May 18, 2024

Bhavana Tv

Its Your Channel

ಸಾಹಿತಿ, ಕೊಂಕಣ ರೈಲ್ವೆ ಅಧಿಕಾರಿ ಡಾ. ಸುರೇಶ್ ನಾಯ್ಕ ನಿಧನ

ಹೊನ್ನಾವರ: ಡಾ. ಸುರೇಶ್ ನಾಯಕ ಎಂದಾಗ ನಮಗೆ ತಟ್ಟನೆ ನೆನಪಾಗುವುದು ಯಶವಂತ ಚಿತ್ತಾಲರ ಬದುಕು’ಬರಹದ ಹರಿಕಾರ ಕೊಂಕಣ ರೈಲ್ವೆ ಅಧಿಕಾರಿಯಾಗಿದ್ದು ಕೊಂಡು ಸಾಹಿತ್ಯ ತಮ್ಮ ಬದುಕು ಉಸಿರು ಎನ್ನುತ್ತಲೇ ಪ್ರಯಾಣದ ವೇಳೆಯಲ್ಲಿ ಪುಸ್ತಕವನ್ನು ತಮ್ಮ ಸೂಟ್ಕೇಸ್ ನಲ್ಲಿ ಹಾಕಿಕೊಂಡೆ ಬಿಡುವಿನ ಸಮಯದಲ್ಲಿ ಸಾಹಿತ್ಯವಲಯದಲ್ಲಿ ಗುರುತಿಸಿಕೊಂಡವರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿತು ಅಷ್ಟಕ್ಕೇ ಸುಮ್ಮನಾಗದ ಸುರೇಶ್ ನಾಯಕ್ ಸಂಶೋಧನಾ ದೀಪ, ಅನನ್ಯ ಕಾದಂಬರಿಕಾರ ಯಶವಂತ ಚಿತ್ತಾಲ್, ಕನಕನ ತಲ್ಲಣಗಳು, ಹೊಳೆಸಾಲು ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರತಿಯನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ್ದಾರೆ.ತಮ್ಮ ತಂದೆಯ ಹೆಸರಿನಲ್ಲಿ ಶ್ರೀ ನಾರಾಯಣ ಸಾಹಿತ್ಯಕ-ಸಾಂಸ್ಕೃತಿಕ ಪ್ರತಿಷ್ಠಾನ’ವನ್ನು ಸ್ಥಾಪಿಸಿಕೊಂಡು ಅದರ ಮೂಲಕ ಜಾನಪದ ಯಕ್ಷಗಾನ ಸಾಹಿತ್ಯಕ ಚರ್ಚೆ ಕಮ್ಮಟವನ್ನು ಏರ್ಪಡಿಸಿ ಸಾಹಿತ್ಯದ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು.ಡಾಕ್ಟರ್ ಸೈಯದ್ ಜಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ತಮ್ಮ ತೀಕ್ಷ್ಣ ವಿಮರ್ಶೆ ಮೂಲಕ ಬಹುಬೇಗ ನಾಡಿಗೆ ಪರಿಚಿತರಾದವರು. ಅವರ ಪತ್ನಿ ಸುವರ್ಣ ಮತ್ತು ಮಕ್ಕಳಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿ ದೇವರು ಕರುಣಿಸಲಿ ಎಂಬ ಪ್ರಾರ್ಥನೆ.

error: