April 29, 2024

Bhavana Tv

Its Your Channel

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪೂಜ್ಯ ಮಹಾತ್ಮರ ನೆರಳಲ್ಲಿ ಬದುಕುತ್ತಿರುವುದು ನಮ್ಮ ಪುಣ್ಯ -ಶಾಸಕ ಸುರೇಶ್ ಗೌಡ

ನಾಗಮಂಗಲ:- 73 ನೇ ಗಣರಾಜ್ಯೋತ್ಸವ ಸಮಾರಂಭವನ್ನು ನಾಗಮಂಗಲ ತಾಲ್ಲೂಕು ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತು

ನಾಗಮಂಗಲ ಶಾಸಕ ಸುರೇಶ್ ಗೌಡರವರು ನಾಗಮಂಗಲ ಪೊಲೀಸ್ ಪಡೆ ವತಿಯಿಂದ ಗೌರವ ಸ್ವೀಕರಿಸಿ ಕನ್ನಡಾಂಬೆಯ. ಮಹಾತ್ಮಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು

ವೇದಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಸಭೆಯ ಉದ್ದೇಶಿಸಿ ಮಾತನಾಡಿದ ಶಾಸಕ ಸುರೇಶ್ ಗೌಡ ಭಾರತ ದೇಶ ಪ್ರಪಂಚದಲ್ಲೇ ತನ್ನದೇ ಆದ ನೆಲೆಗಟ್ಟು ರೂಪಿಸಿಕೊಂಡು ಪ್ರತಿಯೊಬ್ಬ ಪ್ರಜೆಯೂ ಕೂಡ ಸಮಾನತೆ ಹಾಗೂ ಶಾಂತಿಯುತವಾಗಿ ಪ್ರಜಾ ಪ್ರಜಾಪ್ರಭುತ್ವದಲ್ಲಿ ಬಾಳಲು ಅವಕಾಶ ಮಾಡಿಕೊಟ್ಟಿದೆ ನಮ್ಮ ಭಾರತ ದೇಶವು ಸದೃಢವಾಗಲು ನಮ್ಮ ಹಿರಿಯ ಮಹನೀಯರಾದರು ಸ್ವತಂತ್ರಪೂರ್ವ ಹೋರಾಟಗಾರರು ಹಾಗೂ ಮಹಾತ್ಮ ಗಾಂಧಿಯವರ ಶಾಂತಿ ಮಂತ್ರ ಮತ್ತು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಲೇಬೇಕು ಈ ಹಿರಿಯ ಮಹನೀಯರು ನೆರಳಲ್ಲಿ ಬದುಕುತ್ತಿರುವ ನಾವುಗಳೇ ಪುಣ್ಯವಂತರು ಎಂದರು

ಗಣರಾಜ್ಯೋತ್ಸವ ಸಂದೇಶ ನೀಡಿದ ತಾಲೂಕು ದಂಡಾಧಿಕಾರಿ ಕುಂಜಿ ಅಹಮದ್ ಮಾತನಾಡಿ ಈ ದೇಶದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ಪ್ರಜೆಯೂ ಕೂಡ ನಮ್ಮ ತಾಯಿನಾಡಿನ ರಾಷ್ಟ್ರಧ್ವಜ ಮತ್ತು ಸಂವಿಧಾನಕ್ಕೆ ಗೌರವ ಸಲ್ಲಿಸಬೇಕು ಹಿರಿಯರ ಮುಂದಾಲೋಚನೆಯಿAದ ಭಾರತ ದೇಶಕ್ಕೆ ಸ್ವತಂತ್ರ ಬಂದಿದೆ ಅವರ ಆಶಯಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡ ಬದಲಾವಣೆಯ
ಮನ್ವಂತರದತ್ತ ತೆಗೆದುಕೊಂಡು ಹೋಗಬೇಕಾದ ನಮ್ಮೆಲ್ಲರ ಕರ್ತವ್ಯ ಎಂದರು

ಇದೇ ಸಂದರ್ಭದಲ್ಲಿ ನಾಗಮಂಗಲ ತಾಲೂಕಿನ ಐದು ಯುವ ಪ್ರತಿಭೆಗಳನ್ನು ಸನ್ಮಾನಿಸಲಾಯಿತು ಸಮಗ್ರ ಕೆರೆ ಅಧ್ಯಯನ ಕುರಿತು ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪಡೆದಿರುವ ದೇವಲಾಪುರ ಉಮಾ, ಸಂಗೀತ ಕ್ಷೇತ್ರದಲ್ಲಿ ಘಟಂ ಮತ್ತು ತಬಲಾ ವಾದಕ ಶಮಿತ್, ಗುರುಗಳ ಮಾದಹಳ್ಳಿ ಪ್ರಾರ್ಥಮಿಕ ಶಾಲೆಯ ಬಾಲಪ್ರತಿಭೆ ತನುಶ್ರೀ, ಕ್ರೀಡಾ ವಿಭಾಗದಿಂದ ಜೀವನ್, ಕೃಷಿ ಕ್ಷೇತ್ರದಿಂದ ಕೊಣನೂರು ಪರಮೇಶ್ ಇವರುಗಳನ್ನು ತಾಲೂಕಾಡಳಿತ ಮತ್ತು ಶಾಸಕ ಸುರೇಶಗೌಡ ಸನ್ಮಾನಿಸಿದರು

ಕಾರ್ಯಕ್ರಮದಲ್ಲಿ ಕೆಲವು ದಿನಗಳ ಹಿಂದೆ ಮಳೆಯಿಂದ ತಾಲೂಕಿನ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡವರಿಗೆ ಶಾಸಕ ಸುರೇಶ್ ಗೌಡ ಚೆಕ್ ವಿತರಣೆ ಮಾಡಿದರು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಮುಖ್ಯಾಧಿಕಾರಿ ಶಾಂತಮ್ಮ, ಪುರಸಭೆ ಮುಖ್ಯಾಧಿಕಾರಿ ಶೈಲಜಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ
ಚಂದ್ರಮೌಳಿ, ಡಿ.ವೈ.ಎಸ್.ಪಿ. ನವೀನಕುಮಾರ್, ಸಿ.ಪಿ.ಐ.ಸುಧಾಕರ, ಪಿ.ಎಸ್.ಐ. ರವಿಶಂಕರ್, ಪುರಸಭೆ ಅಧ್ಯಕ್ಷೆ ಆಶಾ ವಿಜಯಕುಮಾರ್, ಉಪಾಧ್ಯಕ್ಷ ಜಾಫರ್ ಶರೀಫ್, ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಕುಮಾರ್. ಹಾಗೂ ನಾಗಮಂಗಲ ತಾಲೂಕು ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಮಂಗಲ

error: