April 29, 2024

Bhavana Tv

Its Your Channel

ರೇವತಿ ನಕ್ಷತ್ರದ ಅಂಗವಾಗಿ ಶ್ರೀಲಕ್ಷ್ಮೀ ಭೂವರಹನಾಥಸ್ವಾಮಿಗೆ ಪಟ್ಟಾಭಿಷೇಕ, ವಿಶೇಷ ಅಭಿಷೇಕ ಹಾಗೂ ಪುಷ್ಪಾಭಿಷೇಕ

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣಪ್ರಸಿದ್ಧ ಪುಣ್ಯಕ್ಷೇತ್ರ ಭೂದೇವಿಸಮೇತನಾಗಿ ನೆಲೆಸಿರುವ ಶ್ರೀಲಕ್ಷ್ಮೀ ಭೂವರಹನಾಥಸ್ವಾಮಿಗೆ ರೇವತಿ ನಕ್ಷತ್ರದ ಅಂಗವಾಗಿ ನಡೆದ ಪಟ್ಟಾಭಿಷೇಕ, ವಿಶೇಷ ಅಭಿಷೇಕ ಹಾಗೂ ಪುಷ್ಪಾಭಿಷೇಕ .
ಅದ್ಬುತವಾದ ನಯನಮನೋಹರ ದೃಶ್ಯವನ್ನು ಕಣ್ತುಂಬಿಕೊAಡ ಭಕ್ತಾದಿಗಳು …

ರೇವತಿ ನಕ್ಷತ್ರದ ಪುಣ್ಯದಿನದಂದು ಕೃಷ್ಣರಾಜಪೇಟೆ ತಾಲ್ಲೂಕಿನ ಭೂವರಹನಾಥ ಕಲ್ಲಹಳ್ಳಿ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು.17 ಅಡಿ ಎತ್ತರದ ಸಾಲಿಗ್ರಾಮ ಕೃಷ್ಣಶಿಲೆಯಲ್ಲಿ ನಿರ್ಮಿಸಿರುವ ಭೂದೇವಿ ಸಮೇತನಾಗಿ ಕುಳಿತಿರುವ ಭೂವರಹನಾಥಸ್ವಾಮಿಯ ಮೂರ್ತಿಯು ದೇಶದಲ್ಲಿಯೇ ವಿಶೇಷವಾಗಿದ್ದು ಅಪರೂಪದ್ದಾಗಿದೆ.

01 ಸಾವಿರ ಲೀಟರ್ ಹಾಲು, 500ಲೀ ಎಳನೀರು, 500ಲೀಟರ್ ಕಬ್ಬಿನ ಹಾಲು, ಅರಿಶಿನ, ಜೇನುತುಪ್ಪ, ಹಸುವಿನತುಪ್ಪ, ಮೊಸರು, ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸೇವಂತಿಗೆ, ಗುಲಾಬಿ, ಕಮಲ, ಸಂಪಿಗೆ, ಪವಿತ್ರ ಪತ್ರೆಗಳು, ಜವನ, ತುಳಸಿ ಸೇರಿದಂತೆ 58 ಬಗೆಯ ವಿವಿಧ ಪುಷ್ಪಗಳಿಂದ ಪುಷ್ಪಾಭಿಷೇಕ ಮಾಡಲಾಯಿತು…

ಕೃಷ್ಣರಾಜಪೇಟೆ ತಾಲ್ಲೂಕಿನ ವರಹನಾಥಕಲ್ಲಹಳ್ಳಿಯಲ್ಲಿ ಕೃಷ್ಣರಾಜಸಾಗರದ ಹಿನ್ನೀರಿಗೆ ಹೊಂದಿಕೊAಡAತೆ ಹೇಮಾವತಿ ನದಿಯ ದಡದಲ್ಲಿರುವ ಪುರಾಣ ಪ್ರಸಿದ್ಧವಾದ ಶ್ರೀ ಭೂವರಹನಾಥಸ್ವಾಮಿ ದೇವಾಲಯವನ್ನು 25 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಯ್ಸಳ ಶಿಲ್ಪದ ವಾಸ್ತುಶೈಲಿಯಲ್ಲಿ ಮೂರು ಪ್ರಾಕಾರಗಳ ದೇವಾಲಯವನ್ನಾಗಿ ನಿರ್ಮಿಸಲಾಗುತ್ತಿದೆ. 172 ಅಡಿ ಎತ್ತರದ ರಾಜಗೋಪುರವು ದೇವಾಲಯದ ಸೊಬಗನ್ನು ಹೆಚ್ಚಿಸಲಿದ್ದು ಭೂವರಹನಾಥ ದೇವಾಲಯವನ್ನು ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದಲೇ ನಿರ್ಮಿಸಲಾಗುತ್ತಿದೆ. ತಿರುಮಲ ತಿರುಪತಿಯ ಮಾದರಿಯಲ್ಲಿ ನಿರ್ಮಿಸುತ್ತಿರುವ ದೇವಾಲಯಕ್ಕೆ ರಾಜ್ಯ ಸರ್ಕಾರವು ಸಚಿವ ನಾರಾಯಣಗೌಡರ ಪರಿಶ್ರಮದಿಂದ 03 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದೆ. ಮೈಸೂರಿನ ಪರಕಾಲಮಠದ ನೇತೃತ್ವದಲ್ಲಿ ನಡೆಯುತ್ತಿರುವ ದೇವಾಲಯದ ಜೀರ್ಣೋದ್ಧಾರ ಕಾರ್ಯವು ಸಂಪೂರ್ಣವಾಗಿ ದಾನಿಗಳು ಹಾಗೂ ಭಕ್ತರ ನೆರವಿನಿಂದ ನಿರ್ಮಾಣವಾಗುತ್ತಿದೆ. ಆದ್ದರಿಂದ ಭಕ್ತರು ಮೂರು ಪ್ರಾಕಾರಗಳ ದೇವಾಲಯದ ನಿರ್ಮಾಣ ಕಾರ್ಯಕ್ಕೆ ಉದಾರವಾಗಿ ಸಹಾಯ ಮಾಡಬೇಕು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀನಿವಾಸ್ ರಾಘವನ್ ಮನವಿ ಮಾಡಿದರು..

ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾಜಿಸಚಿವ ಅರವಿಂದಲಿAಬಾವಳಿ ಅವರ ಪತ್ನಿ ಮಂಜುಳಾಲಿAಬಾವಳಿ, ಚಲನಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸೂರಪ್ಪಬಾಬು, ಸಾಯಿ ಟ್ರಾಕ್ಟರ್ ರವೀಂದ್ರ ಸೇರಿದಂತೆ ಸಾವಿರಾರು ಜನರು ರೇವತಿ ನಕ್ಷತ್ರದ ವಿಶೇಷಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: