May 11, 2024

Bhavana Tv

Its Your Channel

ಹೂವಿನ ಬೆಳೆಗಾರರ ಸಹಕಾರ ಸಂಘದ ೨೦೨೦-೨೧ ನೇ ಸಾಲಿನ ಪ್ರಥಮ ವಾರ್ಷಿಕ ಮಹಾಸಭೆ

ಕಾರ್ಕಳ: ಹೂವಿನ ಬೆಳೆಗಾರರ ಸಹಕಾರ ಸಂಘ ನಿ, ಕಾರ್ಕಳ ಇದರ ೨೦೨೦-೨೧ ನೇ ಸಾಲಿನ ಪ್ರಥಮ ವಾರ್ಷಿಕ ಮಹಾಸಭೆ ಯು ೧೮-೧೨-೨೦೨೧ ನೇ ಶನಿವಾರ ಅಪರಾಹ್ನ ೩.೦೦ಕ್ಕೆ ಸರಿಯಾಗಿ ಸಂಘದ ಮುಖ್ಯ ಕಚೇರಿಯ ವಠಾರದಲ್ಲಿ ನಡೆಯಿತು.

ಪ್ರಾರ್ಥನೆಯನ್ನು ರಮೇಶ್ ಬಿ. ನಿಟ್ಟೆ ಮಾಡಿದರು. ಬಂದಿರುವAತಹ ಅತಿಥಿ ಗಣ್ಯರನ್ನು ಹಾಗೂ ಎಲ್ಲ ಸದಸ್ಯರನ್ನು ಫ್ಲೇವಿಯ ಆರಾನ್ಹ ಸ್ವಾಗತ ಕೋರಿದರು. ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿಯಾದ ಕುಟ ಲತಾರವರು ಹಿಂದಿನ ಸಭೆಯ ನಿರ್ಣಯ, ಮಹಾಸಭೆಯ ಆಮಂತ್ರಣ ಪತ್ರಿಕೆ ಹಾಗೂ ೨೦೨೧-೨೨ ನೇ ಸಾಲಿನ ಅಂದಾಜು ಆಯಾವ್ಯಾಯ ಬಜೆಟ್ಟನು ಓದಿ ದಾಖಲಿಸಿ ಮಂಜೂರು ಮಾಡಿದರು…

ಸಂಘಕ್ಕೆ ಅತೀ ಹೆಚ್ಚು ಡೆಪಾಸಿಟ್ ಇಟ್ಟ ವೈಲೆಟ್ ಕಾಬ್ರಾಲ್ ಹಾಗೂ ನಿರ್ದೇಶಕರಾದ ವೆಂಕಟರಮಣ ಶರ್ಮ , ಹಾಗೂ ಅತೀ ಹೆಚ್ಚು ಡೆಪಾಸಿಟ್‌ಗೆ ಸಹಾಯ ಮಾಡಿದ ಸಂಸ್ಥೆಯ ನಿರ್ದೇಶಕರಾದ ಫ್ಲೋರ ಮೆಂಡೋನ್ಸರನ್ನು, ಅತೀ ಹೆಚ್ಚು ಮೆಂಬರ್ ಶಿಪ್‌ಗೆ ಸಹಾಯ ಮಾಡಿದ ಸಂಸ್ಥೆಯ ನಿರ್ದೇಶಕರಾದ ಉದಯ್ ವಿ. ಶೆಟ್ಟಿ ಮತ್ತು ಕುಟ ಯಶೋಧ ಮೊಯಿಲಿ ಹಾಗೂ ಸಂಸ್ಥೆಯ ಪಿಗ್ಮಿ ಏಜೆಂಟ್ ಆದ ಶರಣಪ್ಪ ಬಾಲಣ್ಣ ಗೌಡ ಇವರನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ನಿರ್ದೇಶಕರು ಸೇರಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು. ಬಂದಿರುವAತಹ ಸದಸ್ಯರಿಗೆ ಶೇರ್ ಸರ್ಟಿಫಿಕೇಟ್ ಹಂಚಿಕೆ ಮಾಡಲಾಯಿತು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಫ್ರಾನ್ಸಿಸ್ ಡಿಸೋಜ ಇವರು ಕೆಲವೊಂದು ತತ್ತ್ವಜ್ಞಾನಿಗಳು ಕೆಲವೊಂದು ತತ್ವ ಸಿದ್ಧಾಂತಗಳನ್ನು ಮಂಡಿಸಿರುವ ತತ್ವ ಸಿದ್ದಂತದAತೆ, ಯಶಸ್ಸು ಪಡೆಯಬೇಕಾದಲ್ಲಿ ನಿನ್ನನ್ನು ನೀನು ಗುರುತಿಸಿ, ನಿನ್ನನ್ನು ನೀನು ತಿದ್ದಿ, ನಿನಗೆ ನೀನು ಸಹಕರಿಸದಿದ್ದಲ್ಲಿ ಯಾವತ್ತೂ ಯಶಸ್ಸನ್ನು ಪಡೆಯಲಾರೆ ಎಂಬತ್ತೆ ಈ ಹೂವಿನ ಬೆಳೆಗಾರರ ಸಹಕಾರ ಸಂಘದಲ್ಲಿ ತಮ್ಮ ಪ್ರಾತಿನಿಧ್ಯ ಸಹಾಯ ಮತ್ತು ಸಹಕಾರ ಇಲ್ಲದೇ ಇದ್ದಲ್ಲಿ ಈ ಸಂಸ್ಥೆಯು ಶ್ರೇಯಸ್ಸು ಮತ್ತು ಅಭಿವೃದ್ಧಿಯನ್ನು ಹೊಂದುವುದು ಕಷ್ಟಸಾಧ್ಯ. ತಾವು ಈಗಾಗಲೇ ತಮ್ಮ ಸಹಕಾರವನ್ನು ಸಂಪೂರ್ಣವಾಗಿ ನೀಡಿದ್ದೀರಿ, ಇನ್ನೂ ಮುಂದೆಯೂ ತಮ್ಮ ಸಹಕಾರವನ್ನು ಸಹಭಾಗಿತ್ಯವನ್ನು ಆಶಿಸುತ್ತೇನೆ ಎಂದು ತಿಳಿಸಿದರು. ಹೂವಿನ ಬೆಳೆಗಾರರ ಸಹಕಾರ ಸಂಘ (ನಿ.) ಕಾರ್ಕಳ ಇದರ ಪ್ರಥಮ ವಾರ್ಷಿಕ ಮಹಾಸಭೆಯ ಈ ಸಂದರ್ಭದಲ್ಲಿ ಸಂಘದ ಜೊತೆ ಕೈ ಜೋಡಿಸಿದ ಸದಸ್ಯರಿಗೆ, ಬ್ಯಾಂಕ್ ಖಾತೆ ತೆರೆದ ಗ್ರಾಹಕರಿಗೆ, ಠೇವಣಿ ನೀಡಿ ಪ್ರೋತ್ಸಾಹಿಸಿದ ಠೇವಣಿದಾರರಿಗೆ, ಪಿಗ್ಮಿ ಕೊಟ್ಟು ಸಹಕರಿಸಿದವರಿಗೆ, ಸಾಲ ತೆಗೆದುಕೊಂಡು ಉತ್ತೇಜನ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಕರ್ನಾಟಕ ರಾಜ್ಯದ ಚರಿತ್ರೆಯಲ್ಲೇ ಪ್ರಪ್ರಥಮ ಬಾರಿಗೆ ಕಾರ್ಕಳ ತಾಲೂಕಿನಲ್ಲಿ ತಾಲೂಕು ಮಟ್ಟದ ಹೂವಿನ ಬೆಳೆಗಾರರ ಸಹಕಾರ ಸಂಘವು ಆರಂಭಗೊಳ್ಳಲು ತಮ್ಮ ಸಹಕಾರವೂ ಮಹತ್ವದ್ದಾಗಿರುತ್ತದೆ. ನಮ್ಮ ಸಂಘವನ್ನು ಜಿಲ್ಲಾ ಮಟ್ಟದಲ್ಲಿ ಪ್ರದರ್ಶಿಸಬೇಕೆಂಬ ನಮ್ಮ ಆಶಾಯಕ್ಕೆ ನಿಮ್ಮ ಬೆಂಬಲ ತುಂಬಾ ಮುಖ್ಯ, ತಮ್ಮ ಸಹಕಾರ ಇದ್ದಲ್ಲಿ ಮುಂದಿನ ಸಮಯದಲ್ಲಿ ಇದನ್ನು ಕಾರ್ಯಗತ ಗೊಳಿಸಲು ಅದರ ಕಡೆ ಹೆಚ್ಚಿನ ಗಮನ ಹಾಗೂ ಪ್ರಯತ್ನ ಮಾಡುವುದಾಗಿ ಅಧ್ಯಕ್ಷರು ತಿಳಿಸಿದರು.

ಸಂಘದ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ, ಸಂಘದ ಉಪಾಧ್ಯಕ್ಷರಾದ ನವೀನ್ ಶೆಣೈ ಹಾಗೂ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಫ್ಲೋರ ಮೆಂಡೋನ್ಸ, ವೆಂಕಟರಮಣ ಶರ್ಮ, ಶಶಿಕಾಂತ್ ಭಟ್, ಫ್ಲೇವಿಯ ಆರಾನ್ಹ, ಜಾನ್ ಟೆಲ್ಲಿಸ್, ಲವೀಟ ಕರ್ಡೂಜ, ರಮೇಶ್ ಬಿ. ನಿಟ್ಟೆ, ವಿದ್ಯಾಲಕ್ಹ್ಮೀ ಹಾಗೂ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ಕುಟ ಲತಾ ಹಾಗೂ ಸಿಬ್ಬಂದಿ ವರ್ಗದವರಾದ ವಿನೋಲ ರೆಲ್ಮ ಮೆಂಡೋನ್ಸ, ವಿದ್ಯಾ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ನವೀನ್ ಶೆಣೈ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ನಿರ್ದೇಶಕರಾದ ವಿದ್ಯಾಲಕ್ಷ್ಮಿ ಇವರು ನೆರವೇರಿಸಿದರು..

ಕಾರ್ಯಕ್ರಮವನ್ನು ರಾಷ್ಟ್ರಗೀತೆ ಯೊಂದಿಗೆ ಮುಕ್ತಾಯ ಮಾಡಲಾಯಿತು…

ವರದಿ ; ಅರುಣ ಭಟ್ ಕಾರ್ಕಳ

error: