April 29, 2024

Bhavana Tv

Its Your Channel

“ಸಿದ್ಧ ಸಮಾಧಿ ಯೋಗ”ದ ಧ್ಯಾನಿಗಳಿಂದ ನಡೆದ 3ನೇ ವರ್ಷದ ಪಾದಯಾತ್ರೆ ಸಂಪನ್ನ

ಬೈoದೂರು: ಪರಮಪೂಜ್ಯ ಯೋಗ ಬ್ರಹ್ಮ ಋಷಿಪ್ರಭಾಕರ್ ಗುರೂಜಿಯವರ ಆಶೀರ್ವಾದದಿಂದ ಯೋಗ ಶಿಕ್ಷಕರಾದ ಆಚಾರ್ಯ ಕೇಶವಜೀ ಬೆಳ್ನಿ ಇವರ ಸಾರಥ್ಯದಲ್ಲಿ ನಡೆದ “ಸಿದ್ಧ ಸಮಾಧಿ ಯೋಗ”ದ ಧ್ಯಾನಿಗಳಿಂದ ನಡೆದ ೩ನೇ ವರ್ಷದ ೨ದಿನಗಳ ಕೊಲ್ಲೂರು ಮಾರಣಕಟ್ಟೆ ಪಾದಯಾತ್ರೆಯು ವಿದ್ಯುಕ್ತವಾಗಿ ಸಂಪನ್ನಗೊoಡಿತು.

ಭಾನುವಾರ ಬೆಳಿಗ್ಗೆ ೪:೨೦ಕ್ಕೆ ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಟ ಯಾತ್ರಿಕರು ೭ಗಂಟೆಗೆ ಬಿಳಿಶಿಲೆ ವಿನಾಯಕ ದೇವಸ್ಥಾನ ತಲುಪಿ ದೇವರ ದರ್ಶನ ಪಡೆದು ಮುಂದೆ ಸಾಗಿದರು. ಬೆಳಿಗ್ಗೆ ೧೦ಗಂಟೆಗೆ ಹಾಲ್ಕಲ್ ಮಹಾಸತಿ ದೇವಸ್ಥಾನ ತಲುಪಿ ಅಲ್ಲೇ ಬೆಳಗಿನ ಉಪಹಾರ ಸವಿದರು.

ಅಲ್ಲಿಂದ ಮುಂದೆ ಸಾಗಿದ ಯಾತ್ರೆ ೧೧:೩೦ಕ್ಕೆ ಸೌಪರ್ಣಿಕ ನದಿ ತಲುಪಿದ ಎಲ್ಲಾ ಭಕ್ತರು ನದಿಸ್ನಾನ ಮುಗಿಸಿದರು. ವಿಶೇಷ ಎಂದರೆ ಪಾದಯಾತ್ರೆಗಳ ಜೊತೆ ೨ತಿಂಗಳ ನಾಯಿಮರಿಯೊಂದು ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕೊಲ್ಲೂರಿಗೆ ಬಂದಿದ್ದು ಎಲ್ಲರ ಗಮನ ಸೆಳೆಯಿತು.

೧ಗಂಟೆಗೆ ಮುಕಾಂಬಿಕಾ ದೇವಿ ದರ್ಶನ ಪಡೆದ ನಂತರ ಮದ್ಯಾಹ್ನದ ಅನ್ನಪ್ರಸಾದ ಸವಿದರು. ಮತ್ತು ಲಘು ವಿಶ್ರಾಂತಿ ಪಡೆದರು.

ಸಂಜೆ ೫ಗಂಟೆಗೆ ಸ್ನಾನ ಮುಗಿಸಿ ಪ್ರಾಣಾಯಾಮ ಧ್ಯಾನ ಮುಗಿಸಿ ಮತ್ತೆ ದೇವರ ದರ್ಶನ ಪಡೆದು ಸಂಜೆ ದೇವಸ್ಥಾನದ ಆವರಣದಲ್ಲಿ ನಡೆಯುವ ಸೇವೆಗಳಾದ ದೀಪರಾಧನೆ, ಪಲ್ಲಕಿ ಉತ್ಸವ, ಚಿನ್ನದ ರಥೋತ್ಸವಗಳಲ್ಲಿ ಭಾಗಿಯಾಗಿ ಕಣ್ಮನ ತುಂಬಿಕೊoಡರು.
ಈ ಸಮಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ಯೋಗ ಶಿಕ್ಷಕರಾದ ಆಚಾರ್ಯ ಕೇಶವಜಿ ಯವರನ್ನು ಸನ್ಮಾನಿಸಿತ್ತು. ಮತ್ತೆ ರಾತ್ರಿ ಅನ್ನಪ್ರಸಾದ ಮುಗಿಸಿದ ಯಾತ್ರಿಕರು ದೇವಸ್ಥಾನದ ಯಾತ್ರಾನಿವಾಸದಲ್ಲಿ ವಿಶ್ರಾಂತಿ ಪಡೆದರು.

ಬೆಳಿಗ್ಗೆ ೩ಗಂಟೆಗೆ ಪಾದಯಾತ್ರಿಕರು ನಿತ್ಯ ಕರ್ಮ ಸ್ನಾನದ ನಂತರ ಸೂರ್ಯನಮಸ್ಕಾರ, ಪ್ರಾಣಾಯಾಮ, ಧ್ಯಾನ ಅನುಷ್ಠಾಧಿಗಳನ್ನು ಮುಗಿಸಿ ೪:೩೦ ಮಾರಣಕಟ್ಟೆಗೆ ಹೋರಟರು. ಬೆಳಿಗ್ಗೆ ೯ಕ್ಕೆ ಮಾರಣಕಟ್ಟೆ ತಲುಪಿದರು. ನಂತರ ಬೆಳಗಿನ ಉಪಹಾರ ಮುಗಿಸಿ ಸ್ನಾನ ಮಾಡಿ ಶ್ರೀ ಬ್ರಹ್ಮಲಿಂಗೇಶ್ವರನ ದರ್ಶನ ಪಡೆದು ಸೇವೆಗಳನ್ನು ಮಾಡಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯವರು ಪಾದಯಾತ್ರೆಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ದೇವಸ್ಥಾನದ ಅನುವಂಶಿಕ ಮೊಕ್ತೇಶ್ವರರಾದ ಚಿತ್ತೂರು ಸದಾಶಿವ ಶೆಟ್ಟಿ ಮಾತನಾಡಿ “ಸಿದ್ಧ ಸಮಾಧಿ ಯೋಗ” ಕಳೆದ ಹಲವು ವರ್ಷಗಳಿಂದ ಸಮಾಜಕ್ಕೆ ಉತ್ತಮವಾದ ಆರೋಗ್ಯ ಮತ್ತು ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ. ೩ನೇ ವರ್ಷದ ಪಾದಯಾತ್ರೆಯಲ್ಲಿ ಈ ವರ್ಷಕ್ಕೆ ಮಾರಣಕಟ್ಟೆಗೂ ಸಹ ಬಂದಿರುತ್ತಾರೆ. ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯ ಸಂದೇಶ ನೀಡುವ ಸಿದ್ಧ ಸಮಾಧಿ ಯೋಗ ಬೆಂಬಲಿಸಿ ಪ್ರತಿವರ್ಷ ಪಾದಯಾತ್ರೆಗೆ ಸಹಕರಿಸಿ ಎಂದು ವಿನಂತಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಯಾತ್ರೀಕರ ಉಪಹಾರವನ್ನು ಶ್ರೀಗಣೆಶ್ ಗಾಣಿಗ ಮತ್ತು ಅನಿಲ್ ಶೇಟ್ ಉಪ್ಪುಂದ ನೋಡಿಕೊಂಡರು.

error: