್ರಶಸ್ತಿ ಪತ್ರ ಸನ್ಮಾನಿಸಲಾಗಿತು.ನಂತರ ಜಿ ವಿ ನಾಯಕ ಮುಖ್ಯಸ್ಥರು ಕೃಷಿ ವಿಸ್ತರಣಾ ಕೇಂದ್ರ ಕುಮಟಾ ರವರು ಮಣ್ಣು ಸಂರಕ್ಷಣೆ ಕುರಿತು ರೈತರಿಗೆ ಮಾಹಿತಿ ನೀಡಿದರು ನಂತರದಲ್ಲಿ ಪ್ರೊಜೆಕ್ಟ್ ಮೂಲಕ ಶೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತರು ಒಬ್ಬರಾಗಿ ತಾವು ಅಳವಡಿಸಿಕೊಂಡ ಕೃಷಿ ತಾಂತ್ರಿಕತೆ ಮತ್ತು ತಮ್ಮ ಕ್ಷೇತ್ರ ಅನುಭವಗಳನ್ನು ರೈತರೊಂದಿಗೆ ವಿನಿಮಯ ಮಾಡಿಕೊಂಡರು ಎರೆ ಹುಳು ಗೊಬ್ಬರ ಮಾರಾಟ ಮಾಡಿ ಲಾಭ ಗಳಿಸಿದ ಕುರಿತು ರವಿ ಹೆಗಡೆ ರವರು ತಮ್ಮ ಘಟಕದ ನಿರ್ವಹಣೆ ಕುರಿತು ತಿಳಿಸಿದರು ಹೀಗೆ ಎಲ್ಲಾ ರೈತರು ತಮ್ಮ ಯಶಸ್ಸಿನ ತಾಂತ್ರಿಕತೆಗಳನ್ನು ಸಂವಾದದಲ್ಲಿ ಭಾಗವಹಿಸಿದ ರೈತರಿಗೆ ತಿಳಿಸಿದ್ದರು ಕೊನೆಯಲ್ಲಿ ಶ್ರೀ ರೇವಣಸಿದ್ದೇಶ್ ಜಿ ಎಸ್ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಮಾವಿನಕುರ್ವಾ ಹೋಬಳಿ ರವರು ಸರ್ವರನ್ನು ವಂದಿಸಿದರು ಕುಮಾರಿ ಲಕ್ಷಿ ದಳವಾಯಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಹೊನ್ನಾವರ ಗಜಾಲ್ ಶೇಕ್ ಬಿ ಟಿ ಎಮ್ ಆತ್ಮ ಯೋಜನೆ ನಾಗಪ್ಪ ಕೊಟ್ಟುರ್ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: