May 14, 2024

Bhavana Tv

Its Your Channel

ಡಾ.ಬಿ.ಆರ್.ಅಂಬೇಡ್ಕರ್ ಅವರ ೬೪ನೇ ಪರಿನಿಬ್ಬಾಣ ದಿನ

ಕೃಷ್ಣರಾಜಪೇಟೆ ; ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ, ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೪ನೇ ಪರಿನಿಬ್ಬಾಣ ದಿನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು …

ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆಯ ಹಿರಿಯ ಸದಸ್ಯ ದಲಿತ ಮುಖಂಡ ಡಿ.ಪ್ರೇಮಕುಮಾರ್ ಮಾತನಾಡಿ ಶೋಷಿತ ವರ್ಗಗಳ ಬೆಳಕಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ರಚಿಸಿಕೊಡುವ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಕಾಣಿಕೆಯನ್ನು ನೀಡಿದ್ದಾರೆ. ಅಂಬೇಡ್ಕರ್ ಅವರ ಆಶಯದಂತೆ ತುಳಿತಕ್ಕೊಳಗಾದ ಜನರು ಶಿಕ್ಷಣದ ಶಕ್ತಿಯ ಮೂಲಕ ಸಂಘಟಿತರಾಗಿ ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಪ್ರೇಮಕುಮಾರ್ ಕರೆ ನೀಡಿದರು ….

ಪುರಸಭೆ ಸದಸ್ಯರಾದ ಕೆ.ಎಸ್.ಸಂತೋಷ್ ಕುಮಾರ್, ಸೌಭಾಗ್ಯ ಉಮೇಶ್, ಕೆ.ಆರ್.ರವೀಂದ್ರಬಾಬು, ದಲಿತ ಮುಖಂಡರಾದ ರಮೇಶ್, ಶಿವಪ್ರಕಾಶ್, ನಾಗರಾಜು, ಕಾಮನಹಳ್ಳಿ ಮಂಜುನಾಥ್ ಮತ್ತು ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು ಬರಹ, ಸಾರ್ಥಕ ಜೀವನ, ತುಳಿತಕ್ಕೊಳಗಾದ ಜನರ ಸಮಸ್ಯೆಗಳ ನಿವಾರಣೆಗೆ ಹೋರಾಟ ನಡೆಸಿ ಸಂವಿಧಾನದ ಶಕ್ತಿಯ ಮೂಲಕ ಶಾಶ್ವತವಾದ ಪರಿಹಾರವನ್ನು ದೊರಕಿಸಿಕೊಟ್ಟಿದ್ದಾರೆ. ಆದ್ದರಿಂದ ಸಂವಿಧಾನದ ಆಶಯಗಳ ಈಡೇರಿಕೆಗಾಗಿ ಎಲ್ಲರೂ ಒಂದಾಗಿ ದುಡಿಯಬೇಕು ಎಂದು ಮನವಿ ಮಾಡಿದರು…

ಕೃಷ್ಣರಾಜಪೇಟೆ ಪಟ್ಟಣದ ಅಂಬೇಡ್ಕರ್ ನಗರ ಬಡಾವಣೆಯ ದಲಿತ ಬಂಧುಗಳು, ಮಹಿಳೆಯರು ಮತ್ತು ಮಕ್ಕಳು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ವಿವಿಧ ಹೂವುಗಳಿಂದ ಅಲಂಕರಿಸಿ ತೆರೆದ ವಾಹನದಲ್ಲಿ ಇರಿಸಿ ಮೇಣದ ಬತ್ತಿಗಳನ್ನು ಹಚ್ಚಿಸಿ ಕೈಯ್ಯಲ್ಲಿ ಹಿಡಿದುಕೊಂಡು ಮೆರವಣಿಗೆ ನಡೆಸಿ ಡಾ.ಅಂಬೇಡ್ಕರ್ ಅವರಿಗೆ ಭಕ್ತಿ ನಮನ ಸಲ್ಲಿಸಿದರು …

ವರದಿ. ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ . ಮಂಡ್ಯ.

error: