May 14, 2024

Bhavana Tv

Its Your Channel

ಪಿ.ಎಲ್.ಡಿ ಬ್ಯಾಂಕ್’ನ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಕಾಪನಹಳ್ಳಿ ಕಾಂತರಾಜೇಗೌಡ ಅವಿರೋಧ ಆಯ್ಕೆ

ಕೃಷ್ಣರಾಜಪೇಟೆ :- ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಪಿ.ಎಲ್.ಡಿ ಬ್ಯಾಂಕ್’ನ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಕಾಪನಹಳ್ಳಿ ಕಾಂತರಾಜೇಗೌಡ ಅವಿರೋಧ ಆಯ್ಕೆ..ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ..

ಕೃಷ್ಣರಾಜಪೇಟೆ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಈ ಹಿಂದಿನ ಅಧ್ಯಕ್ಷರಾಗಿದ್ದ ಕಟ್ಟೆಕ್ಯಾತನಹಳ್ಳಿ ಪಾಪಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾಪನಹಳ್ಳಿ ಕಾಂತರಾಜೇಗೌಡ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇರುವ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಸಹಕಾರ ಸಂಘಗಳ ಪಾಂಡವಪುರ ಉಪವಿಭಾಗದ ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್ ಪ್ರಕಟಿಸಿದರು..

ನೂತನ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರ ಸ್ಥಾನ ಅಲಂಕರಿಸಿದ ಕಾಂತರಾಜೇಗೌಡ ಮಾತನಾಡಿ ಎಲ್ಲಾ ನಿರ್ದೇಶಕರು ಪಕ್ಷೀತೀತವಾಗಿ ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇದಕ್ಕೆ ಕಾರಣಕರ್ತರಾದ ಸಚಿವ ನಾರಾಯಣಗೌಡರು ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಬ್ಯಾಂಕಿನ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ. ಬ್ಯಾಂಕಿನಲ್ಲಿ ಸಾಲ ಪಡೆದ ರೈತ ಬಾಂಧವರು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ತಮ್ಮ ಏಳಿಗೆಗಾಗಿ ಇರುವ ಬ್ಯಾಂಕಿನ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಕಾಂತರಾಜೇಗೌಡ ತಿಳಿಸಿದರು..

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಮಾತನಾಡಿ ಗ್ರಾಮೀಣ ಭಾಗದ ಜನರ ಸೇವೆ ಮಾಡಲು ಸುವರ್ಣ ಅವಕಾಶವು ಕಾಂತರಾಜೇಗೌಡ ಅವರಿಗೆ ಸಿಕ್ಕಿದೆ, ಸರ್ಕಾರದಿಂದ ಬರುವ ಯೋಜನೆಗಳನ್ನು ಸಮರ್ಪಕವಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಅರಿವು ಮೂಡಿಸಿ, ಪಕ್ಷಬೇಧ ಮರೆತು ಉತ್ತಮ ಆಡಳಿತ ಮಾಡುವುದರ ಜೊತೆಗೆ ನಿಮ್ಮ ಆಡಳಿತ ಅವಧಿಯಲ್ಲಿ ನೂತನ ಕಟ್ಟಡ ಅನಾವರಣ ಆಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ನೂತನ ಅಧ್ಯಕ್ಷರಿಗೆ ಶ್ರೀನಿವಾಸ್ ಕಿವಿ ಮಾತು ನೀಡಿದರು..

ಈ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಪ್ರಭುಸ್ವಾಮಿ, ಮಂಡ್ಯ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಷ್,
ಜಿ.ಪಂ.ಮಾಜಿ ಉಪಾಧ್ಯಕ್ಷ ಕಿಕ್ಕೇರಿ ಪ್ರಭಾಕರ್,ಬ್ಯಾಂಕ್ ನ ಪ್ರಭಾರ ಅಧ್ಯಕ್ಷರಾಗಿದ್ದ ಉಪಾಧ್ಯಕ್ಷ ಬಣ್ಣೇನಹಳ್ಳಿ ಧನಂಜಯ, ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು,
ಸದಸ್ಯರಾದ ಕೈಗೋನಹಳ್ಳಿ ಕುಮಾರ್, ಕಬ್ಬಲಗೆರೆ ಪುಟ್ಟಸ್ವಾಮಿಗೌಡ, ಶಿವಕುಮಾರ್, ಅಂಜನಿಗೌಡ, ರಾಜಾನಾಯಕ, ಚಂದ್ರೇಗೌಡ, ಶಂಭುಲಿAಗೇಗೌಡ, ಏಜಾಸ್ ಪಾಷಾ, ಕಮಲಮ್ಮ, ಸಚಿವ ನಾರಾಯಣಗೌಡರ ಆಪ್ತ ಸಹಾಯಕರಾದ ದಯಾನಂದ್,ಮುಖAಡ ಡಿ.ಪಿ. ಪರಮೇಶ್, ದೊದ್ದನಕಟ್ಟೆ ನಾರಾಯಣ್, ದೇವರಾಜು,ಶೆಟ್ಟಿಹಳ್ಳಿ ಕೃಷ್ಣೇಗೌಡ, ಚಂದ್ರು, ಕಿರಣ್, ಬೆಳತೂರು ದಿನೇಶ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ . ಮಂಡ್ಯ

error: