April 26, 2024

Bhavana Tv

Its Your Channel

೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾ.೨ರಿಂದ ೨ನೇ ಹಂತದ ಕೋವಿಡ್ ಲಸಿಕೆ ಪ್ರಾರಂಭವಾಗಿದೆ

ಭಟ್ಕಳ : ಕೋವಿಡ್ ೨ನೇ ಹಂತದ ಲಸಿಕೆ ಕಾರ್ಯಕ್ರಮ ತಾಲೂಕಿನಲ್ಲಿ ಮಾ.೨ರಿಂದ ಪ್ರಾರಂಭವಾಗಿದ್ದು. ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ೪೫ರಿಂದ ೫೯ ವಯಸ್ಸಿನ ಒಳಗಿನ ದೀರ್ಘ ಕಾಲದ ಖಾಯಿಲೆಯಿಂದ ಬಳಲುತ್ತೀರುವ ನಾಗರಿಕರು ಹಾಗೂ ಕೋವಿಡ್ ಸಂದರ್ಬದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿ ಲಸಿಕೆ ಪಡೆಯದೇ ಇರುವ ಕರೋನಾ ವಾರಿರ್ಯಸ್ಸಗೆ ೨ನೇ ಹಂತದಲ್ಲಿ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ತಾಲೂಕಾ ಆಸ್ಪತ್ರೆಯಲ್ಲಿ ಪ್ರತಿದಿವಸ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಾದ ಶಿರಾಲಿ, ಮುರ್ಡೇಶ್ವರ, ಬೆಳ್ಕೆ ಹಾಗೂ ಬೈಲೂರುನಲ್ಲಿ ಪ್ರತಿ ಸೋಮವಾರ, ಬುಧವಾರ. ಶುಕ್ರವಾರ ಹಾಗೂ ಶನಿವಾರ ಲಸಿಕೆ ನೀಡಲಾಗುತ್ತದೆ. ಲಸಿಕೆ ಸಂಪೂರ್ಣ ಉಚಿತವಾಗಿದ್ದು, ದೀರ್ಘಕಾಲದ ಖಾಯಿಲೆಯಿಂದ ಬಳಲುತ್ತೀರುವವರು ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕಾಗಿರುತ್ತದೆ. ಲಸಿಕೆ ಪಡೆಯಲು ಇಚ್ಛಿಸುವವರು ಕೋವಿನ್ ತಂತ್ರಾAಶದಲ್ಲಿ ನೊಂದಣಿ ಮಾಡಿಕೊಳ್ಳಬಹುದು ಅಥವಾ ನೇರವಾಗಿ ಲಸಿಕೆ ಕೇಂದ್ರಕ್ಕೆಬAದು ನೊಂದಾಯಿಸಿ ಲಸಿಕೆ ಪಡೆಯಬಹುದು ಎಂದು ಭಟ್ಕಳ ತಹಶೀಲ್ದಾರ ರವೀಚಂದ್ರ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: