May 15, 2024

Bhavana Tv

Its Your Channel

ಶಿರಸಿಯಲ್ಲಿನ ಈಜು ಕೋಳ ಪುನಾರಂಬಕ್ಕೆ ಆಗ್ರಹ

ಶಿರಸಿ: ಕೇಂದ್ರ ಗೃಹ ಮತ್ತು ಆರೋಗ್ಯ ಇಲಾಖೆಯು ಕೋವಿಡ್ ಸಂದರ್ಭದಲ್ಲಿ ಈಜುಕೊಳಕ್ಕೆ ನಿರ್ಬಂಧಿಸಿರುವ ಚಟುಚಟಿಕೆಗೆ ಮುಕ್ತಗೊಳಿಸಿರುವುದರಿಂದ ಶಿರಸಿಯ ಜಿಲ್ಲಾ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಇರುವ ಈಜುಕೊಳವನ್ನು ಸಾರ್ವಜನಿಕರ ಉಪಯೋಗಕ್ಕೆ ಅತೀ ಶೀಘ್ರದಲ್ಲಿ ಮುಕ್ತಗೊಳಿಸಬೇಕೆಂದು ಸ್ಪಂದನಾ ಸ್ಪೋರ್ಟ್ಸ್ ಅಕಾಡಮಿ ಅಧ್ಯಕ್ಷ ರವೀಂದ್ರ ನಾಯ್ಕ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ಯೋಜನಾ ಮತ್ತು ಕ್ರೀಡಾ ಇಲಾಖೆಯು ಜನವರಿ 30 ರಂದು ಈಜು ಕೊಳ ಪುನರ್ ಆರಂಭಕ್ಕೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಲಹೆ ಮೇರೆಗೆ ಮಾರ್ಗದರ್ಶನ ಸೂಚನೆ ಬಿಡುಗಡೆಗೊಳಿಸಿದ್ದು, ಅದರಂತೆ ಈಜುಕೊಳದ ಕಾರ್ಯಚಟುವಟಿಕೆಗೆ ಅವಕಾಶ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

ದೈಹಿಕ ಅಂತರ, ಮುಖ ಕವಚ, ಮಾಸ್ಕ್, ನಿರ್ದಿಷ್ಟ ಅವಧಿಯಲ್ಲಿ ಸೋಪಿನಿಂದ ಕೈತೊಳೆಯುವಿಕೆ ,ಕೋವಿಡ್ ಲಕ್ಷಣ ದೂರ ಇಡುವಿಕೆ, ಉಗುಳುವಿಕೆ ಮುಂತಾದ ನಿಬಂಧನಗಳೊoದಿಗೆ ಈಜು ಗಾರರಿಗೆ ಈಜ ಕೊಳವನ್ನು ಉಪಯೋಗಿಸಲು ಅವಕಾಶ ಮಾಡಿಕೊಡಲು ಕೇಂದ್ರ ಕ್ರೀಡಾ ಮತ್ತು ಯೋಜನಾ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ಅತಿ ಶೀಘ್ರದಲ್ಲಿ ಸೂಕ್ತವಾದ ನಿರ್ಬಂಧನೆಯೊoದಿಗೆ ಕೇಂದ್ರ ಸರ್ಕಾರದ ಮಾರ್ಗದರ್ಶನದ ಆದೇಶದಂತೆ ಸಿರಸಿಯ ಜಿಲ್ಲಾ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಈಜುಕೊಳದಲ್ಲಿ ಈಜುಗಾರರಿಗೆ ಅವಕಾಶ ಮಾಡಿಕೊಡಲು ಕೋರಿದ್ದಾರೆ.

ಸ್ವಚ್ಛತೆಗೆ ಆದ್ಯತೆ: ಈಜು ಕೊಳದ ಹೊರಾಂಗಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ಈ ದಿಶೆಯಲ್ಲಿ ನಗರ ಸಭೆ ವಿಶೇಷ ಕಾಳಜಿವಹಿಸಬೇಕಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.

error: