May 14, 2024

Bhavana Tv

Its Your Channel

ಸುಗ್ಗಿ ಸಂಭ್ರಮಾಚರಣೆಯಲ್ಲಿ ಹೆಜ್ಜೆ ಹಾಕಿದ ರೈತ ಮಹಿಳೆಯರು.

ನಾಗಮಂಗಲ: ಆಧುನಿಕತೆ ಮತ್ತು ತಂತ್ರಜ್ಞಾನ ಮುಂದುವರೆದರೂ ವರ್ಷವಿಡೀ ತನ್ನ ಕುಟುಂಬದ ಶ್ರಮದ ಬೆವರಿನ ಪ್ರತಿಫಲವಾಗಿ ಬೆಳೆದ ಫಸಲನ್ನು ಸಾರ್ವಜನಿಕ ರಸ್ತೆಗಳಲ್ಲಿ ಒಕ್ಕಣೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಬೆವರು ಸುರಿಸಿ ಬೆಳೆದ ಬೆಳೆಗೆ ನೀಡುತ್ತಿದ್ದ ಗೌರವ ಮರೆಯಾಗುತ್ತಿರುವ ಪ್ರಸ್ತುತ ದಿನಮಾನದಲ್ಲಿಯೂ ಒಕ್ಕಣೆ ಕಣದಲ್ಲಿ ರಾಗಿ ರಾಶಿಯ ಮತ್ತು ರೈತನ ಜೀವನಾಡಿ ಗೋವುಗಳ ಪೂಜೆಯೊಂದಿಗೆ ಆಚರಿಸಿದ ಸುಗ್ಗಿ ಸಂಭ್ರಮ ನಿಜಕ್ಕೂ ಗ್ರಾಮೀಣ ಸೊಗಡಿನ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತಿರೂಪವಾಗಿ ಮೇಳೈಸುತ್ತಿತ್ತು.

ಹೌದು! ಇಂತಹ ಪಾರಂಪರಿಕ ಆಚರಣೆ ಕಂಡುಬAದಿದ್ದು, ಸಕ್ಕರೆ ನಾಡು ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಕಸಬಾ ಹೋಬಳಿ ಭೈರನಹಳ್ಳಿ ಗ್ರಾಮದ ಬೆಟ್ಟಸ್ವಾಮಿಗೌಡರ ಜಮೀನಿನ ಒಕ್ಕಣೆ ಕಣದಲ್ಲಿ.
ರೈತರ ಬದುಕಿಗೆ ನೆರವಾಗುವ ಉದ್ದೇಶದಿಂದ ಸ್ಥಾಪಿತವಾಗಿರುವ ಮೈಸೂರಿನ ಒಡಿಪಿ ಸಂಸ್ಥೆಯ ಕೃಷಿಕಣಜ ರೈತ ಉತ್ಪಾದನಾ ಸಮಿತಿ ಹಾಗೂ ಅಂಚೆಚಿಟ್ಟನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ರಾಗಿಯ ರಾಶಿ ಸುತ್ತ ಬಣ್ಣ-ಬಣ್ಣದ ರಂಗೋಲಿಯ ಚಿತ್ತಾರ ಹಾಗೂ ಒಕ್ಕಣೆಗೆ ಅಗತ್ಯವಿರುವ ಪರಿಕರಗಳು ಮಾತ್ರವಲ್ಲದೆ ಸಿಂಗರಿಸಲಾದ ರಾಸುಗಳು ಕಾರ್ಯಕ್ರಮದ ಮೆರಗು ಹೆಚ್ಚಿಸಿದ್ದವು. ಇನ್ನು ರಾಶಿಯ ಸುತ್ತ ರೈತ ಬಾಂದವರು, ರೈತ ಮಹಿಳೆಯರು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತಮಟೆಯ ಸದ್ದಿಗೆ ಹೆಜ್ಜೆ ಹಾಕಿದ್ದಂತೂ ವಿಶೇಷ ಹಾಗೂ ವೈಶಿಷ್ಟ್ಯ ಪೂರ್ಣವಾಗಿತ್ತು.

ರಾಶಿ ಪೂಜೆಯ ನಂತರ ನಡೆದ ಸರಳ ಸಮಾರಂಭದಲ್ಲಿ ಸ್ಥಳೀಯ ರೈತ ಮಹಿಳೆ ಅರುಣಾ ಹಾಗೂ ರೈತ ಬೆಟ್ಟಸ್ವಾಮಿಗೌಡ, ಮರೆಯಾಗುತ್ತಿರುವ ಬೆಳೆಯ ಒಕ್ಕಣೆ ಪರಂಪರೆಯನ್ನು ಪುನರ್ ಮನನ ಮಾಡಿಸಿಕೊಡುವ ಪ್ರಯತ್ನ ಮಾಡಿದ ಒಡಿಪಿ ಸಂಸ್ಥೆಯ ಕಾರ್ಯವೈಖರಿಗೆ ಅಭಿನಂದಿಸಿದರು.

ಒಡಿಪಿ ಸಂಸ್ಥೆಯ ಸಂಯೋಜಕ ರಮೇಶ್ ಹಾಗೂ ಕೃಷಿಕಣಜ ರೈತ ಉತ್ಪಾದನಾ ಸಮಿತಿಯ ಅಧ್ಯಕ್ಷ ಹಾಗೂ ಪತ್ರಕರ್ತ ಎಸ್.ವೆಂಕಟೇಶ್ ಮಾತನಾಡಿ, ರಸ್ತೆಯಲ್ಲಿ ಮಾಡುವ ಒಕ್ಕಣೆ ಮತ್ತು ಕಣದಲ್ಲಿ ಮಾಡಬಹುದಾದ ಒಕ್ಕಣೆಯ ವ್ಯತ್ಯಾಸ ಹಾಗೂ ವೃದ್ದಿಸುವ ಮಾನವೀಯ ಸಂಬAಧದ ಮೌಲ್ಯಗಳ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಒಡಿಪಿ ಸಂಸ್ಥೆಯ ಸಿಬ್ಬಂದಿ ಜಯಶೀಲ, ಅನುರಾಧ, ಗ್ರಾ.ಪಂ.ಪಿಡಿಒ ಸುನೀತ, ತಾಲ್ಲೂಕು ರೈತ ಸಂಘದ ಸತೀಶ್ ದಡಗ, ರೈತ ಬಂಧು ಸಮಿತಿಯ ಕಾರ್ಯದರ್ಶಿ ಸಂತೋಷ್ ಹಾಗೂ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ.

error: