April 29, 2024

Bhavana Tv

Its Your Channel

ಕಳಪೆ ಕಾಮಗಾರಿ, ಗುತ್ತಿಗೆದಾರರು ಹಾಗೂ ಇಂಜಿನೀಯರ್ ವಿರುದ್ದ ಸಾರ್ವಜನಿಕರು ಆಕ್ರೋಶ

ಕುಮಟಾ ; ತಾಲೂಕಿನ ಕೋಡಕಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಮೂಡನಕೇರಿ ವಾರ್ಡನಲ್ಲಿ ಕಳೆದ ಕೆಲ ತಿಂಗಳ ಹಿಂದೆ ನಡೆಸಲಾದ ಚರಂಡಿ ಕಾಮಗಾರಿ ಸಂಪೂರ್ಣ ಹಾಳಾಗಿದ್ದು, ಗುತ್ತಿಗೆದಾರರು ಹಾಗೂ ಇಂಜಿನೀಯರ್ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

೨೦೧೮-೨೦೧೯ ಅವಧಿಯಲ್ಲಿ ಸುಮಾರು ೫೦.೫೬೪ ರೂ ಗಳ ಕಾಮಗಾರಿ ನಡೆಸಲಾಗಿತ್ತು. ಕಾಮಾಗಾರಿ ಮಾಡುವಾಗ ತಳ ಭಾಗದಲ್ಲಿ ಸಿಮೇಂಟ್ ಕಾಕ್ರೀಟ್ ಅಳವಡಿಸಿ ಕೆಲಸ ಮಾಡಬೇಕು ಮತ್ತು ಎರಡು ಕಡೆ ಕಲ್ಲು ಕಟ್ಟಿ ಗಟಾರ ನಿರ್ಮಾಣ ಮಾಡಬೇಕು ಎನ್ನುವ ನಿಬಂಧನೆ ಇದ್ದರೂ ಗುತ್ತಿಗೆದಾರರು ಕೇವಲ ಚರಂಡಿ ಮೇಲ್ಬಾಗದಲ್ಲಿ ಸಿಮೇಂಟ್ ಲೇಪನ ಮಾಡಿದ್ದು,ಒಂದು ಬದಿ ಮಣ್ಣಿನ ಗೋಡೆಗೆ ಸಿಮೇಂಟ್ ಹಚ್ಚಿದ್ದಾರೆ. ಮಂಜೂರಾದ ಹಣದಲ್ಲಿ ಅರ್ಧ ಹಣವನ್ನೂ ಬಳಸದೇ ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬುದು ಗ್ರಾಮಸ್ಥರ ಆರೋಪ. ಇದಕ್ಕೆ ಇಂಬು ನೀಡುವಂತೆ ಮಳೆಯ ರಭಸಕ್ಕೆ ಮೇಲ್ಬಾಗದಲ್ಲಿ ಬಳಿಯಲಾದ ಸಿಮೆಂಟ್ ಕಿತ್ತುಹೋಗಿದ್ದು ಗುತ್ತಿಗೆದಾರರು ಕೈಗೊಂಡ ಕಾಮಗಾರಿ ಎಲ್ಲಾ ನೀರಿನಲ್ಲಿ ಕೊಚ್ಚಿಹೊಗಿದೆ. ಹೀಗಾಗಿ ಕಳಪೆ ಕಾಮಗಾರಿ ನಡೆಸಲಾದ ಚರಂಡಿಯನ್ನು ಪುನ: ನಿರ್ಮಿಸಕೊಡಬೇಕು. ಇಲ್ಲವಾದಲ್ಲಿ ಜಿ.ಪಂ ಇಂಜಿನೀಯರಿoಗ್ ಕಛೇರಿ ಏದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

error: