May 16, 2024

Bhavana Tv

Its Your Channel

ಕುಮಟಾ ತಾಲೂಕಿನ ಹೆಗಡೆಯ ಪ್ರಸಿದ್ಧ ಶಾಂತಿಕಾOಬ ದೇವಿಯ ಜಾತ್ರೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊOಡಿತು.

ಕುಮಟಾ : ಈ ಅದ್ದೂರಿ ಜಾತ್ರೆಗೆ ಜಿಲ್ಲೆಯ ಮೂಲೆಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು, ಬೆಳಿಗ್ಗೆನಿಂದಲೇ ದೇವಸ್ಥಾನಕ್ಕೆ ಬಂದ ಭಕ್ತರು ಹೂವಿನಿಂದ ಅಲಂಕರಿಸಲಾಗಿದ್ದ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯನ್ನು ಪೂಜಿಸಿದರು, ದೇವಸ್ಥಾನವನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಿದ್ದರಿAದ ದೇವಾಲಯ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.

ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಈ ಸಂದರ್ಭದಲ್ಲಿ ಶ್ರೀ ಗ್ರಾಮ ದೇವತಾ ಶ್ರೀ ಶಾಂತಿಕಾAಬಾ ದೇವಿಯ ಪರಿವಾರ ದೇವತೆಗಳಾದ ಶ್ರೀ ಹಿರೆಬೀರ, ಸೂಲಾ ಬೀರಾ, ಬಾಗಲ ಬೀರ, ಬಂಡಾರ ಬೀರ, ಹಾಗೂ ಸಾರಿಂಗ ಬೀರ, ಸೀಮೆ ಪುರುಷ, ಹೊಲೆಯಾಡ ಹೊನ್ನಪ್ಪ ,ಶ್ರೀ ದುರ್ಗಾದೇವಿ ಹಾಗೂ ಕಲಿವೀರಭದ್ರ ನಾಗದೇವತೆ ಕಳಸಕ್ಕೆ ಕೈಮುಗಿದು ಭಕ್ತರು ಪುನೀತರಾದರು.

ಭಕ್ತರಿಂದ ದೇವಿಯ ಉಡಿ ತುಂಬುವುದು ದೇವಿಗೆ ಹೋಮ ಹವನ ಮಹಾಭಿಷೇಕ ಪುಷ್ಪಾಲಂಕಾರ ಮಹಾಮಂಗಳಾರತಿ ಭಜನೆ ಹಾಗೂ ಮದ್ದು ಸುಡುವ ಕಾರ್ಯಕ್ರಮ ನಡೆಯಿತು.

ರಥಬೀದಿಯ ಒಂದು ಕಿ.ಮೀ ಗೂ ಹೆಚ್ಚು ದೂರ ಅಂಗಡಿಗಳು ಲಗ್ಗೆ ಇಟ್ಟಿದ್ದವು.ವ್ಯಾಪಾರಸ್ಥರು ವರ್ಷದಲ್ಲೊಮ್ಮೆ ಬರುವ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರವನ್ನು ಮಾಡಿದರು .ವಿವಿಧ ತಿನಿಸುಗಳ ಅಂಗಡಿಗಳು ಮತ್ತು ಆಟಿಕೆಗಳು ಬಂದಿದ್ದರಿoದ ಮಕ್ಕಳ ಹುಮ್ಮಸ್ಸು ಜೋರಾಗಿತ್ತು

ಕರೋನ ಹಿನ್ನೆಲೆಯಲ್ಲಿ ಭಕ್ತರಿಗೆ ಸ್ಯಾನಿಟೈಜರ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸರಿದಿ ಸಾಲಿನಲ್ಲಿ ನಿಂತು ದೇವಸ್ಥಾನದ ಒಳಗೆ ದೇವರ ದರ್ಶನಕ್ಕೆ ಅನುಕೂಲಮಾಡಿಕೊಡಲಾಗಿದೆ ಎಂದು ದೇವಸ್ಥಾನದ ವಕ್ತಾರಎಆದ ನಾಗೇಶ ಶಾನಬಾಗ ತಿಳಿಸಿದರು

ಸಿಪಿಐ ಪರಮೇಶ್ವರ್ ಗುನಗ.ಪಿ ಎಸ್.ಐ ಆನಂದಮೂರ್ತಿ ರವಿ ಗುಡ್ಡೆ , ಸುಧಾ ಹರಿಕಾಂತ , ನವೀನಕುಮಾರ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದರು.

error: