May 14, 2024

Bhavana Tv

Its Your Channel

ಕನ್ನಡ ಭವನ ನಿರ್ಮಾಣ ಮಾಡುವುದೇ ನನ್ನ ಗುರಿ – ಕ.ಸಾ.ಪ. ಅಧ್ಯಕ್ಷ ಬಸವೇಗೌಡ

ನಾಗಮಂಗಲ:- ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆ ಆಗಿರುವ ಖರಡ್ಯ ಬಸವೇಗೌಡ ರವರನ್ನು ನಾಗಮಂಗಲ ಕ.ಸಾ.ಪ.ಸದಸ್ಯರು ಮತ್ತು ಕನ್ನಡ ಸಾಹಿತ್ಯ ಅಭಿಮಾನಿಗಳು ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಅಭಿನಂದಿಸಿ ಗೌರವಿಸಿದರು

ಗೌರವ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಬಸವೇಗೌಡ ನಾಗಮಂಗಲ ತಾಲೂಕಿನ ಸಮಸ್ತ ಸಾಹಿತ್ಯ ಅಭಿಮಾನಿಗಳು ಹಾಗೂ ಕ.ಸಾ.ಪ. ಸಂಘದ ಪದಾಧಿಕಾರಿಗಳು ನಾನು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೀಡಿದ ಸಹಕಾರ ತಾಲೂಕಿನ ವ್ಯಾಪ್ತಿಯ ಕನ್ನಡ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು ನಿಮ್ಮೆಲ್ಲರ ಜೊತೆಗೂಡಿ ನಾಗಮಂಗಲದಲ್ಲಿ ಕನ್ನಡದ ತೇರನ್ನು ಎಳೆಯಲು ಸಾಧ್ಯವಾಯಿತು ನಿಮ್ಮೆಲ್ಲರ ಸಹಕಾರ ಮಂಡ್ಯ ಜಿಲ್ಲಾ ಕ.ಸಾ.ಪ. ಜಿಲ್ಲಾಧ್ಯಕ್ಷರಾದ ಚಾಮಲಾಪುರ ರವಿಕುಮಾರ ನಿರ್ದೇಶನದಂತೆ ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಒಂದು ಅತ್ಯುತ್ತಮವಾದ ನೂತನ ಕನ್ನಡ ಭವನ ಸ್ಥಾಪನೆ ಮಾಡುವುದೇ ನನ್ನ ಗುರಿ ಜೊತೆಗೆ ಕನ್ನಡದ ತೇರನ್ನು ಗ್ರಾಮದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಯುವಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಯುವಜನತೆ ಮನದಾಳದಲ್ಲಿ ಕನ್ನಡ ಕವಿ ಕಾವ್ಯಗಳನ್ನು ತುಂಬಬೇಕಾದ ಕೆಲಸವನ್ನು ನಿಮ್ಮೆಲ್ಲರ ಜೊತೆಗೂಡಿ ಮಾಡುವೆ ಕನ್ನಡ ಕಾರ್ಯಚಟುವಟಿಕೆ ಸಮಯದಲ್ಲಿ ನನ್ನ ತಪ್ಪುಗಳನ್ನು ಗುರುತಿಸಿ ತಿದ್ದಬೇಕು ಎಲ್ಲರೂ ಸಹಕಾರ ಹಾಗೂ ಉತ್ತಮ ಸಲಹೆಯನ್ನು ನೀಡಬೇಕೆಂದು ಕೇಳಿಕೊಂಡರು

ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಗಣ್ಯರಾದ ವಕೀಲ ರಾಮೇಗೌಡ ಮಾತನಾಡಿ ನೂತನ ಅಧ್ಯಕ್ಷರಾದ ಬಸವೇಗೌಡ ರವರು ಸೌಮ್ಯ ಸ್ವಭಾವ ಹೊಂದಿದ್ದು ಎಲ್ಲಾರ ಜೊತೆಗೂಡಿ ಕೆಲಸ ಮಾಡಿದ್ದರಿಂದ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತರುತ್ತದೆ ಉತ್ತಮ ವ್ಯಕ್ತಿಗಳ ಜೊತೆಗೂಡಿ ಉತ್ತಮ ತಂಡವನ್ನು ಕಟ್ಟುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ ಕನ್ನಡ ಸಾಹಿತ್ಯ ಪರಿಷತ್ತು ಎಂದು ಕೂಡ ಎಡಪಂಥೀಯ ಸಾಹಿತ್ಯ ಹಾಗೂ ಬಲಪಂಥೀಯ ಸಾಹಿತ್ಯ ಎಂಬ ನಿಲುವನ್ನು ಬದಿಗಿಟ್ಟು ಕನ್ನಡ ಸಂಘಟನೆಯ ಕೆಲಸವಾಗಲು ದುಡಿಯಬೇಕು ಸಂಘದಲ್ಲಿ ಯಾವುದೇ ವ್ಯಕ್ತಿಯು ಅಧಿಕಾರ ಕಳೆದುಕೊಂಡ ನಂತರ ನಿಷ್ಕ್ರಿಯರಾಗಿ ಉಳಿಯಬಾರದು ಕನ್ನಡದ ಕೆಲಸಕ್ಕಾಗಿ ಪ್ರತಿಕ್ಷಣವೂ ಕೂಡ ಸಕ್ರಿಯರಾಗಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಕನ್ನಡ ಭಾಷೆಗೆ ಧಕ್ಕೆ ಬಂದಾಗ ಹೋರಾಟದ ಕಿಚ್ಚು ಇರಬೇಕು ಕನ್ನಡ ಭಾಷೆ ಹಾಗು ನೆಲ ಸುಭದ್ರತೆಗಾಗಿ ನಾವೆಲ್ಲರೂ ಹೋರಾಟ ಮಾಡುವುದು ಕನ್ನಡ ನಾಡಿನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದರು

ಅಭಿನAದನಾ ಸಮಾರಂಭದಲ್ಲಿ ಕನ್ನಡ ಸಂಘದ ಅಧ್ಯಕ್ಷ ನಾ.ಸು. ನಾಗೇಶ್. ಕಲಿಂಉಲ್ಲ. ತೆಂಗು ಬೆಳೆಗಾರರ ಸಂಘದ ಉಪಾಧ್ಯಕ್ಷ ನಾಗೇಶ್. ಸುಗ್ಗಿ ಶಂಕರ್. ಲಯನ್ ಕೆಂಪೇಗೌಡ. ಪರಮೇಶ್. ಗಿರೀಶ್. ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: