May 14, 2024

Bhavana Tv

Its Your Channel

ದೊಡ್ಡಮ್ಮದೇವಿ ದೇವಾಲಯ ಲೋಕಾರ್ಪಣೆ ನೆರವೇರಿಸಿದ ನಿರ್ಮಲಾನಂದನಾಥ ಸ್ವಾಮೀಜಿ

ನಾಗಮಂಗಲ. ತಾಲೂಕಿನ ಬೆಳ್ಳೂರು ಹೋಬಳಿ ಚಿಕ್ಕಜಟಾಕ ಗ್ರಾಮದ ೭೦೦ ವರ್ಷಗಳ ಇತಿಹಾಸವುಳ್ಳ ಪುರಾಣ ಪ್ರಸಿದ್ಧ ಶ್ರೀ ದೊಡ್ಡಮ್ಮದೇವಿ ಅಮ್ಮನವರ ದೇವಾಲಯ ಉದ್ಘಾಟನೆ ಮತ್ತು ದೊಡ್ಡಮ್ಮದೇವಿ ಪ್ರತಿಷ್ಠಾಪನೆ ಗೋಪುರ ಕುಂಬಾಭಿಷೇಕ. ಕಳಸ ಪ್ರತಿಷ್ಠಾಪನೆಯನ್ನು ನೆರವೇರಿಸುವ ಮೂಲಕ ಆದಿಚುಂಚನಗಿರಿ ಮಠಾಧೀಶರಾದ ಡಾ.ಶ್ರೀ.ಶ್ರೀ. ನಿರ್ಮಲಾನಂದನಾಥ ಸ್ವಾಮೀಜಿ ಲೋಕಾರ್ಪಣೆ ಗೊಳಿಸಿದರು

ಚುಂಚಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರವರನ್ನು ಗ್ರಾಮದ ಮುಖ್ಯದ್ವಾರದಿಂದ ಮಂಗಳವಾದ್ಯ ಡೊಳ್ಳುಕುಣಿತ. ವೀರಗಾಸೆ ಕುಣಿತ. ೧೦೮ ಕಳಸ ಹೊತ್ತ ಮಹಿಳೆಯರು ವೇದಿಕೆಗೆ ಬರಮಾಡಿಕೊಂಡು ಪಾದ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು ಈ ಸಂದರ್ಭದಲ್ಲಿ ಶಾಸಕ ಸುರೇಶ್ ಗೌಡ ಹಾಗೂ ಧರ್ಮಪತ್ನಿ ಗೀತಾ ಸುರೇಶಗೌಡ ರವರು ದೊಡ್ಡಮ್ಮ ದೇವಿ ದರ್ಶನ ಪಡೆದು ನಿರ್ಮಲಾನಂದನಾಥ ಸ್ವಾಮೀಜಿರವರ ಆಶೀರ್ವಾದವನ್ನು ಪಡೆದರು

ಮೂರು ದಿನಗಳ ಕಾಲ ನಡೆದ ದೇವಾಲಯದ ಕಾರ್ಯಕ್ರಮದಲ್ಲಿ ಮಹಾಗಣಪತಿ ಪೂಜೆ. ಪುಣ್ಯಾಹ. ದೇವಾನಾಂದಿ ಧ್ವಜಾರೋಹಣ. ತೀರ್ಥ ಸಂಗ್ರಹಣೆ. ಗ್ರಾಮ ಪ್ರದಕ್ಷಿಣೆ. ದೇವಾಲಯ ಪ್ರವೇಶ. ಪುಣ್ಯ. ಕಳಸ ಪ್ರತಿಷ್ಠಾಪನೆ ಕಾರ್ಯಗಳ ನೆರವೇರಿದವು

ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪರಮಪೂಜ್ಯ ಸ್ವಾಮೀಜಿಯವರು ಮನುಷ್ಯನಿಗೆ ಜೀವನವೆಂಬ ಪ್ರಯಾಣದಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ ಅವುಗಳನ್ನು ಎದುರಿಸಿ ಮುಂದೆ ನಡೆದಾಗ ಮಾತ್ರ ಬದುಕು ಕಟ್ಟಿಕೊಳ್ಳಬಹುದು ಕಷ್ಟಗಳು ಬಂದಾಗ ಪೂರ್ಣಪ್ರಮಾಣದಲ್ಲಿ ಸಮರ್ಪಿಸಿಕೊಂಡಗ ದೇವರು ನಿಮ್ಮನ್ನು ಕಾಪಾಡುತ್ತಾರೆ
ದೈವ ಕಾರ್ಯದಲ್ಲಿ ಗ್ರಾಮದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಸಂಬAಧಿಗಳು ಒಂದೆಡೆ ಸೇರಿ ಸಂಭ್ರಮಿಸುತ್ತಿದ್ದಿರಿ ಎಲ್ಲರೂ ದೇವರ ಕಾರ್ಯದಲ್ಲಿ ಭಾಗವಹಿಸಿರುವುದು ಸಂಬAಧಗಳನ್ನು ಗಟ್ಟಿಗೊಳ್ಳಲು ಸಹಕಾರಿಯಾಗುತ್ತದೆ ಎಂದರು

ಶಾಸಕ ಸುರೇಶ್ ಗೌಡ ಮಾತನಾಡಿ ಪರಮಪೂಜ್ಯ ನಿರ್ಮಲಾನಂದ ಸ್ವಾಮೀಜಿ ರವರು ನಾಗಮಂಗಲ ಕ್ಷೇತ್ರದ ಅಭಿವೃದ್ಧಿಗೆ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ ಗೂಡೆಹೋಸಹಳ್ಳಿ ಏತ ನೀರಾವರಿ ಯೋಜನೆ ಹಾಗೂ ಮಾರ್ಕೋನಹಳ್ಳಿ ಜಲಾಶಯದಿಂದ ಮನೆಮನೆಗೆ ನೀರು ತಲುಪಿಸುವ ಯೋಜನೆಗೆ ಪರಮಪೂಜ್ಯರ ಸಹಕಾರ ಅತ್ಯಮೂಲ್ಯವಾಗಿದೆ ಇನ್ನು ಈ ಗ್ರಾಮದ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದ್ದು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದರು

ವರದಿ: ಚಂದ್ರಮೌಳಿ ನಾಗಮಂಗಲ

error: