May 12, 2024

Bhavana Tv

Its Your Channel

ನಂದಳಿಕೆಯಲ್ಲಿ ಅಯನೋತ್ಸವ ಸಿರಿ ಜಾತ್ರೆ ಸಂಪನ್ನ.

ಬೆಳ್ಮಣ್ : ಇತಿಹಾಸ ಪ್ರಸಿದ್ದ ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಅಯನೋತ್ಸವ ಸಿರಿ ಜಾತ್ರೆಯು ವಿಜೃಂಭಣೆಯಲ್ಲಿ ಶುಕ್ರವಾರ ಸಂಪನ್ನಗೊAಡಿತ್ತು.
ನಂದಳಿಕೆ ಚಾವಡಿ ಆರಮನೆಯಿಂದ ಸುಂದರರಾಮ್ ಹೆಗ್ಡೆಯವರನ್ನು ಪರಂಪರಾಗತ ಮೆರವಣಿಗೆಯೊಂದಿಗೆ ಕರೆತರಲಾಗಿ ಕ್ಷೇತ್ರದಲ್ಲಿ ಅಯನೋತ್ಸವ, ಉತ್ಸವ ಬಲಿ, ಕೆರೆ ದೀಪೋತ್ಸವ, ಪಲ್ಲಕಿ ಸುತ್ತು, ಬಲ್ಲೇಶ್ವರ ಪೂಜೆ ,ಕಟ್ಟೆಪೂಜೆ ಮಹೋತ್ಸವ ನಡೆದು ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಿಯಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ವೈಭವದ ಸಿರಿಜಾತ್ರಾ ವಿಧಿ ವೈಭವ ನಡೆಯಿತು.
ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ನಂದಳಿಕೆ ಚಾವಡಿ ಅರಮನೆ ಎನ್.ಸುಂದರರಾಮ ಹೆಗ್ಡೆ ಮಾರ್ಗದರ್ಶನದಲ್ಲಿ ನಂದಳಿಕೆ ಚಾವಡಿ ಆರಮನೆ ಸುಹಾಸ್ ಹೆಗ್ಡೆ ನೇತೃತ್ವದಲ್ಲಿ ಸಂಭ್ರಮದ ಸಿರಿಜಾತ್ರಾ ಮಹೋತ್ಸವ ಸಂಪನ್ನಗೊAಡಿತ್ತು
ಕ್ಷೇತ್ರದ ಪ್ರಧಾನ ಆರ್ಚಕ ಹರೀಶ್ ತಂತ್ರಿ, ದೇವಳದ ವ್ಯವಸ್ಥಾಪಕ ರವಿರಾಜ ಭಟ್ ಉಪಸ್ಥಿತರಿದ್ದರು ಹಾಗೂ ಸಹಸ್ರಾರು ಮಂದಿ ಭಕ್ತಾದಿಗಳು ಬೆಳಗ್ಗಿನವರೆಗೆ ಸಿರಿಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಉಡುಪಿ ದ.ಕ. , ಚಿಕ್ಕಮಗಳೂರು, ಶಿವಮೊಗ್ಗ, ಸೇರಿದಂತೆ ಮಲೆನಾಡಿನ ಲಕ್ಷಾಂತರ ಭಕ್ತರು ಸಿರಿ ಜಾತ್ರೆಯಲ್ಲಿ ಪಾಲ್ಗೊಂಡರು. ಸಿರಿ ಜಾತ್ರೆಯ ಸೊಬಗಿನಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು

ವರದಿ:ಅರುಣ ಭಟ್ ಕಾರ್ಕಳ

error: