May 15, 2024

Bhavana Tv

Its Your Channel

Big Breaking:ರಾಜ್ಯದಲ್ಲಿ ಒಂದೇ ದಿನ ೯೧೮ ಕೇಸ್ ಪತ್ತೆ, ಬೆಂಗಳೂರಿನಲ್ಲಿ ೫೯೬ ಸೋಂಕು

ಬೆoಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ ೯೧೮ ಮಂದಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧೧,೯೨೩ಕ್ಕೆ ಏರಿಕೆಯಾಗಿದೆ.

ಈ ಪೈಕಿ ಬೆಂಗಳೂರು ನಗರದಲ್ಲಿ ಒಂದೇ ಕಡೆ ೫೯೬ ಜನರಿಗೆ ಕೊವಿಡ್ ಸೋಂಕು ದೃಢವಾಗಿದೆ. ಇಲ್ಲಿವರೆಗೂ ಸಿಲಿಕಾನ್ ಸಿಟಿಯಲ್ಲಿ ವರದಿಯಾಗಿರುವ ಪ್ರಕರಣಗಳಲ್ಲಿ ಇದೇ ಹೆಚ್ಚು.

ಕಳೆದ ೨೪ ಗಂಟೆಯಲ್ಲಿ ೧೧ ಜನರು ಮೃತರಾಪಟ್ಟಿದ್ದಾರೆ. ಈವರೆಗೂ ಒಟ್ಟು ೧೯೧ ಜನರು ಸೋಂಕಿನಿoದ ಸಾವನ್ನಪ್ಪಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೪೪೪೧ಕ್ಕೆ ಏರಿಕೆಯಾಗಿದೆ.

ಇಂದಿನ ವರದಿಯಲ್ಲಿ ಜಿಲ್ಲೆವಾರು ನೋಡುವುದಾರೇ ಬೆಂಗಳೂರಿನಲ್ಲಿ ೫೯೬ ಕೇಸ್, ದಕ್ಷಿಣ ಕನ್ನಡದಲ್ಲಿ ೪೯ ಕೇಸ್, ಕಲಬುರಗಿಯಲ್ಲಿ ೩೩ ಕೇಸ್, ಬಳ್ಳಾರಿ ಹಾಗೂ ಗದಗದಲ್ಲಿ ತಲಾ ೨೪ ಕೇಸ್, ಧಾರವಾಡದಲ್ಲಿ ೧೯ ಕೇಸ್, ಬೀದರ್‌ನಲ್ಲಿ ೧೭ ಪ್ರಕರಣ, ಉಡುಪಿ, ಕೋಲಾರ ಹಾಗೂ ಹಾಸನದಲ್ಲಿ ತಲಾ ೧೪ ಕೇಸ್, ಯಾದಗಿರಿ, ಶಿವಮೊಗ್ಗ, ತುಮಕೂರು, ಚಾಮರಾಜನಗರ, ತಲಾ ೧೩ ಪ್ರಕರಣ, ಮೈಸೂರು ಮತ್ತು ಮಂಡ್ಯದಲ್ಲಿ ತಲಾ ೧೨ ಕೇಸ್ ಕೊಡಗು ೬, ರಾಯಚೂರು ೬, ದಾವಣಗೆರೆ ೬, ಬೆಂಗಳೂರು ಗ್ರಾಮಾಂತರ ೫ ಉತ್ತರ ಕನ್ನಡ ೨ ಬಾಗಲಕೋಟೆ ೨, ಚಿಕ್ಕಮಗಳೂರು ೨, ಚಿತ್ರದುರ್ಗ ೨, ಬೆಳಗಾವಿ ೧, ಚಿಕ್ಕಬಳ್ಳಾಪುರ ೧,ಕೊಪ್ಪಳ ೧, ಹಾವೇರಿ ೧ ಒಳಗೊಂಡಿದೆ.

ಇoದು ೩೭೧ ಜನರು ಸೋಂಕಿನಿoದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ ೭೨೮೭ ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

error: