May 15, 2024

Bhavana Tv

Its Your Channel

ಸೆಪ್ಟೆಂಬರ್ 12ರಂದು ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ರೈತಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ

ಕೃಷ್ಣರಾಜಪೇಟೆ :- ಕಬ್ಬಿಗೆ ವೈಜ್ಞಾನಿಕವಾಗಿ ಬೆಲೆ ನಿಗಧಿಪಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಹಾಗೂ ತಾಲ್ಲೂಕು ಕಛೇರಿಗಳಲ್ಲಿ ನಡೆಯುತ್ತಿರುವ ಭಾರೀ ಭ್ರಷ್ಟಾಚಾರ ಖಂಡಿಸಿ ಸೆಪ್ಟೆಂಬರ್ 12ರಂದು ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ರೈತಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ

ಕೃಷ್ಣರಾಜಪೇಟೆ ಪ್ರವಾಸಿ ಮಂದಿರದ ಆವರಣದಲ್ಲಿ ಕೃಷ್ಣರಾಜಪೇಟೆ ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಂಡ್ಯ ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಭಾಗವಹಿಸಿ ರೈತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಶಕ್ತಿತುಂಬಬೇಕು ಎಂದು ಕರೆ ನೀಡಿದರು.

ಎಫ್.ಆರ್.ಪಿ ಅಡಿಯಲ್ಲಿ ಕಬ್ಬಿಗೆ ಪ್ರತೀ ಟನ್ನಿಗೆ ಕಡಿಮೆ ಬೆಲೆಯನ್ನು ನೀಡಿ ರೈತರನ್ನು ವಂಚಿಸುತ್ತಿರುವ ಸಕ್ಕರೆ ಕಾರ್ಖಾನೆಗಳು ಒಂದೆಡೆ ಮಾಫಿಯಾ ನಡೆಸುತ್ತಿದ್ದರೆ ರಾಜ್ಯ ಸರ್ಕಾರವು ಕಳೆದ ನಾಲ್ಕೈದು ವರ್ಷಗಳಿಂದ ಕಬ್ಬಿಗೆ ನೀಡಬೇಕಾಗಿರುವ ಎಸ್.ಎ.ಪಿ ಹಣವನ್ನೇ ನೀಡಿಲ್ಲ.. ಸಕ್ಕರೆ ಕಾರ್ಖಾನೆಗಳ ಮಾಲೀಕರ ಕಪಿಮುಷ್ಠಿಗೆ ಸಿಲುಕಿರುವ ರಾಜ್ಯ ಸರ್ಕಾರವು ಗಾಢವಾದ ನಿದ್ರೆಯಲ್ಲಿದ್ದು ಕಬ್ಬು ಬೆಳೆಗಾರರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ನ್ಯಾಯ ಕೊಡಿಸಲು ಮುಂದಾಗಿ ವೈಜ್ಞಾನಿಕವಾಗಿ ಕಬ್ಬಿಗೆ ಬೆಲೆ ನಿಗದಿಪಡಿಸಲಾಗದೇ ತನ್ನ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ ಎಂದು ಕೆಂಪೂಗೌಡ ಆಕ್ರೋಶ ವ್ಯಕ್ತಪಡಿಸಿದರು..

ರೈತನಾಯಕ ಪ್ರಸನ್ನ ಎನ್.ಗೌಡ ಮಾತನಾಡಿ ರೈತರು ಸಂಘಟಿತರಾಗಿ ತಮ್ಮ ಮೇಲೆ ನಡೆಯುತ್ತಿರುವ ಅನ್ಯಾಯ, ಅಕ್ರಮಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ಚಳವಳಿಗಳು ಜೀವಂತವಾಗಿರದಿದ್ದರೆ ರೈತರನ್ನು ಕೇಳುವವರು ಯಾರೂ ಇಲ್ಲದಂತಾಗುತ್ತದೆ. ರೈತರು ಈ ದಿಕ್ಕಿನಲ್ಲಿ ಜಾಗೃತರಾಗಬೇಕು. ಸಕ್ಕರೆಯ ಇಳುವರಿಯ ಆಧಾರದ ಮೇಲೆ ಕಬ್ಬಿಗೆ ದರ ನಿಗಧಿ ಮಾಡಬೇಕು. ರೈತರು ವಿದ್ಯಾವಂತರಾಗಿ ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ಅರಿವಿನ ಜಾಗೃತಿ ಹೊಂದಬೇಕು. ಈ ದಿಕ್ಕಿನಲ್ಲಿ ರೈತರ ಕಷ್ಟಸುಖಗಳನ್ನು ಅರಿತಿರುವ ವ್ಯಕ್ತಿಗಳೆ ಕೆಎಎಸ್ ಹಾಗೂ ಐಎಎಸ್ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗಬೇಕು. ಆದ್ದರಿಂದ ರಾಜ್ಯ ರೈತಸಂಘದ ನೇತೃತ್ವದಲ್ಲಿ ತಜ್ಞರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಉಚಿತವಾಗಿ ತರಬೇತಿ ಕೊಡಿಸಲು ನಿರ್ಧರಿಸಲಾಗಿದೆ. ನಾಲ್ಕು ಗುಂಪುಗಳಲ್ಲಿ ತಲಾ 500 ಜನರು ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ತರಬೇತಿ ನೀಡಲಾಗುವುದು. ಮೊದಲು ನೊಂದಣಿ ಮಾಡಿಕೊಂಡ ಯುವಜನರಿಗೆ ಮೊದಲ ಗುಂಪಿನಲ್ಲಿ ತರಬೇತಿ ಕೊಡಿಸಲಾಗುವುದು ಎಂದು ಪ್ರಸನ್ನಗೌಡ ತಿಳಿಸಿದರು..

ರೈತ ಮುಖಂಡರಾದ ಮುದುಗೆರೆ ರಾಜೇಗೌಡ, ಕರೋಟಿ ತಮ್ಮಯ್ಯ ಮತ್ತು ಪಿ.ಬಿ.ಮಂಚನಹಳ್ಳಿ ನಾಗಣ್ಣಗೌಡ ಮಾತನಾಡಿ ತಾಲ್ಲೂಕು ಕಛೇರಿಯಲ್ಲಿ ಭ್ರಷ್ಠಾಚಾರವು ತಾಂಡವವಾಡುತ್ತಿದೆ. ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡುತ್ತಿಲ್ಲ. ತಹಶೀಲ್ದಾರ್ ರೂಪ ಅವರು ರೈತರು ಸೇರಿದಂತೆ ಶ್ರೀಸಾಮಾನ್ಯರಿಗೆ ಕಛೇರಿಯಲ್ಲಿ ಸಿಗುತ್ತಿಲ್ಲ. ಸಚಿವರ ಕೈಗೊಂಬೆಯAತೆ ಕೆಲಸ ಮಾಡುತ್ತಿರುವ ತಹಶೀಲ್ದಾರರು ಭ್ರಷ್ಟಾಚಾರ ಪೋಷಿಸುತ್ತಿದ್ದಾರೆ. ಸಧ್ಯದಲ್ಲಿಯೇ ದಿನಾಂಕ ನಿಗಧಿಪಡಿಸಿ ತಾಲ್ಲೂಕು ಆಡಳಿತದ ವಿರುದ್ಧ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ. ಗ್ರಾಮಲೆಕ್ಕಾಧಿಕಾರಿಗಳು ಹಾಗೂ ರಾಜಶ್ವನಿರೀಕ್ಷಕರು ರೈತರ ರಕ್ತ ಹೀರುತ್ತಿದ್ದಾರೆ. ಲಂಚದ ಹಣವನ್ನು ನೀಡದಿದ್ದರೆ ರೈತರ ಕಾನೂನು ಬದ್ಧವಾದ ಯಾವುದೇ ಕೆಲಸಗಳಾಗುತ್ತಿಲ್ಲ. ಸಚಿವ ನಾರಾಯಣಗೌಡ ಅವರಿಗೆ ಆಡಳಿತದ ಗಂಧಗಾಳಿ ಒಂದಿAಚೂ ಗೊತ್ತಿಲ್ಲ. ಸುಳ್ಳು ಭರವಸೆಗಳನ್ನು ನೀಡಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ರಾಜೇಗೌಡ ಕಿಡಿಕಾರಿದರು..
ಪೂರ್ವಭಾವಿ ಸಭೆಯಲ್ಲಿ ರೈತ ಮುಖಂಡರಾದ ಲಕ್ಷ್ಮೀಪುರ ಜಗಧೀಶ್, ಮರುವನಹಳ್ಳಿ ಶಂಕರ್, ಮುದ್ದುಕುಮಾರ್, ಶಿವಪುರ ರಮೇಶ್ ಮತ್ತಿತರರು ಉಪಸ್ಥಿತರಿದ್ದರು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
.

error: