April 29, 2024

Bhavana Tv

Its Your Channel

7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಆಯುಷ್ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಗಳ ವಿತರಣಾ ಕಾರ್ಯಕ್ರಮ

ಕೃಷ್ಣರಾಜಪೇಟೆ :- ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವು ಯಾವುದೂ ಇಲ್ಲವಾದ್ದರಿಂದ ಜನಸಾಮಾನ್ಯರು ನಿಗಧಿತವಾಗಿ ಆಹಾರ ಪದಾರ್ಥಗಳನ್ನು ಸೇವಿಸಿ, ಶಿಸ್ತುಬದ್ಧ ಜೀವನ ಕ್ರಮವನ್ನು ಅನುಸರಿಸಿ ರೋಗರುಜಿನಗಳು ಬರದಂತೆ ಎಚ್ಚರ ವಹಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಮನವಿ ಮಾಡಿದರು ..

ಅವರು ಇಂದು ಪಟ್ಟಣದ ಸ್ವರ್ಣಜಯಂತಿ ಶಹರಿ ರೋಜ್ಗಾರ್ ಯೋಜನಾ ಭವನದಲ್ಲಿ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಆಯುಷ್ ಆರೋಗ್ಯ ಇಲಾಖೆಯ ವತಿಯಿಂದ ಪುರಸಭೆ ಸದಸ್ಯರು, ಸಿಬ್ಬಂಧಿಗಳು ಹಾಗೂ ಪೌರಕಾರ್ಮಿಕರಿಗೆ ಆಯೋಜಿಸಿದ್ದ ಆಯುಷ್ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಗಳ ವಿತರಣಾ ಕಾರ್ಯಕ್ರಮವನ್ನು ಭಗವಂತ ಧನ್ವಂತರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು…

ಆಯುರ್ವೇದ ಎನ್ನುವುದು ಕೇವಲ ಔಷಧೀಯ ಚಿಕಿತ್ಸಾ ಪದ್ಧತಿಯಲ್ಲ, ಅದು ನಮ್ಮ ಜೀವನದ ಮಾರ್ಗ ನಾವು ನಮ್ಮ ಮನೆಯಲ್ಲಿಯೇ ಬಳಸುವ, ನಮ್ಮ ಹಿತ್ತಲಿನಲ್ಲಿ ದೊರೆಯುವ ಗಿಡ ಗೆಂಟೆಗಳು ಹಾಗೂ ದಿನಬಳಕೆಯ ಔಷಧೀಯ ವಸ್ತುಗಳನ್ನು ನಿಯಮಿತವಾಗಿ ಬಳಸಿ ಅನಾರೋಗ್ಯಕ್ಕೆ ತುತ್ತಾಗದಂತೆ ತಡೆಯುವ ಜೊತೆಗೆ ನೂರ್ಕಾಲ ಆರೋಗ್ಯವಂತರಾಗಿ ಸಮೃದ್ಧ ಜೀವನ ನಡೆಸಬೇಕು ಎಂದು ಮನವಿ ಮಾಡಿದ ಪುರಸಭೆ ಅಧ್ಯಕ್ಷೆ ವಿಶ್ವಕ್ಕೆ ಯೋಗ ಮತ್ತು ಆಯುರ್ವೇದ ಔಷಧಗಳ ಮಹತ್ವವನ್ನು ಕೊಡುಗೆಯಾಗಿ ನೀಡಿದ ಭಾರತೀಯರಾದ ನಾವು ಇಂದಿನ ವೈಜ್ಞಾನಿಕ ಯುಗದಲ್ಲಿ ಆಯುರ್ವೇದ ಚಿಕಿತ್ಸೆಯಿಂದ ದೂರ ಸರಿಯುತ್ತಿದ್ದೇವೆ. ನಮ್ಮ ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮ ಬೀರದೇ ಜೀವನೋತ್ಸಾಹವನ್ನು ತುಂಬಿ ಆರೋಗ್ಯವನ್ನು ಸಮೃದ್ಧಿಗೊಳಿಸುವ ಆಯುರ್ವೇದ ಔಷಧಗಳನ್ನು ನಿಯಮಿತವಾಗಿ ಬಳಸಿ ನೂರ್ಕಾಲ ಆರೋಗ್ಯವಂತರಾಗಿರಬೇಕು ಎಂದು ಮಹಾದೇವಿನಂಜುAಡ ಕರೆ ನೀಡಿದರು..

ಮಂಡ್ಯ ಜಿಲ್ಲಾ ಮುಖ್ಯ ಲೆಕ್ಕಾಧಿಕಾರಿ ಸುರೇಶ್ ಕುಮಾರ್, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಪ್ರಭಾರ ಮುಖ್ಯಾಧಿಕಾರಿ ಸೋಮಶೇಖರ್, ವಿಶ್ರಾಂತ ಪ್ರಾಂಶುಪಾಲ ಡಾ.ಕೆ.ಕಾಳೇಗೌಡ, ತಾಲ್ಲೂಕು ಆಯುಷ್ ವೈದ್ಯಾಧಿಕಾರಿ ಡಾ.ಲೋಕೇಶ್ ಮತ್ತು ಡಾ.ಸುಬ್ರಹ್ಮಣ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು..

ತಜ್ಞ ಆಯುಷ್ ವೈದ್ಯರಾದ ಡಾ.ದಿವ್ಯ, ಡಾ.ಯೋಜನ್, ಡಾ.ಚಂದ್ರಶೇಖರ್, ಮುಖಂಡರಾದ ಮಿತ್ರಗಿರೀಶ್, ಪುರಸಭಾ ಸದಸ್ಯ ಹೆಚ್.ಆರ್.ಲೋಕೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಕೆ ಆರ್ ನೀಲಕಂಠ
ಕೃಷ್ಣರಾಜಪೇಟೆ

error: