May 13, 2024

Bhavana Tv

Its Your Channel

ಶಂಭುಲಿOಗೇಶ್ವರ ಮತ್ತು ಶ್ರೀ ಸೋಮೇಶ್ವರ ದೇವಾಲಯಗಳಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆ, ದೇವಸ್ಥಾನಕ್ಕೆ ಸಂಬOಧಿಸಿದOತೆ ತಾಲೂಕು ಆಡಳಿತದ ಬೇಜವಾಬ್ಧಾರಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಸೂಕ್ತ ಮೂಲಭೂತ ಸೌಕರ್ಯಕ್ಕೆ ಆಗ್ರಹ

ಮಂಡ್ಯ: ಬಯಲುಸೀಮೆಯ ಕುಕ್ಕೆಸುಬ್ರಹ್ಮಣ್ಯ ಎಂದೇ ಹೆಸರು ಗಳಿಸಿರುವ ಸಾಸಲು ಕ್ಷೇತ್ರದ ಶ್ರೀ ಶಂಭುಲಿoಗೇಶ್ವರ ಮತ್ತು ಶ್ರೀ ಸೋಮೇಶ್ವರ ದೇವಾಲಯಗಳಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ ದೇವಸ್ಥಾನಕ್ಕೆ ಸಂಬoಧಿಸಿದoತೆ ತಾಲೂಕು ಆಡಳಿತದ ಬೇಜವಾಬ್ಧಾರಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಸೂಕ್ತ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿದ್ದಾರೆ….

ರಾಜ್ಯದಲ್ಲಿಯೇ ಎರಡನೇ ಬಯಲುಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂದೇ ಖ್ಯಾತಿ ಪಡೆದುಕೊಂಡು ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸುವ ಪುಣ್ಯಕ್ಷೇತ್ರವಾದ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ನೆಲೆಸಿರುವ ಶ್ರೀ ಶಂಭುಲಿAಗೇಶ್ವರ ಮತ್ತು ಶ್ರೀ ಸೋಮೇಶ್ವರ ಅವಳಿ ದೇವಾಲಯಗಳು ಕನಿಷ್ಠ ಮೂಲಭೂತ ಸೌಕರ್ಯವಿಲ್ಲದೆ ಅಭಿವೃದ್ಧಿಯನ್ನು ಕಾಣದಿದ್ದರೂ ಈ ಪುಣ್ಯ ಕ್ಷೇತ್ರಕ್ಕೆ ಕಾರ್ತಿಕಮಾಸದಲ್ಲಿ ಮಾತ್ರ ಹೊರ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರವೇ ಹರಿದು ಬರುತ್ತಿದೆ…

ದೇವಾಲಯದ ಮುಖ್ಯ ದ್ವಾರದ ಕಮಾನುಗೋಪುರವು ಹಲವು ವರ್ಷಗಳಿಂದ ಶಿಥಿಲಗೊಂಡು ಕುಸಿದು ಬೀಳುವ ಸ್ಥಿತಿಯಲ್ಲಿದ್ದರೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಕ್ಷೇತ್ರದ ಆದಾಯವನ್ನು ಪೆಟ್ಟಿಗೆಗೆ ತುಂಬಿಕೊAಡು ನಮಗೂ ಕ್ಷೇತ್ರದ ಸಮಸ್ಯೆಗಳಿಗೂ ಸಂಬoಧವಿಲ್ಲವೆoಬoತೆ ಕೈಕಟ್ಟಿ ಕುಳಿತಿದ್ದಾರೆ. ಶ್ರೀ ಸೋಮೇಶ್ವರ ದೇವಾಲಯದ ಮುಖ್ಯ ದ್ವಾರದ ಮುಂದೆ ಕಸದರಾಶಿ ಗಬ್ಬೆದ್ದು ನಾರುತ್ತಿದೆ.. ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿ ಮೂರು ವರ್ಷಕ್ಕೂ ಹೆಚ್ಚು ಸಮಯ ಕಳೆದರೂ ಶೌಚಾಲಯದ ಬಾಗಿಲು ತೆಗಿಸಿ ಭಕ್ತಾದಿಗಳಿಗೆ ಬಾಗಿಲು ತೆರೆಯುವ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ…

ಎಲ್ಲಕ್ಕಿಂತ ಪ್ರಮುಖವಾಗಿ ಶ್ರೀ ಕ್ಷೇತ್ರದ ಹುತ್ತದ ಮಣ್ಣನ್ನು ಹಚ್ಚಿಕೊಂಡು ದೇವಾಲಯದ ಆಗಮಿಸುವ ಭಕ್ತಾದಿಗಳು ಕಲ್ಯಾಣಿಯಲ್ಲಿ ಸ್ನಾನ ಮಾಡಿ ಶಂಭುಲಿAಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಸಾಕು ಕಜ್ಜಿ, ತುರಿಕೆ, ನಾಗರು ಮುಂತಾದ ಗಾಯಗಳು, ಸರ್ಪ ದೋಷಕ್ಕೆ ಸಂಬoಧಿಸಿದ ರೋಗ-ರುಜಿನಗಳು ಸಂಪೂರ್ಣವಾಗಿ ಗುಣಮುಖವಾಗುತ್ತದೆ ಎಂದು ತಿಳಿದಿರುವ ಭಕ್ತಾದಿಗಳ ಪುರಾಣ-ಪ್ರಸಿದ್ಧವಾದ ಕಲ್ಯಾಣಿಯು ಗಬ್ಬೆದ್ದು ನಾರುತ್ತಿದೆ… ಮಹಿಳಾ ಭಕ್ತಾದಿಗಳು ಕಲ್ಯಾಣಿಯಲ್ಲಿ ಸ್ನಾನ ಮಾಡಿ ತಮ್ಮ ಬಟ್ಟೆ ಬದಲಾಯಿಸುವುದಕ್ಕೆ ಸಾವಿರಾರು ಮಹಿಳಾ ಭಕ್ತಾದಿಗಳಿಗೆ ಒಂದೇ ಒಂದು ಸಾಮೂಹಿಕ ತಗಡಿನ ಕೊಠಡಿ ಇದರಿಂದಾಗಿ ಮಹಿಳಾ ಭಕ್ತಾದಿಗಳು ಮುಜುಗರದಿಂದ ತಮ್ಮ ಸಮವಸ್ತ್ರ ಗಳಿಂದಲೇ ಮರೆ ಮಾಡಿಕೊಂಡು ಬಟ್ಟೆಗಳನ್ನು ಬದಲಾಯಿಸುವ ಸಂದರ್ಭವು ನಿರ್ಮಾಣಗೊಂಡಿದ್ದರೂ ತಾಲೂಕು ಆಡಳಿತ ಮಾತ್ರ ತಲೆಕೆಡಿಸಿಕೊಳ್ಳದೆ ಗಾಢವಾದ ನಿದ್ರೆಯಲ್ಲಿರುವುದು ಮಾತ್ರ ಬೇಸರದ ಸಂಗತಿಯಾಗಿದೆ ಎಂದು ಎಂದು ಗ್ರಾಮಸ್ಥರಾದ ಮಹದೇವ್ ವಿಷಾಧ ವ್ಯಕ್ತಪಡಿಸಿದರು…

ಪುರಾಣ ಪ್ರಸಿದ್ಧ ಸಾಸಲು ಶಂಭುಲಿAಗೇಶ್ವರ ದೇವಾಲಯದ ವರ್ಷಕ್ಕೆ ಅರ್ಧ ಕೋಟಿಗೂ ಹೆಚ್ಚು ಆದಾಯವನ್ನು ತಾಲೂಕು ಆಡಳಿತಕ್ಕೆ ತಂದುಕೊಟ್ಟರೂ ಈ ಪುಣ್ಯಕ್ಷೇತ್ರದ ದೇವಾಲಯಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಇಂದಿನ ದಿನಮಾನದ ಕೋರೋನ ಸಂಕಷ್ಠದ ಸ್ಥಿತಿಯಲ್ಲಿ ಹಾಗೂ ಕಾರ್ತಿಕ ಮಾಸದ ಮುಂದಿನ ದಿನಗಳಲ್ಲಿ ಭಕ್ತಸಾಗರವೇ ಶ್ರೀ ಕ್ಷೇತ್ರಕ್ಕೆ ಹರಿದು ಬರುವ
ಹಿನ್ನೆಲೆಯಲ್ಲಿ ಹೊರಜಿಲ್ಲೆಗಳು ಮತ್ತು ಬೇರೆ ಬೇರೆ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸುವ
ಹಿನ್ನೆಲೆಯಲ್ಲಿ ಕೋರೋನಾ ಜಾಗೃತಿ ನಾಮಫಲಕ ಅಳವಡಿಸಬೇಕು.. ದೇವಸ್ಥಾನದ ಸುತ್ತಮುತ್ತಲಿನಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳು ಹಾಗೂ ಗಬ್ಬೆದ್ದು ನಾರುತ್ತಿರುವ ತ್ಯಾಜ್ಯವನ್ನು ತೆಗೆಸಿ ಸ್ವಚ್ಛಗೊಳಿಸಬೇಕು..ತಾಲೂಕು ಆಡಳಿತ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕು..ಶ್ರೀ ಕ್ಷೇತ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ನಾಗಕ್ಷೇತ್ರವಾದ ಸುಬ್ರಹ್ಮಣ್ಯದ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು..
ಪ್ರವಾಸೋದ್ಯಮ ಇಲಾಖೆಯು ಒಂದು ಯಾತ್ರಿನಿವಾಸವನ್ನು ನಿರ್ಮಿಸಿ ಕೈತೊಳೆದುಕೊಳ್ಳಲು ಮುಂದಾಗುವ ಬದಲಿಗೆ ಸಾಸಲು ಕ್ಷೇತ್ರದ ಅಭಿವೃದ್ಧಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರಾದ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದರು…

ಈ ಸಂದರ್ಭದಲ್ಲಿ ಸಾಸಲು ಗ್ರಾಮಸ್ಥರು ಮತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾದಿಗಳು ಉಪಸ್ಥಿತರಿದ್ದರು…

ವರದಿ. ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: