April 29, 2024

Bhavana Tv

Its Your Channel

ಅದ್ದೂರಿಯಾಗಿ ನಡೆದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ

ಕಿಕ್ಕೇರಿ:- ಕೋವಿಡ್ ಕಾಣದಿಂದ ಎರಡು ವರ್ಷದಳಿಂದ ನಿಂತು ಹೋಗಿದ್ದ ಲಕ್ಷ್ಮೀದೇವೆ (ಆನೆಗೊಳಮ್ಮ) ಜಾತ್ರಾ ಮಹೋತ್ಸವ ಹಾಗೂ ರಂಗ ಕುಣಿತ, ವೀರಗಾಸೆ, ಸೇರಿದಂತೆ ಹಲವು ಅದ್ದೂರಿಯಾಗಿ ನಡೆಯಿತು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಬೋಳಮಾರನಹಳ್ಳಿ, ಆನೆಗೊಳ ಗ್ರಾಮಗಳ ಗ್ರಾಮ ದೇವತೆಯಾದ ಲಕ್ಷ್ಮೀದೇವಿ ಅಮ್ಮನವರ ಜಾತ್ರಾ ಮಹೋತ್ಸದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು ಅಲ್ಲದೇ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆಯೊಂದಿಗೆ ಪೂಜೆ ಪುರಸ್ಕಾರ ನೆರವೇರಿತು..

ಅಲ್ಲದೆ ಒಂದು ಚಿಕ್ಕ ಹೆಣ್ಣು ಮಗುವಿನ ಮೇಲೆ ಕಳಸವನ್ನು ಇಟ್ಟು ಎರಡು ಗಂಟೆಗಳ ಕಾಲ ನೃತ್ಯ ಮಾಡುವ ಮೂಲಕ ಪ್ರತಿ ದೇವಾಲಯ ಬಳಿ ಒಂದೇ ವೇಗದಲ್ಲಿ ಮುಂದೆ ಮತ್ತು ಅದೇ ವೇಗದಲ್ಲಿ ಹಿಂದೆ ಚಲಿಸುವುದು ಇಲ್ಲಿಯ ದೇವರ ಮಹಿಮೆ ಎಂದು ಸ್ಥಳೀಯ ನಾಗರಿಕರ ನಂಬಿಕೆಯಾಗಿದೆ ಎನ್ನುತ್ತಾರೆ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷ ಬಿ.ಎಂ ಕಿರಣ್

ಹೊಟ್ಟೆ ಪಾಡಿಗಾಗಿ ಬೆಂಗಳೂರಿನಲ್ಲಿ ಸೇರಿರುವ ಬೋಳಮಾರನಹಳ್ಳಿ ಗ್ರಾಮದ ಯುವಕರ ತಂಡ ಹಬ್ಬದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು ಗ್ರಾಮ ಪ್ರತಿ ಬೀದಿಗಳಿಗೆ ದೀಪಾಲಂಕಾರಗೊಳಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅನ್ನ ಸಂತರ್ಪಣೆ, ಅಲ್ಲದೇ ಲಕ್ಷ್ಮೀ ದೇವಿ ದೇವರ ವಿಗ್ರಹಕ್ಕೆ ಬಿ.ಎಂ ಕಿರಣ್, ಸೇರಿದಂತೆ ಹಲವಾರು ದಾನಿಗಳ ಸಹಾಯದೊಂದಿಗೆ ೧೪ ಕೆ.ಜಿಯ ಬೆಳ್ಳಿ ಕೀರಿಟವನ್ನು ಈಗಾಗಲೇ ಮಾಡಿಸಲಾಗಿದೆ ಎಂದು ರಂಗ ಭೂಮಿಕಲಾವಿದ ಜಯದೇವ ಆಸ್ಪತ್ರೆಯ ಶ್ರೀನಿವಾಸ್ ತಿಳಿಸಿದರು.

ಕರ್ನಾಟಕ ಮಹಾ ಮಂಡಲಿಯ ನಿರ್ದೇಶಕ ಚೋಳೆನಹಳ್ಳಿ ಪುಟ್ಟಸ್ವಾಮಿ ಗೌಡ್ರ, ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷ ಬಿ.ಎಂ ಕಿರಣ್, ರಂಗಭೂಮಿ ಕಲಾವಿದ ಶ್ರೀನಿವಾಸ್, ಜಯದೇವ ಆಸ್ಪತ್ರೆ ಶಿವಲಿಂಗ ಸೇರಿದಂತೆ ರಂಗ ಕುಣಿಯುವ ಮೂಲ ಗ್ರಾಮಿಣ ಭಾಗದ ಸಂಸ್ಕೃತಿಗೆ ಮೆರಗು ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮಾರಟ ಮಹಾ ಮಂಡಲಿಯ ನಿರ್ದೇಶಕ ಪುಟ್ಟಸ್ವಾಮಿಗೌಡ, ಶ್ರೀ ಸುಬ್ರಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷ ಬಿ.ಎಂ ಕಿರಣ್, ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಬಿ ಎಸ್ ಮಂಜುನಾಥ್ ,ಬಿ ಎಸ್ ಪುಟ್ಟೇಗೌಡ ರಾಮಕೃಷ್ಣೇಗೌಡ ಚಂದ್ರಶೇಖರ್,ಚಿಕ್ಕ ಲಿಂಗೇಗೌಡ ಅಣ್ಣಯ್ಯಸ್ವಾಮಿ , ಪುಟ್ಟೆಲಿಂಗೇಗೌಡ, ಗುರುಲಿಂಗೇಗೌಡ, ನರಸೇಗೌಡ, ಬಿ ಕೆ ಶ್ರೀನಿವಾಸ್, ಶಿವಲಿಂಗ, ಬಸವೇಗೌಡ ಪೂಜಾರಿ ಮಂಜುನಾಥ್ ಸೇರಿದಂತೆ ಸಾವಿರಾರು ಭಕ್ತಾದಿಗಳು ಇದ್ದರು

ವರದಿ ಶಂಭು ಕಿಕ್ಕೇರಿ

error: