April 29, 2024

Bhavana Tv

Its Your Channel

ನಾಡಿನ ಸರಳ ಸಜ್ಜನ ರಾಜಕಾರಣಿ ಕೃಷ್ಣ ರವರ 83 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕಾಯಕ ಜೀವಿಗಳಿಗೆ ಸನ್ಮಾನ

ಮಂಡ್ಯದ ಗಾಂಧಿ, ನಾಡಿನ ಸರಳ ಸಜ್ಜನ ರಾಜಕಾರಣಿ ಕೆ.ಆರ್.ಪೇಟೆ ಕೃಷ್ಣ ಅವರ 83 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕಾಯಕ ಜೀವಿಗಳಿಗೆ ಸನ್ಮಾನ ಮಾಡಿ ಗೌರವಿಸುವ ಜೊತೆಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸರ್ವಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ..

ರಾಜ್ಯದ ಯುವಜನ ಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕೃಷ್ಣ ಅವರ ಧರ್ಮಪತ್ನಿ ಇಂದ್ರಮ್ಮ ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು…

ಒಬ್ಬ ಸಾಮಾನ್ಯ ರೈತನ ಮಗನಾಗಿ ಜನಿಸಿದ ಕೃಚ್ಣ ಅವರು ರಾಜಕೀಯ ಕ್ಷೇತ್ರದಲ್ಲಿ 40 ವರ್ಷಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದರೂ ಒಂದೇ ಒಂದು ಕಪ್ಪುಚುಕ್ಕಿಯಿಲ್ಲದಂತೆ ಮೌಲ್ಯಾಧಾರಿತ ರಾಜಕಾರಣ ಮಾಡಿ
ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸಿ ರಾಜಕೀಯ ರಂಗದ ಬೆಳ್ಳಿ ಚುಕ್ಕಿಯಂತೆ ಪ್ರಜ್ವಲಿಸುತ್ತಿದ್ದಾರೆ ಎಂದು ಅಭಿಮಾನದಿಂದ ಹೇಳಿದ ಸಚಿವ ನಾರಾಯಣಗೌಡ ಕೃಷ್ಣ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿ ಇಡುವ ಜೊತೆಗೆ ಕೆ.ಆರ್.ಪೇಟೆ ಸರ್ಕಾರಿ ಎಂಜಿನಿಯರಿAಗ್ ಕಾಲೇಜು ಆವರಣದಲ್ಲಿ ಕೃಷ್ಣರ ಪುತ್ಥಳಿಯನ್ನು ಸ್ಥಾಪಿಸಿ ಕೃಷ್ಣ ಅವರ ಜೀವನದ ಆದರ್ಶಗಳನ್ನು ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದ ಸಚಿವರು ಕೃಷ್ಣ ಪ್ರತಿಷ್ಠಾನವು ಅತ್ಯುತ್ತಮವಾಗಿ ಕೆಲಸ ಮಾಡುತ್ತಾ ಕೃಷ್ಣರ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಮಂಡ್ಯದ ಗಾಂಧಿ ಎಂದು ಬಿರುದು ಪಡೆದಿರುವ ಕೃಷ್ಣರ ಸವಿನೆನಪಿಗಾಗಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಗಾಂಧಿಭವನ ನಿರ್ಮಿಸಲು ಪುರಸಭೆ ವತಿಯಿಂದ ಸುಸಜ್ಜಿತವಾದ ನಿವೇಶನವನ್ನು ದೊರಕಿಸಿಕೊಟ್ಟು ಭವನ ನಿರ್ಮಿಸಲು ಸಹಾಯ ಮಾಡುವುದಾಗಿ ಘೋಷಿಸಿದರು..

ತಹಶೀಲ್ದಾರ್ ಎಂ.ವಿ.ರೂಪ, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಶೀಳನೆರೆ ರಮೇಶ್, ಕಿಕ್ಕೇರಿ ಸುರೇಶ್, ಅಂ.ಚಿ.ಸಣ್ಣಸ್ವಾಮಿಗೌಡ, ಬಿ.ನಂಜಪ್ಪ, ಶೀಳನೆರೆ ಅಂಬರೀಶ್, ಸಿದ್ದೇಶ್, ಕೆ.ಆರ್.ನೀಲಕಂಠ, ಬಿ.ಜವರಾಯಿಗೌಡ, ಕೆ.ಮಂಜುಳಾ ಚನ್ನಕೇಶವ, ಕೃಷ್ಣ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕತ್ತರಘಟ್ಟ ವಾಸು, ಖಜಾಂಚಿ ಹೆಮ್ಮನಹಳ್ಳಿ ರಮೇಶ್, ಸಂತೆಬಾಚಹಳ್ಳಿ ನಾಗರಾಜು, ಬೂಕನಕೆರೆ ಜವರಾಯಿಗೌಡ ಸೇರಿದಂತೆ ಕೃಷ್ಣರ ನೂರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೆನಪಿನ ಕಾಣಿಕೆ, ಗೌರವ ಧನ ನೀಡಿ ಸನ್ಮಾನಿಸಿ ಗೌರವಿಸಲಾಯಿತು…

ಡಾ.ಅಂ.ಚಿ.ಸಣ್ಣಸ್ವಾಮಿಗೌಡ ಸ್ವಾಗತಿಸಿದರು, ಹೆಮ್ಮನಹಳ್ಳಿ ರಮೇಶ್ ವಂದಿಸಿದರು. ಕತ್ತರಘಟ್ಟ ವಾಸು ಕಾರ್ಯಕ್ರಮ ನಿರೂಪಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: