May 18, 2024

Bhavana Tv

Its Your Channel

ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಪ್ರಾಸ್ತಾವಿಕ ಅಧಿಕಾರಿಯಾಗಿ ರೂಪಾ ನಾಯ್ಕ ನೇಮಕ

ಭಟ್ಕಳ : ನಾಮಧಾರಿಯ ಹೆಮ್ಮೆಯ ಕುವರಿ ಉತ್ತರಕನ್ನಡ ಜಿಲ್ಲೆಯ ಸುಪುತ್ರಿಯಾದ ಶ್ರೀಮತಿ ರೂಪ ಶಿವಪ್ಪ ನಾಯ್ಕ ಇವರು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಪ್ರಾಸ್ತಾವಿಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಮೂಲತಹ ಅಂಕೋಲದ ಪುರಲಕ್ಕಿ ಬೇಣದ ನಿವಾಸಿಯಾದ ಇವರು ಸದ್ಯ ಗದಗ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು ಕರ್ನಾಟಕದಿಂದ ಆಯ್ಕೆಯಾದ ಪ್ರಥಮ ಜಿಲ್ಲಾ ನ್ಯಾಯಾಧೀಶರಾಗಿದ್ದಾರೆ. ಮಾನವ ಹಕ್ಕು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದ ಇವರು ರಾಷ್ಟ್ರಮಟ್ಟದದಲ್ಲಿ ೪೦ ಐ.ಎ.ಎಸ್ ,ಐಪಿ.ಎಸ್ ಅಭ್ಯರ್ಥಿಗಳ ಎದುರು ಪೈಪೋಟಿ ನೀಡಿ ಸ್ವರ್ಧಾತ್ಮಕ ಪರೀಕ್ಷೆ ಯಲ್ಲಿ ಮೊದಲ ಶ್ರೇಣೆಯಲ್ಲಿ ಉತ್ತೀರ್ಣಗೊಂಡು ರಾಜ್ಯದಲ್ಲಿಯೇ ಯಾರೂ ಮಾಡದ ಸಾಧನೆ ಮಾಡಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಪ್ರಾಸ್ತವಿಕ ಅಧಿಕಾರಿಗಾಗಿ ಅಯ್ಕೆಯಾಗುವುದರ ಮೂಲಕ ನಮ್ಮ ಜಿಲ್ಲೆಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾರೆ. ಇವರು ಅಂಕೋಲಾದ ದಿವಂಗತ ಶಿವಪ್ಪ ನಾರಯಣ ಹಾಗೂ ದಿ. ರಮಾಬಾಯಿ ದಂಪತಿಗಳ ಪುತ್ರಿಯಾಗಿದ್ದು ಇವರ ಪ್ರಾಥಮಿಕ ಶಿಕ್ಷಣ ಕಾರವಾರದ ಹಿಂದೂ ಹೈಸ್ಕೂಲಿನಲ್ಲಿ ಪಡೆದು ಪ್ರೌಢ ಶಿಕ್ಷಣವನ್ನು ಅಂಕೋಲಾದ ವಿ.ಕೆ.ಗಲ್ರ‍್ಸ್ ಹೈಸ್ಕೂಲಿನಲ್ಲಿ ಹಾಗೂ ಪದವಿಯನ್ನು ಅಂಕೋಲಾದ ಬಿ.ಸಿ. ಕಾಲೇಜಿನಲ್ಲಿ ಪಡೆದಿರುತ್ತಾರೆ. ಸಿರಸಿಯ ಎಂ.ಇ.ಎಸ್. ಕಾಲೇಜಿನಲ್ಲಿ ಎಲ್.ಎಲ್.ಬಿ. ಪದವಿಯನ್ನು ಪಡೆದು ಸಿರಸಿ ನ್ಯಾಯಾಲಯದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಆರಂಬಿಸಿ ನಂತರ ಧಾರವಾಡದಲ್ಲಿ ವಕೀಲ ವೃತ್ತಿಯನ್ನು ಮುಂದುವರಿಸಿ ತನ್ನ ಸಂಸಾರಿಕ ಜೀವನದಲ್ಲಿ ಸತತ ಪರಿಶ್ರಮದಿಂದ ಸುಮಾರು ೨೫ ವರ್ಷಗಳ ಹಿಂದೆ ನ್ಯಾಯಾದೀಶೆಯಾಗಿ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ. ಇವರ ಪತಿ ಜಿ.ಜಿ.ನಾಯ್ಕ ಮೂಲತಹ ಕುಮಟಾದ ಹೆಗಡೆಯವರಾಗಿದ್ದು ಸಿರಸಿಯ ಲ್ಲಿ ಸಹಾಯಕ ಸಂರಕ್ಷಣಾಧಿಕಾರಿಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪುತ್ರಿಯರಾದ ಎಚ್.ಜೆ.ಶಿಲ್ಪಾ ಸಿವಿಲ್ ನ್ಯಾಯಾದೀಶೆಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇನೋರ್ವ ಪುತ್ರಿ ಎಚ್.ಜಿ. ಶ್ರೇಯಾ ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾರೆ. ಇವರ ಅಯ್ಕೆಗೆ ಜಿಲ್ಲೆಯ ಹಾಗೂ ರಾಜ್ಯದ ನಾಮಧಾರಿ ಬಂದುಗಳು , ಹಲವು ಸಂಘ ಸಂಸ್ಥೆಗಳು ಹಾಗೂ ಬಂಧು ಬಳಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

error: