April 29, 2024

Bhavana Tv

Its Your Channel

ಕರ್ನಾಟಕ ವಿಧಾನ ಪರಿಷ್‌ತ್ ಚುಣಾವಣೆ -೨೦೨೦ ಡಾ. ಕುಬೇರಪ್ಪಾ ಗೆಲುವು ನಿಶ್ಚಿತ –ಮಾಜಿ ಶಾಸಕ ಮಂಕಾಳ ವೈದ್ಯ

ಹೊನ್ನಾವರ : ಈಗಾಗಲೇ ವಿಧಾನ ಪರಿಷ್‌ತ್ ಚುಣಾವಣೆ-೨೦೨೦ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು ಬರುವ ದಿ ೨೮ ರಂದು ಮತದಾನ ನಡೆಯಲ್ಲಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಡಾII ಕುಬೇರಪ್ಪಾ ಅವರ ಗೆಲುವು ನಿಶ್ಚಿತ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಘೋಷಿಸಿದರು.
ಅವರು ಇಂದು ಹೊನ್ನಾವರ ಪಟ್ಟಣದ ಮೂಡ ಗಣಪತಿ ಸಭಾಭವನದ್ದಲ್ಲಿ ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ ಜಂಟಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಮುಖಂಡರಾಗಿರುವ ಕುಬೇರಪ್ಪಾ ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದು ಸ್ವತಃ ಪ್ರಾಂಶುಪಾಲರಾಗಿ ನಿವೃತ್ತರಾದವರು. ಕರ್ನಾಟಕ ವಿಧಾನ್ ಪರಿಷತ್‌ಗೆ ಶಿಕ್ಷಕರ ಕ್ಷೇತ್ರದಿಂದ ಮೂರು ಬಾರಿ ಸ್ಪರ್ದಿಸಿದ ಅನುಭವವುಳ್ಳವರು. ಪದವೀಧರ ನಿರುದ್ಯೋಗಿಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಹೋರಾಟ ನಡೆಸಲು ಕುಬೇರಪ್ಪಾ ಅವರ ಅವಶ್ಯಕತೆ ಇದ್ದು ಕಾರ್ಯಕರ್ತರು ಶಕ್ತಿ ಮೀರಿ ಅವರ ಗೆಲುವಿಗೆ ಪರಿಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಜಗದೀಪ ಎನ್ ತೆಂಗೇರಿ ಕುಬೇರಪ್ಪನಂತ ಅನುಭವಿಗಳ ಅವಶ್ಯಕತೆ ಚಿಂತಕರ ಚಾವಡಿಯಾಗಿರುವ ವಿಧಾನ ಪರಿಷ್‌ತ್‌ಗೆ ತೀರಾ ಅಗತ್ಯತೆ ಇದೆ ಎಂದರು. ಕಳೆದೆರಡು ವರುಷಗಳಿಂದ ಪಶ್ಚಿಮ ಪದವೀಧರ ಕ್ಷೇತ್ರದಾದ್ಯಂತ ಹಗಲು-ರಾತ್ರಿ ತಿರುಗಾಡಿ ಸಾವಿರಾರು ಪದವೀಧರರನ್ನು ನೊಂದಾಯಿಸಿದ ಕೀರ್ತಿ ಕುಬೇರಪ್ಪಾ ಅವರಿಗೆ ಸಲ್ಲುತ್ತದೆ ಎಂದರು.
ಮಂಕಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ಕುಬೇರಪ್ಪಾ ಕಾರ್ಯಕ್ಷಮತೆ ಮೆಚ್ಚುವಂತಹದು ಕಳೆದ ನಲವತ್ತು ವರುಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಮತ್ತು ನಿರುದ್ಯೋಗಿ ಪದವೀಧರರ ಕುರಿತು ಹೋರಾಡಿದ ಧೀಮಂತ ನಾಯಕ ಕುಬೇರಪ್ಪಾ ಎಂದರು.
ವೇದಿಕೆಯ ಮೇಲೆ ಮಾಜಿ ಜಿಲ್ಲಾ ಪಂಚಾಯತ ಉಪಾದ್ಯಕ್ಷೆ ಶ್ರೀಮತಿ ವನಿತಾ ನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ನಾಯ್ಕ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣ ಗೌಡ, ತಾಲೂಕು ಪಂಚಾಯತ ಅದ್ಯಕ್ಷ ಉಲ್ಲಾಸ ನಾಯ್ಕ ಕುದ್ರಗಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅದ್ಯಕ್ಷ ಎಂ ಎಸ್ ಸುಬ್ರಹ್ಮಣ್ಯ ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೋಂಡಿದ್ದರು. ಎಂ ಟಿ ನಾಯ್ಕ ಹೆರಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: