May 14, 2024

Bhavana Tv

Its Your Channel

ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬಡ್ಡಿ ರಹಿತ ಸಾಲದ ಚೆಕ್ ವಿತರಣೆ

ಕಿಕ್ಕೇರಿ: ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮಹಿಳಾ ಮತ್ತು ಪುರುಷರ ಸ್ವಸಹಕಾರ ಸಂಘ ಪ್ರತಿನಿಧಿಗಳಿಗೆ ಬಡ್ಡಿ ರಹಿತ ಸಾಲದ ಚೆಕ್ ಗಳನ್ನು ವಿತರಣೆ ಮಾಡಲಾಯಿತು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಆನೆಗೊಳ ಕೃಷಿ ಪತ್ತಿನ ಸಹಕಾರ ಸಂಘದಿAದ ಸುಮಾರು 40 ಮಹಿಳಾ ಮತ್ತು ಪುರುಷರಿಗೆ ಸಂಘದ ಅಧ್ಯಕ್ಷರಾದ ಚಿಕ್ಕತರಹಳ್ಳಿ ಮಧು ಮತ್ತು ಸರ್ವ ಸದಸ್ಯರ ನೇತೃತ್ವದಲ್ಲಿ ಚೆಕ್ ಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಲಿಯ ನಿರ್ದೇಶಕ ಸಿ.ಎನ್ ಪುಟ್ಟಸ್ವಾಮಿಗೌಡ ಮಾತನಾಡಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಗತಿ ಸಾಧಿಸಲು ಸಹಕಾರ ಬ್ಯಾಂಕುಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.ಸಹಕಾರ ಬ್ಯಾಂಕುಗಳು ಇಂದು ರೈತನ ಬೆನ್ನಲುಬಾಗಿ ನಿಂತಿವೆ.ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷದ ರೂ ಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲದ ವ್ಯವಸ್ಥೆ ಇರುವುದರಿಂದ ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು ಅಲ್ಲದೆ ನಮ್ಮ ಪೆಟ್ರೇಶನ್ ವತಿಯಿಂದ ನಾನು ನಿರ್ದೆಶಕನಾಗಿ ಆಯ್ಕೆಯಾದ ಮೇಲೆ ಈಗಾಗಲೇ 3. ಲಕ್ಷವನ್ನು ಈ ಸಂಘಕ್ಕೆ ನೀಡಿದ್ದೇ ಇನ್ನೂ ಸಂಘವನ್ನು ಅಭಿವೃದ್ಧಿ ಪಡಿಸಲು 5 ಲಕ್ಷ ಹಣವನ್ನು ನೀಡಲಾಗುವುದು ಎಂದು ತಿಳಿಸಿದರು.

ನಂತರ ಮಂಡ್ಯ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಆಶೋಕ್ ಮಾತನಾಡಿ ಸಾಲ ಪಡೆದವರು ಸಕಾಲಕ್ಕೆ ಮರುಪಾವತಿ ಮಾಡುವುದರ ಮೂಲಕ ಸಹಕಾರ ಬ್ಯಾಂಕುಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು ಅಲ್ಲದೆ ಇನ್ನೂ ಎರಡು ತಿಂಗಳಲ್ಲಿ ಆನೆಗೊಳ ಗ್ರಾಮದಲ್ಲಿ ನೂತನ ಬ್ಯಾಂಕ್ ಉದ್ಘಾಟನೆ ಆಗಲಿದೆ ಎಲ್ಲಾ ರೈತರು ಡಿ.ಸಿ.ಸಿ ಬ್ಯಾಂಕ್ ನಲ್ಲಿ ವ್ಯವಹಾರ ಮಾಡಿ ಸಂಘವನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸಿವಂತೆ ತಿಳಿಸಿದರು..

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಬಿ.ಎಸ್ ಮಂಜುನಾಥ್, ನಿವೃತ್ತ ಶಿಕ್ಷಕ ರಾಮೇಗೌಡ, ಮುಖಂಡರಾದ ಶಿಶುಪಾಲು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ನಾಗಮ್ಮ, ಉದಯ್ ಶಂಕರ್, ಡಾಣಶೇಖರ್, ಕುಮಾರ್, ನಾಗರಾಜು, ಮಹಾಲಿಂಗೇಗೌಡ್ರ, ಬಾಲಚಂದ್ರ, ಲತಾ, ರಮೇಶ್, ರಾಜು, ಬ್ಯಾಂಕ್ ಪ್ರತಿನಿಧಿ ರಘು, ಕಾರ್ಯದರ್ಶಿ ಕುಮಾರ್ ಸೇರಿದಂತೆ ಮತ್ತಿತ್ತರ ಮುಖಂಡರುಗಳು ಇದ್ದರು.

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: