April 29, 2024

Bhavana Tv

Its Your Channel

ನೂತನವಾಗಿ ರಚನೆಗೊಂಡ ಮೆಸ್ಕಾಂ ನಿಟ್ಟೆ ಉಪ ವಿಭಾಗ ಕಚೇರಿ ಉದ್ಘಾಟಿಸಿದ ಸಚಿವ ವಿ.ಸುನಿಲ್ ಕುಮಾರ್

ಕಾರ್ಕಳ: ಕಾರ್ಕಳ ಕ್ಷೇತ್ರಕ್ಕೆ ಮೆಸ್ಕಾಂ ಇಲಾಖೆಯ ವ್ಯಾಪ್ತಿಯಲ್ಲಿನ ಮುಂದಿನ 20 ವರ್ಷಗಳಿಗೆ ಪೂರಕವಾಗುವ ಎಲ್ಲಾ ಅಭಿವೃದ್ಧಿಗಳನ್ನು ಮಾಡಲು ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ , ಕ್ಷೇತ್ರದಲ್ಲಿ ತಡೆರಹಿತ ವಿದ್ಯುತ್ ಗೆ ಶಾಶ್ವತವಾದ ಕಾಯಕಲ್ಪವನ್ನು ನೀಡಲು ಹೆಬ್ರಿ ಅಜೆಕಾರು ಬಜಗೋಳಿ ಬೈಲೂರು ನಲ್ಲಿ 33ಕೆವಿ ಸಬ್ ಸ್ಟೇಷನ್ ಗಳನ್ನು ಸ್ಥಾಪಿಸುವ ಮೂಲಕ ಅಭಿವೃದ್ದಿಗೆ ವೇಗ ನೀಡಲಿದೆ. ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು ಅವರು ನೂತನವಾಗಿ ರಚನೆಗೊಂಡ ಮೆಸ್ಕಾಂ ನಿಟ್ಟೆ ಉಪ ವಿಭಾಗ ಕಚೇರಿ ಉದ್ಘಾಟಿಸಿ ಮಾತನಾಡಿದರು .

ಕಾರ್ಕಳದ ಅಭಿವೃದ್ಧಿ ಗೆ ನಿಟ್ಟೆ ವಿಭಾಗೀಯ ಕಛೇರಿ ಹೊಸ ಸೇರ್ಪಡೆಯಾಗಿದೆ . ನಿಟ್ಟೆ ಬೆಳ್ಮಣ್ ಸಾಣೂರು ವ್ಯಾಪ್ತಿಯಲ್ಲಿನ ಮೆಸ್ಕಾಂ ಸಮಸ್ಯೆಗಳಿಗೆ ಸ್ಪಂದನೆ ನೀಡಲು ಅನುಕೂಲವಾಗುತ್ತದೆ ಎಂದರು.

ಹೆಬ್ರಿ ತಾಲೂಕಿನಲ್ಲಿ ಯಲ್ಲಿ 110ಕೆವಿ ಸಬ್ ಸ್ಟೇಷನ್ ಸ್ಥಾಪಿಸಲು ಜಾಗ ಗುರುತಿಸಲಾಗುತ್ತಿದ್ದು ,ಹೊಸ ಸಬ್ ಸ್ಟೇಷನ್ ನಿಂದ ಹೆಬ್ರಿಯ ಫ್ಯಾಕ್ಟರಿ ಗಳಿಗೆ ಹಾಗೂ ಅನೇಕ ಉದ್ಯಮದ ಗಳಿಗೆ ಅನುಕೂಲವಾಗಲಿದೆ,

ರಾಜ್ಯದಲ್ಲಿ ಬೆಳಕು ಯೋಜನೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಅನುಕೂಲವಾಗಿದೆ ಕಾರ್ಕಳ ತಾಲೂಕಿನಲ್ಲಿ 2247 ಫಲಾನುಭವಿಗಳು ಬೆಳಕು ಯೋಜನೆಯ ಫಲವನ್ನು ಪಡೆಯುತ್ತಿದ್ದಾರೆ . ರಾಜ್ಯದಲ್ಲಿ ಅನುಕೂಲ ಎಲೆಕ್ಟ್ರಿಕ್ ವಾಹನಗಳಿಗಾಗಿ ಈಗಾಗಲೇ 1108 ಕಡೆಗಳಲ್ಲಿ ಎಲೆಕ್ಟ್ರಿಕ್ ಪವರ್ ಚಾರ್ಜಿಂಗ್ ಸೆಂಟರ್ ಸ್ಥಾಪಿಸಲಾಗುತಿದೆ . ಕಾರ್ಕಳಕ್ಕೆ ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ಸಮಸ್ಯೆಗಳನ್ನು ತಪ್ಪಿಸಲು 97 ಪವರ್ ಮ್ಯಾನ್ ಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು

ಬೊಮ್ಮಾಯಿ ನೇತೃತ್ವದ ಸರಕಾರ ಅಭಿವೃದ್ಧಿ ಗೆ ಒತ್ತು ನೀಡುವ ಸರಕಾರ:
ರಾಜ್ಯದ ಬೊಮ್ಮಾಯಿ ನೇತೃತ್ವದ ಸರಕಾರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ . ಜನಪ್ರಿಯ ಯೋಜನೆಗಳಾದ ಬೆಳಕು ಯೋಜನೆ ,ಗ್ರಾಮ ವನ್ ಯೋಜನೆ, ವಿದ್ಯಾನಿಧಿ ಯೋಜನೆಗಳ, ಮಾಶಾಸನ ಗಳ ಮೂಲಕ ಜನರ ಮನಗೆದ್ದಿದೆ , ಇನ್ನು ಮುಂದೆ ಉಚಿತ ಟೋಲ್ ನಂಬರ್ ಗೆ ಕರೆ ಮಾಡುವ ಮೂಲಕ 72 ಘಂಟೆಗಳ ಒಳಗೆ ಮಾಶಾಸನ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಡಿಸೆoಬರ್ ನಲ್ಲಿ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆ :
ಕಾರ್ಕಳವನ್ನು ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಪ್ರವಾಸೋದ್ಯಮ ಬಲಗೊಳಿಸುವ ನಿಟ್ಟಿನಲ್ಲಿ ಬೈಲೂರಿನಲ್ಲಿ ನಿರ್ಮಿಸಲಾಗುತ್ತಿರುವ 33 ಅಡಿ ಎತ್ತರದ ಪರಶುರಾಮನ ಮೂರ್ತಿ ಹಾಗೂ ಥೀಮ್ ಪಾರ್ಕ್ ಡಿಸೆಂಬರ್ ನಲ್ಲಿ ಉದ್ಘಾಟನೆಗೆ ಸಿಧ್ಧವಾಗಲಿದೆ . ಬೈಲೂರಿನ ಪರಶುರಾಮನ ಮೂರ್ತಿಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಗೆ ನೀಡುವ ಮೂಲಕ ಕಾರ್ಕಳದ ಕೀರ್ತಿಯನ್ನು ದಿಲ್ಲಿಗೆ ತಲುಪಿಸುವ ಕಾರ್ಯವಾಗಿದೆ ಎಂದರು

ಕಾರ್ಕಳ ದಲ್ಲಿ ಜವಳಿ ಪಾರ್ಕ್: ಕಾರ್ಕಳ ತಾಲೂಕಿನ ಅಭಿವೃದ್ಧಿ ಹಾಗು ಉದ್ಯೋಗಾವಕಾಶಗಳನ್ನು ಕಲ್ಪಿಸುವ ದೃಷ್ಟಿಯಿಂದ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ ನಿಟ್ಟೆಯಲ್ಲಿ 25 ಎಕರೆ ಜಾಗವನ್ನು ಗುರುತಿಸಲಾಗಿದೆ ಇದರಿಂದಾಗಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು

ಸಭೆಯಲ್ಲಿ ನಿಟ್ಟೆ ಗ್ರಾ.ಪಂ ಅಧ್ಯಕ್ಷ ಸತೀಶ್ ಪೂಜಾರಿ ಅಧ್ಯಕ್ಷ ತೆ ವಹಿಸಿದ್ದರು , ಕಟ್ಟಡ ಮಾಲಕ ಜಯಶೀಲ ಶೆಟ್ಟಿ , ಅಧೀಕ್ಷಕ ಇಂಜಿನಿಯರ್ ರಾಕೇಶ್ , , ಕಾರ್ಕಳ ಗುತ್ತಿಗೆ ದಾರರ ಸಂಘದರಿಚಾರ್ಡ್ ಮಿರಾಂಡಾ , ಕಾರ್ಕಳ ಅಧೀಕ್ಷಕ ಇಂಜಿನಿಯರ್ ನರಸಿಂಹ ಉಪಸ್ಥಿತರಿದ್ದರು . ಮಂಗಳೂರು ಮೆಸ್ಕಾಂ ಮುಖ್ಯ ಇಂಜಿನಿಯರ್ ಪುಷ್ಪ ಸ್ವಾಗತಿಸಿದರು ಇದೇ ಸಂದರ್ಭದಲ್ಲಿ ನಿಟ್ಟೆ ಯ 24* 7 ಸರ್ವಿಸ್ ಸ್ಟೇಷನ್ ವಾಹನ ಮತ್ತು ಬೆಳಕು ಯೋಜನೆ ಎರಡನೇ ಹಂತದ ಫಲಾನುಭವಿಗಳಿಗೆ ಸರ್ವಿಸ್ ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು
ವಿನಾಯಕ ಕಾಮತ್ ಕಾರ್ಯಕ್ರಮ ನಿರೂಪಿಸಿದರು

ವರದಿ: ಅರುಣ ಭಟ್ ಕಾರ್ಕಳ

error: