April 29, 2024

Bhavana Tv

Its Your Channel

ಲತಾ ಮಂಗೇಶ್ಕರ್ ಹಾಗೂ ಇಬ್ರಾಹಿಂ ಸುತಾರ್ ದೇಶದ ಎರಡು ಕಣ್ಣುಗಳು -ಖರಡ್ಯ ಬಸವೇಗೌಡ

ನಾಗಮಂಗಲ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಸಂತಕವಿ ಇಬ್ರಾಹಿಂ ಸುತಾರ್ ಹಾಗೂ ಗಾಯನ ಪ್ರಪಂಚದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ರವರಿಗೆ ಇಂದು ಪಟ್ಟಣದ ಕ.ಸಾ.ಪ. ಕಚೇರಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಯಿತು

ವೇದಿಕೆಯಲ್ಲಿ ಲತಾ ಮಂಗೇಶ್ಕರ್ ಹಾಗೂ ಸಂತ ಸತಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು

ಶ್ರದ್ದಾಂಜಲಿ ಕಾರ್ಯಕ್ರಮ ಕುರಿತು ನಾಗಮಂಗಲ ಕ.ಸಾ.ಪ. ಅಧ್ಯಕ್ಷ ಖರಡ್ಯ ಬಸವೇಗೌಡ ಮಾತನಾಡಿ ಇಬ್ಬರು ಮಹನೀಯರು ವಿದ್ಯಾಭ್ಯಾಸದಲ್ಲಿ ಮೂರನೇ ತರಗತಿ ಓದಿದರೂ ಕೂಡ ತಮ್ಮ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ಗಾಯನ ಪ್ರಪಂಚಕ್ಕೆ 1930 ಅವಧಿಯಲ್ಲಿ ಪಾದಾರ್ಪಣೆ ಮಾಡಿ ಎಂಟು ದಶಕಗಳ ಕಾಲ ಎಲ್ಲಾ ವಯಸ್ಸಿನ ವರ್ಗದವರಿಗೂ ರಂಜಿಸುವAತೆ ಮನಮುಟ್ಟುವ ಸಂಗೀತದ ಮೂಲಕ ಹಾಡುಗಳನ್ನು ನೀಡಿದ್ದಾರೆ ಇನ್ನು ಸಂತ ಇಬ್ರಾಹಿಂ ಸುತಾರ್ ರವರು ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ ಅವಿದ್ಯಾವಂತರಾಗಿದ್ದೂ ಮಾತೃಭಾಷೆ ಉರ್ದು ಕಲಿತಿದ್ದರೂ ಕೂಡ ಹಲವಾರು ಭಾಷೆಗಳನ್ನು ಕಲಿತು ತತ್ವಪದ. ವಚನ .ಗ್ರಂಥಗಳು. ಮತ್ತು ಪುರಾಣ ಕಥೆಗಳ ಓದಿ ತಿಳಿದು ಜನತೆಗೆ ವಚನಗಳ ಮೂಲಕ ರಾಷ್ಟ್ರೀಯ ಭಾವೈಕ್ಯ ಸಾರಿದ ಮಹಾ ಸಂತರು ಇಬ್ಬರು ಮಹನೀಯರು ನಿಧನ ಹೊಂದಿರುವುದು ದೇಶಕ್ಕೆ ಬಹಳಷ್ಟು ನಷ್ಟ ಉಂಟಾಗಿದೆ ಎಂದರು

ಶ್ರದ್ಧಾAಜಲಿ ಕಾರ್ಯಕ್ರಮದಲ್ಲಿ ಹೇಮರಾಜ್. ಗಿರೀಶ್. ಪರಮೇಶ್. ಮಂಜುಳ. ವಿಜಯಲಕ್ಷ್ಮಿ. ಚನ್ನಬಸವ. ಶ್ರೀನಿವಾಸಗೌಡ. ಜಯಸ್ವಾಮಿ .ಕಾ.ಸ.ಪ. ಸದಸ್ಯರು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: