May 14, 2024

Bhavana Tv

Its Your Channel

ನಾಗಮಂಗಲ ಜಾಕಿನಕೆರೆ ಏರಿ ಒಡೆದು ಅಪಾರ ಪ್ರಮಾಣದ ನೂರಾರು ಎಕರೆ ಬೆಳೆನಷ್ಟ

ನಾಗಮಂಗಲ; ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿ ಹೆಚ್ ಕ್ಯಾತನಹಳ್ಳಿ ಗ್ರಾಮದ ಜಾಕಿನಕೆರೆ ತಡ ರಾತ್ರಿ ಸುರಿದ ಮಳೆಯಿಂದ ಕೆರೆ ಎರಿ ಒಡೆದು ಹೋಗಿದ್ದು ನೂರಾರು ಎಕರೆ ಕೃಷಿ ಬೆಳೆಗಳಾದ ಬಾಳೆ. ತೆಂಗು. ರಾಗಿ. ಜೋಳ. ರೈತನ ಕೃಷಿ ಜಮೀನು ಕೊಚ್ಚಿಹೋಗಿದ್ದು ವಿದ್ಯುತ್ ಕಂಬಗಳು ಧರೆಗುರುಳಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ನೀರಿನ ರಭಸಕ್ಕೆ ಹಳ್ಳಿಗಳ ರಸ್ತೆ ಕೊಚ್ಚಿಹೋಗಿದ್ದು ಚನ್ನೆಗೌಡನ ಕೊಪ್ಪಲು. ಗಾಣಿಗರ ಕೊಪ್ಪಲು. ಗುಜ್ಜೇನಹಳ್ಳಿ .ಹೆಚ್ ಭುವನ ಹಳ್ಳಿಯ ಮುಖ್ಯ ರಸ್ತೆ ಸಂಪರ್ಕ ಕಡಿದು ಹೋಗಿದೆ.

ಮೇಲ್ಭಾಗದಿಂದ ಹೆಚ್ಚಿನ ನೀರು ಬರುತ್ತಿದ್ದು ಹೊನ್ನಾವರ ಕೆರೆ ಹಾಗೂ ಬಿಂಡಿಗನವಿಲೆ ಕೆರೆಗಳಿಗೆ ನೀರು ರಭಸದಿಂದ ನುಗ್ಗುತ್ತಿದ್ದು ಬಿಂಡಿಗನವಿಲೆ ಸುತ್ತಮುತ್ತ ಗ್ರಾಮಗಳ ರೈತರ ಜಮಿನು ನೀರಿನಿಂದ ಆವೃತವಾಗಿದೆ ಇಲ್ಲಿನ ಸುತ್ತಮುತ್ತ ಕೆರೆ ಏರಿಗಳು ಕೂಡ ಅಪಾಯದ ಅಂಚಿನಲ್ಲಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ

ಅಧಿಕಾರಿಗಳ ನಿರ್ಲಕ್ಷ ಗ್ರಾಮಸ್ಥರ ಆಕ್ರೋಶ
ಕೆಲವು ದಿನಗಳ ಹಿಂದೆ ಜಾಕಿನಕೆರೆ ಬಿರುಕುಬಿಟ್ಟಿದ್ದು ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಯಾರು ಕೂಡ ಸರಿಪಡಿಸಿಲ್ಲ ಸ್ಥಳೀಯ ಗ್ರಾಮಸ್ಥರು ತಾತ್ಕಾಲಿಕವಾಗಿ ಮರಳಿನ ಮೂಟೆಗಳನ್ನು ತುಂಬಿ ಕೆರೆಯನ್ನು ರಕ್ಷಿಸಿದ್ದರು ತಡರಾತ್ರಿ ಸುರಿದ ಭಾರಿ ಮಳೆಯಿಂದ ಉಂಟಾದ ಅನಾಹುತಕ್ಕೆ ಅಧಿಕಾರಿಗಳೇ ಹೊಣೆ ಎಂದು ಸ್ಥಳೀಯ ಮುಖಂಡರಾದ ತಾಲೂಕು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಹೊನ್ನಾವರ ಗ್ರಾಮ ಪಂಚಾಯತಿ ಸದಸ್ಯರಾದ ಚೇತನ್ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ವರದಿ ; ಚಂದ್ರಮೌಳಿ ನಾಗಮಂಗಲ

error: