April 29, 2024

Bhavana Tv

Its Your Channel

ಆರೋಗ್ಯವಂತ ಜೀವನಕ್ಕೆ ಕ್ರೀಡೆಯು ಸಂಜೀವಿನಿಯಾಗಿದೆ-ವಿಜಯ್ ರಾಮೇಗೌಡ

ಕೃಷ್ಣರಾಜಪೇಟೆ:- ಆರೋಗ್ಯವಂತ ಜೀವನಕ್ಕೆ ಕ್ರೀಡೆಯು ಸಂಜೀವಿನಿಯಾಗಿದೆ. ಯುವಜನರು ಉತ್ತಮವಾದ ಕ್ರೀಡಾಪಟುಗಳಾಗುವ ಮೂಲಕ ಒಳ್ಳೆಯ ಸಾಧನೆ ಮಾಡಿ ಕೀರ್ತಿಗಳಿಸಬೇಕು ಎಂದು ಸಮಾಜಸೇವಕರು ಹಾಗೂ ಮೈಸೂರಿನ ಮಿತ್ರ ಫೌಂಡೇಶನ್ ಅಧ್ಯಕ್ಷರಾದ ವಿಜಯ್ ರಾಮೇಗೌಡ ಕರೆ ನೀಡಿದರು ..

ಅವರು ಇಂದು ತಾಲ್ಲೂಕಿನ ನಗರೂರು ಮಾರ್ಗೋನಹಳ್ಳಿಯ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿರುವ ಮೊರಾರ್ಜಿದೇಸಾಯಿ ವಸತಿಶಾಲೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು…

ಇಂದಿನ ಒತ್ತಡದ ಜೀವನದಲ್ಲಿ ಯುವಜನರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಾಧನೆ ಮಾಡುವ ಬದಲಿಗೆ ಕ್ರೀಡೆಯಿಂದಲೇ ದೂರಾಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಅವರವರ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕ್ರೀಡಾ ಮಾರ್ಗದರ್ಶಕರಿಂದ ಸೂಕ್ತವಾದ ತರಬೇತಿ ಕೊಡಿಸಿ ಮಾರ್ಗದರ್ಶನ ನೀಡಿದರೆ ಸಾಕು ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಕೂಡ ಅತ್ಯುತ್ತಮವಾದ ಸಾಧನೆಯನ್ನು ಮಾಡಲಿದ್ದಾರೆ. ನಮ್ಮ ನೆಲದ ದೇಸಿ ಕ್ರೀಡೆಗಳು ಕಣ್ಮರೆಯಾಗಿ ನೇಪಥ್ಯಕ್ಕೆ ಸರಿಯುತ್ತಿವೆ. ಆದ್ದರಿಂದ ಯುವಜನರು ಕ್ರೀಡೆಗೆ ಹೆಚ್ಚಿನ ಒತ್ತು ನೀಡಿ ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಮನವಿ ಮಾಡಿದ ವಿಜಯ್ ರಾಮೇಗೌಡ ಸಂಗೊಳ್ಳಿ ರಾಯಣ್ಣ ಯುವ ಕ್ರಿಕೆಟರ್ಸ್ ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ಟಗರುಗಳು ಮತ್ತು ಹೋತಗಳು ಹಾಗೂ ಟ್ರೋಫಿಯನ್ನು ನೀಡುತ್ತಿರುವುದು ವಿಶೇಷವಾಗಿದ್ದು ಯುವಜನರಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬುವಲ್ಲಿ ನೆರವಾಗಲಿದೆ ಎಂದು ವಿಜಯ್ ರಾಮೇಗೌಡ ಹೇಳಿದರು…

ಕ್ರೀಡಾಕೂಟದಲ್ಲಿ ತಾಲ್ಲೂಕು ಪಂಚಾಯತಿ ಮಾಜಿಸದಸ್ಯ ಮಾಧವಪ್ರಸಾದ್, ಕಾಂಗ್ರೆಸ್ ಮುಖಂಡರಾದ ಮಡವಿನಕೋಡಿ ಕಾಂತರಾಜು, ಕ್ರೀಡಾಕೂಟದ ಆಯೋಜಕರಾದ ಮಾರ್ಗೋನಹಳ್ಳಿ ಮಧು, ಕಾಡುಮೆಣಸ ಚಂದ್ರು, ಗ್ರಾಮ ಪಂಚಾಯತಿ ಸದಸ್ಯ ಆರ್.ಶ್ರೀನಿವಾಸ್, ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲರಾದ ಡಾ.ರಾಮಾನಾಯಕ್, ಗ್ರಾಮದ ಮುಖಂಡರಾದ ನಂಜೇಗೌಡ, ತಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: