April 29, 2024

Bhavana Tv

Its Your Channel

ಪ್ರಜಾಪ್ರಭುತ್ವವು ಗಟ್ಟಿಯಾಗಲು, ಸುಭದ್ರ ಸರ್ಕಾರವು ಅಸ್ಥಿತ್ವಕ್ಕೆ ಬರುವ ನಿಟ್ಟಿನಲ್ಲಿ ಮತದಾನದ ಪಾತ್ರವು ನಿರ್ಣಾಯಕವಾಗಿದೆ-ತಹಶೀಲ್ದಾರ್ ಎಂ.ವಿ.ರೂಪ

ಕೆ.ಆರ್.ಪೇಟೆ :- ಪ್ರಜಾಪ್ರಭುತ್ವವು ಗಟ್ಟಿಯಾಗಲು, ಸುಭದ್ರ ಸರ್ಕಾರವು ಅಸ್ಥಿತ್ವಕ್ಕೆ ಬರುವ ನಿಟ್ಟಿನಲ್ಲಿ ಮತದಾನದ ಪಾತ್ರವು ನಿರ್ಣಾಯಕವಾಗಿದೆ. ಆದ್ದರಿಂದ ಮತದಾರ ಬಂಧುಗಳು ಸಂವಿಧಾನವು ನಮಗೆ ವರವಾಗಿ ನೀಡಿರುವ ಮತದಾನದ ಹಕ್ಕನ್ನು ಸಮರ್ಥವಾಗಿ ಬಳಸಿಕೊಂಡು ಯೋಗ್ಯರಿಗೆ ಮತವನ್ನು ಚಲಾಯಿಸುವ ಮೂಲಕ ಜನಪರವಾದ ಸರ್ಕಾರವು ಅಸ್ತಿತ್ವಕ್ಕೆ ಬರಲು ಸಂಕಲ್ಪ ಮಾಡಬೇಕು ಎಂದು ತಹಶೀಲ್ದಾರ್ ಎಂ.ವಿ.ರೂಪ ಕರೆ ನೀಡಿದರು .

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಬೂತ್ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿ ಮತದಾನದ ಮಹತ್ವ ಕುರಿತ ಪ್ರಮಾಣವಚನವನ್ನು ಬೋಧನೆ ಮಾಡಿ ಮಾತನಾಡಿದರು.

ಮತದಾನದ ಹಕ್ಕು ಸಂವಿಧಾನವು ನಮಗೆ ನೀಡಿರುವ ಪ್ರಭಲವಾದ ಅಸ್ತ್ರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬರೂ ಆಸೆ ಆಮಿಷಗಳಿಗೆ ಒಳಗಾಗದೇ ಯೋಗ್ಯ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ಜನಪರವಾದ ಸುಭದ್ರ ಸರ್ಕಾರವು ಅಸ್ತಿತ್ವಕ್ಕೆ ಬರಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ ರೂಪ ಮತದಾನದ ಹಕ್ಕನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ದುರುಪಯೋಗ ಮಾಡಿಕೊಳ್ಳದೇ ಯೋಗ್ಯ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ತಹಶೀಲ್ದಾರ್ ರೂಪ ಕರೆ ನೀಡಿದರು..

ಪುರಸಭೆ ಮುಖ್ಯಾಧಿಕಾರಿ ಕುಮಾರ್, ತಾಲೂಕು ಪಂಚಾಯತಿ ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾದ ಸಂದೀಪ್ ಚೆಸ್ಕಾಂ ಎಇಇ ಕೃಷ್ಣ, ಚುನಾವಣಾ ಶಾಖೆಯ ಉಪತಹಶೀಲ್ದಾರ್ ಚಿಕ್ಕಲಕ್ಷ್ಮೀ, ಉಪತಹಶೀಲ್ದಾರ್ ಗಳಾದ ಲಕ್ಷ್ಮೀಕಾಂತ್, ಹಿರಿಯಣ್ಣ, ರಾಜಶ್ವನಿರೀಕ್ಷಕಿ ಚಂದ್ರಕಲಾ, ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷರಾದ ಹರೀಶ್, ಉಧ್ಯಮಿ ನಂದಕುಮಾರ್, ಹಿರಿಯ ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್, ಹರಿಚರಣ್, ಆರ್.ಶ್ರೀನಿವಾಸ್, ಸೈಯ್ಯದ್ ಖಲೀಲ್, ಕೆ.ಪಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ.ಮಂಡ್ಯ

error: