April 25, 2024

Bhavana Tv

Its Your Channel

ದೊಡ್ಡಹಾರನಹಳ್ಳಿ ಗ್ರಾಮದಲ್ಲಿ ೫೦ ಜನರಿಗೆ ಜ್ವರ, ಕೆಮ್ಮು, ಶೀತ ಹಾಗೂ ಕೊರೋನಾ ಭೀತಿ ಎಂಬ ಸುದ್ದಿ ಸಂಪೂರ್ಣ ಸುಳ್ಳು- ತಹಶೀಲ್ದಾರ್ ಎಂ. ಶಿವಮೂರ್ತಿ

ಇಂದು ದೃಶ್ಯ ಮಾಧ್ಯಮಗಳಲ್ಲಿ ಇಡೀ ಗ್ರಾಮದ ಜನರೆಲ್ಲರೂ ಕೆಮ್ಮು ಜ್ವರದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿರುವುದು ಸಂಪೂರ್ಣ ಸುಳ್ಳು ಎಂದು ಗ್ರಾಮಸ್ಥರು ಸ್ಪಷ್ಠಪಡಿಸಿದ್ದಾರೆ..
ದೊಡ್ಡಹಾರನಹಳ್ಳಿ ಗ್ರಾಮಕ್ಕೆ ಇಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಚೇಗೌಡ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳ ತಂಡದೊAದಿಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಮತ್ತು ತಹಶೀಲ್ದಾರ್ ಶಿವಮೂರ್ತಿ ಗ್ರಾಮಸ್ಥರೊಂದಿಗೆ ಆರೋಗ್ಯ ಕುಶಲೋಪರಿ ನಡೆಸಿ, ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ ಗ್ರಾಮಸ್ಥರು ಆರೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡರು…ನಮ್ಮ ಗ್ರಾಮದ ಬಗ್ಗೆ ಸುಳ್ಳು ಸುದ್ಧಿ ಹಾಗೂ ವದಂತಿಯನ್ನು ಫೇಸ್ ಬುಕ್ ಹಾಗೂ ವ್ಯಾಟ್ಸಫ್ ಮೂಲಕ ಹರಡಿ ದೃಶ್ಯಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿಸಿ ೫೦ ಜನರು ಕೊರೋನಾ ಶಂಕಿತರಿದ್ದಾರೆ, ಜ್ವರ, ಕೆಮ್ಮು ಹಾಗೂ ವಿಷಮಶೀತ ಜ್ವರದಿಂದ ನರಳುತ್ತಿದ್ದಾರೆ ಎಂದು ಬಿಂಬಿಸಿ ಕೆಟ್ಟಹೆಸರು ತಂದಿರುವ ಗ್ರಾಮದ ಯುವಕ ದೊಡ್ಡಹಾರನಹಳ್ಳಿ ಮಲ್ಲೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಮತ್ತು ತಹಶೀಲ್ದಾರ್ ಶಿವಮೂರ್ತಿ ಅವರನ್ನು ಒತ್ತಾಯಿಸಿದರು.

ದೊಡ್ಡಹಾರನಹಳ್ಳಿ ಗ್ರಾಮಕ್ಕೆ ಜಿಲ್ಲಾ ಕೊರೋನಾ ನಿಯಂತ್ರಣ ನೋಡೆಲ್ ಅಧಿಕಾರಿ ಮುರುಳೇಶ್, ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್, ಸಂತೇಬಾಚಹಳ್ಳಿ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ಮಧುಸೂದನ್, ಡಾ.ಹರ್ಷವರ್ಧಿನಿ, ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಧೃಶ್ಯ ಮಾಧ್ಯಮಗಳ ವರದಿಯು ಸುಳ್ಳು ಎಂಬುದನ್ನು ಖಚಿತಪಡಿಸಿಕೊಂಡು ಗ್ರಾಮಸ್ಥರುಗಳಿಗೆ ಆತ್ಮವಿಶ್ವಾಸ ತುಂಬಿದರು.

ದೊಡ್ಡಹಾರನಹಳ್ಳಿ ಗ್ರಾಮದಲ್ಲಿ ೫೦ಜನರಿಗೆ ಕೊರೋನಾ ಸೋಂಕು ಹರಡಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಜನಸಾಮಾನ್ಯರಲ್ಲಿ ಆತಂಕ ಹಾಗೂ ಭೀತಿಯನ್ನು ಹುಟ್ಟಿಸಿದ ಯುವಕ ದೊಡ್ಡಹಾರನಹಳ್ಳಿ ಮಲ್ಲೇಶ್ ನ ವಿರುದ್ಧ ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್ ದೂರು ನೀಡಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿರುವ ಪಟ್ಟಣ ಪೋಲಿಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿಧ್ದಾರೆ..
ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ.

error: