May 13, 2024

Bhavana Tv

Its Your Channel

ನಾಗಕ್ಷೇತ್ರವಾದ ಶ್ರೀ ಸೋಮೇಶ್ವರ ಮತ್ತು ಶಂಭುಲಿOಗೇಶ್ವರ ಕ್ಷೇತ್ರದಲ್ಲಿ ಕಾರ್ತೀಕ ಸೋಮವಾರದ ಅಂಗವಾಗಿ ಹರಿದು ಬಂದ ಭಕ್ತಸಾಗರ

ಮಂಡ್ಯ: ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧವಾಗಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದ ನಾಗಕ್ಷೇತ್ರವಾದ ಶ್ರೀ ಸೋಮೇಶ್ವರ ಮತ್ತು ಶಂಭುಲಿoಗೇಶ್ವರ ಕ್ಷೇತ್ರದಲ್ಲಿ ಕಾರ್ತೀಕ ಸೋಮವಾರದ ಅಂಗವಾಗಿ ಹರಿದು ಬಂದ ಭಕ್ತಸಾಗರ. ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿರುವ ಭಕ್ತಾದಿಗಳು.
ಸಾಸಲಿನ ಪುಣ್ಯ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಿ ಪುಳಕಿತರಾದ ಭಕ್ತವೃಂಧ, ನಾಗರು, ಕಜ್ಜಿ ಸೇರಿದಂತೆ ವಿವಿಧ ಚರ್ಮರೋಗಗಳ ನಿವಾರಣೆಗೆ ಪವಿತ್ರ ಗಂಗಾಜಲವಾಗಿರುವ ಔಷಧೀಯ ಗುಣವುಳ್ಳ ಕಲ್ಯಾಣಿಯ ನೀರು.
ಸರದಿಯ ಸಾಲಿನಲ್ಲಿ ನಿಂತು ಮಾಸ್ಕ್ ಧರಿಸಿಕೊಂಡು ಶ್ರೀ ಸೋಮೇಶ್ವರ ಹಾಗೂ ಶ್ರೀ ಶಂಭುಲಿAಗೇಶ್ವರ ಸ್ವಾಮಿಯ ದರ್ಶನ ಮಾಡುತ್ತಿರುವ ಸಾವಿರಾರು ಭಕ್ತರು.
ರಾಜ್ಯದ ನಾನಾ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರು ಮುಡಿ ಹರಕೆ ಸಲ್ಲಿಸಿ ಪವಿತ್ರ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಮಾಡಿ ಸಂಭ್ರಮಿಸುತ್ತಿರುವ ದೃಶ್ಯವು ಸರ್ವೇ ಸಾಮಾನ್ಯವಾಗಿತ್ತು.
ಮಾಸ್ಕ್ ಧರಿಸಿಕೊಂಡು ಬರುವ ಭಕ್ತವೃಂದಕ್ಕೆ ದೇವರ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿರುವ ತಾಲೂಕು ಆಡಳಿತ,ಕಿಕ್ಕೇರಿ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನವೀನ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್…
ಉಪತಹಶೀಲ್ದಾರ್ ಲಕ್ಷ್ಮೀಕಾಂತ್ ಅವರ ನೇತೃತ್ವದಲ್ಲಿ ಸುಗಮವಾಗಿ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟಿರುವ ಮುಜರಾಯಿ ಇಲಾಖೆ.
ಸಣ್ಣ ಮಕ್ಕಳಿಗೆ ಹಾಲು ಹಾಗೂ ಕುಡಿಯಲು ನೀರನ್ನು ನೀಡಿ ಅನುಕೂಲ ಕಲ್ಪಿಸುತ್ತಿರುವ ಸಾಸಲು ಗ್ರಾಮಸ್ಥರು. ಶ್ರೀಸೋಮೇಶ್ವರ ಹಾಗೂ ಶ್ರೀ ಶಂಭುಲಿoಗೇಶ್ವರ ದೇವಾಲಯಗಳ ಪ್ರಧಾನ ಅರ್ಚಕರಾದ ಶಂಭುಲಿAಗಪ್ಪ ಅವರಿಂದ ವಿಶೇಷ ಪೂಜೆ ಪುರಸ್ಕಾರಗಳು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: