May 14, 2024

Bhavana Tv

Its Your Channel

“ವೀರ ಸಾವರ್ಕರ್” ರಥಯಾತ್ರೆಗೆ ಬಿಜೆಪಿ ಕಾರ್ಯಕರ್ತರಿಂದ ಸ್ವಾಗತ

ಕೆ.ಆರ್.ಪೇಟೆ :- ಮಹಾನ್ ರಾಷ್ಟ್ರಪ್ರೇಮಿ, ಅಪ್ರತಿಮ ಸ್ವಾತಂತ್ರ‍್ಯ ಹೋರಾಟಗಾರ “ವೀರ ಸಾವರ್ಕರ್” ರಥಯಾತ್ರೆಗೆ ಕೆ.ಆರ್.ಪೇಟೆ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪಟ್ಟಣದ ನಾಗರಿಕರು ಭವ್ಯ ಸ್ವಾಗತ ನೀಡಿದರು …

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮದಿಂದ ಆಗಮಿಸಿದ ಸಾವರ್ಕರ್ ರಥಕ್ಕೆ ಪುಷ್ಪವೃಷ್ಠಿ ಮಾಡಿ, ಜಯಘೋಷಗಳನ್ನು ಕೂಗಿ ಬರಮಾಡಿಕೊಂಡ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ಹಾಗೂ ಕೆ.ಆರ್.ಪೇಟೆ ಮಂಡಲ ಅಧ್ಯಕ್ಷ ಪರಮೇಶ್ ಅರವಿಂದ್ ಕರಿನೀರಿನ ಶಿಕ್ಷೆಯನ್ನು ಒಂದಲ್ಲಾ ಎರಡು ಭಾರಿ ಜೀವವಾಧಿ ಶಿಕ್ಷೆಯಾಗಿ ಅನುಭವಿಸಿ ದೇಶದ ಸ್ವಾತಂತ್ರ‍್ಯಕ್ಕೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಸಾವರ್ಕರ್ ತ್ಯಾಗ ಬಲಿದಾನದ ಸಂಕೇತವಾಗಿದ್ದಾರೆ. ಯುವಜನರು ವೀರಸಾವರ್ಕರ್ ಅವರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಅಪ್ರತಿಮ ದೇಶಭಕ್ತರಾಗಿ ಹೊರಹೊಮ್ಮಬೇಕು ಎಂದು ಕೆ.ಶ್ರೀನಿವಾಸ್ ಕರೆ ನೀಡಿದರು…

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬಳ್ಳೇಕೆರೆ ವರದರಾಜೇಗೌಡ, ಬ್ಯಾಂಕ್ ಪರಮೇಶ್ವರ, ಪ್ರೆಸ್ ಕುಮಾರಸ್ವಾಮಿ, ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಪುರಸಭಾ ಸದಸ್ಯ ನಟರಾಜ್, ತಾಲ್ಲೂಕು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಸಾರಂಗಿ ನಾಗರಾಜು, ಮುಖಂಡರಾದ ಕೆ.ಪಿ.ಜಯಂತ್, ನಾಗರಾಜ್, ಕೈಗೋನಹಳ್ಳಿ ಕುಮಾರ್, ಕೆ.ವಿನೋದ್, ಕೆ.ಆರ್.ನೀಲಕಂಠ, ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ರಮೇಶ್, ಜಯಮ್ಮ, ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ದಯಾನಂದ, ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು..

ಅಪ್ರತಿಮ ದೇಶಭಕ್ತ ವೀರಸಾವರ್ಕರ್ ಕುರಿತ ಸಾಕ್ಷ್ಯಚಿತ್ರದ ಪ್ರದರ್ಶನ ಮಾಡಿದ ನಂತರ ರಥಯಾತ್ರೆಯು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಕಡೆಗೆ ಹೊರಟಿತು..ಕೆ.ಆರ್.ಪೇಟೆ ತಾಲ್ಲೂಕಿನ ಗಡಿ ಗ್ರಾಮವಾದ ಸಿಂಗನಹಳ್ಳಿಯವರೆಗೆ ಬಿಜೆಪಿ ಕಾರ್ಯಕರ್ತರು ಭೇರ್ಯ ಮೂಲಕ ಕೆ.ಆರ್.ನಗರಕ್ಕೆ ಬರಮಾಡಿಕೊಂಡು ಭವ್ಯ ಸ್ವಾಗತ ನೀಡಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: