May 15, 2024

Bhavana Tv

Its Your Channel

ಸ್ಥಳೀಯ ಮೀನುಗಾರರೊಂದಿಗೆ ಸೇರಿ ಅವರ ಹಿತರಕ್ಷಣೆಗಾಗಿ ನಮ್ಮ ಸಂಘಟನೆಯೂ ಸಹ ಹೋರಾಟದಲ್ಲಿ ಭಾಗವಹಿಸುವುದು ಅನಿವಾರ್ಯ- ಚಂದ್ರಕಾOತ ಕೊಚರೇಕರ ಅಳ್ಳಂಕಿ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಮೀನುಗಾರರ ಸಂಘಟನೆ, ಕರ್ನಾಟಕ

ಹೊನ್ನಾವರ : ಕಾಸರಕೋಡ ಟೊಂಕದಲ್ಲಿ ನಿರ್ಮಿಸಲಾಗುತ್ತಿರುವ ವಾಣಿಜ್ಯ ಬಂದರು ವಿಚಾರದಲ್ಲಿ ಯಾವತ್ತೋ ಆಗಬೇಕಿದ್ದ ಪರ-ವಿರೋಧ ಚರ್ಚೆ ಈಗ ತಡವಾಗಿಯಾದರೂ ಆಗುತ್ತಿದೆಯಲ್ಲ ಎನ್ನುವುದು ಒಳ್ಳೆಯ ವಿಚಾರವೇ.ನಾವು ಮತ್ತು ನಮ್ಮ ಸಂಘಟನೆಯು ಅಭಿವೃದ್ಧಿಯ ಪರವಾಗಿದೆ. ಆದರೆವಾಣಿಜ್ಯ ಬಂದರು ವಿಚಾರದಲ್ಲಿ ಸ್ಥಳೀಯರನ್ನುವಿಶ್ವಾಸಕ್ಕೆ ತೆಗೆದುಕೊಳ್ಳದೇ ಸ್ಥಳೀಯರ ವಸತಿ,ಉದ್ಯೋಗ ಮತ್ತು ಪರಿಸರ, ಆರೋಗ್ಯ ಹಿತರಕ್ಷಣೆಗೆ ಸಂಬAಧಿಸಿದoತೆ ಯಾವುದೇ ಒಡಂಬಡಿಕೆಯನ್ನು ಮಾಡಿಕೊಳ್ಳದೇ ಖಾಸಗಿ ಕಂಪೆನಿಯ ವಾಣಿಜ್ಯ ಬಂದರು ಯೋಜನೆಗೆ ಎಕಪಕ್ಷೀಯವಾಗಿ ಅನುಮೋದನೆ ನೀಡಿರುವದು ಎಷ್ಟು ಸರಿ? ಎನ್ನುವ ಸ್ಥಳೀಯರ ಮೂಲಭೂತ ಪ್ರಶ್ನೆಗೆ ಉತ್ತರ ದೊರೆತರೆ ಬಹುಶಃ ಈ ಸಮಸ್ಯೆಗೆ ಪರಿಹಾರವೂ ಸಹ ಸಿಗಬಹುದು. ಅದನ್ನು ಬಿಟ್ಟು ಬಲಪ್ರಯೋಗದಿಂದ ಬಂದರು ನಿರ್ಮಾಣ ಮಾಡುವ ಯಾವುದೇ ಪ್ರಯತ್ನ ಸರಿಯಲ್ಲ.ಸ್ಥಳೀಯರ ಹೊರಾಟವನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ನಾವು ಈ ಮೂಲಕ ತೀವ್ರವಾಗಿ ಖಂಡಿಸುತ್ತೇವೆ.ಇಲ್ಲಿ ಸರ್ವರುತುವಾಣಿಜ್ಯ ಬಂದರು ಆಗುವ ಕುರಿತ ಪರ ವಿರೋಧ ಎರಡೂವಿಚಾರದಲ್ಲಿರುವ ಭಿನ್ನಾಭಿಪ್ರಾಯಕಿಂತ. ಪರವಾಗಿರುವವರು ಒಮ್ಮೆ ಮಂಗಳೂರಿನ ವಾಣಿಜ್ಯ ಬಂದರನ್ನು ವಿಕ್ಷಿಸಿ 2ಕೀ.ಮೀ.ವ್ಯಾಪ್ತಿ ಪ್ರದೇಶದಲ್ಲಿ ಒಂದು ದಿವಸ ವಾಸ್ತವ್ಯಮಾಡಿಬಂದು – ಒಮ್ಮೆ ಕಾಸರಕೋಡ ಗ್ರಾಮವನ್ನು ಸುತ್ತಾಡಿಬಂದು ನಂತರ ಕಾಸರಕೋಡಟೊಂಕದಲ್ಲಿ ಬಂದರು ನಿರ್ಮಾಣ ಮಾಡುವ ಬಗ್ಗೆ ತಜ್ಞರು, ಪರಿಸರವಾದಿಗಳು, ಬುದ್ಧಿಜೀವಿಗಳು ವೈಜ್ಞಾನಿಕವಾಗಿ ಏನು ಹೇಳುತ್ತಾರೆ? ಏನ್ನುವುದನ್ನು ಒಮ್ಮೆ ಅವಲೋಕನ ಮಾಡಿಕೊಂಡು ನಂತರ ಸಾರ್ವಜನಿಕರ ಬಹಿರಂಗ ಅಹವಾಲು ಪಡೆದು, ಅವರನ್ನು ಕಂಪೆನಿ, ಸರ್ಕಾರ ಮತ್ತು ಸಂಘಟನೆಗಳವರ ಜಂಟಿ ಮಾತುಕತೆ ಏರ್ಪಡಿಸುವ ಮೂಲಕ ಸಾಧಕ ಭಾದಕಗಳನ್ನು ಪರಿಶೀಲಿಸಿ ಒಂದು ತಿರ್ಮನಕ್ಕೆಬರಬಹುದಲ್ಲ.2)ಸ್ಥಳೀಯ ಮೀನುಗಾರಿಕೆಗೆ, ಮೀನುಗಾರರ ವಸತಿಗೆ ಮತ್ತು ಮೀನುಗಾರರಿಗೆ ಯಾವುದೇ ರೀತಿಯ ಆತಂಕ ಎದುರಾಗಲಾರದು ಎನ್ನುವ ವಿಶ್ವಾಸ ನೀಡುವವರು ಯಾರು? 3)ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ಹೇಗೆ ತೆರೆದು ಕೊಳ್ಳುತ್ತದೆ?ಉದ್ಯೋಗದಲ್ಲಿ ಸ್ಥಳೀಯರಿಗೆ ಕಂಪೆನಿ ಯಾವ ಪ್ರಮಾಣದ ಆಧ್ಯತೆ ನೀಡುತ್ತದೆ. 4)ಅಗತ್ಯಬಿದ್ದಲ್ಲಿ ಪರಿಸರ ಮಾಲಿನ್ಯ ಆಗುವ ವಸ್ತುಗಳ ಸಂಗ್ರಹ,ಸoಸ್ಕರಣೆ, ಆಯಾತ, ನಿರ್ಯಾತಕ್ಕೆ ನಿರ್ಭಂದಗಳನ್ನು ಹೇರುವ ಅಧಿಕಾರ ಸ್ಥಳೀಯ ಆಡಳಿತಕ್ಕೆ ಇದೆಯೇ ಮತ್ತು ಇದಕ್ಕೆ ಕಂಪನಿ ಯಾವ ರೀತಿಯ ಒಡಂಬಡಿಕೆ ಮಾಡಿಕೊಂಡಿದೆ? ಮುಂದೆ ಇದಕ್ಕೆ ಅದು ಬಧ್ಧವಾಗಿರುತ್ತದೆಯೇ? ಅಂದು93 ಎಕರೆ ಹೊರೆದು ಬಂದ ಸರ್ಕಾರಿ ಭೂಮಿಯನ್ನು ಹೊನ್ನಾವರ ಪೋರ್ಟ ಲಿಮಿಟೆಡ್ ಖಾಸಗಿ ಕಂಪೆನಿಗೆ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದಂತೆ, ಹಲವು ವರ್ಷಗಳಿಂದ ವಸತಿಯೊಂದಿಗೆ ಬದುಕನ್ನು ಕಟ್ಟಿಕೊಂಡಿರುವ ಇಲ್ಲಿನ ಮೀನುಗಾರರಿಗೆ ಅವರು ಇರುವಲ್ಲಿಯೇ ಸರ್ಕಾರಿ ಜಮೀನನ್ನು ಸಕ್ರಮ ಪಡಿಸಲು ಅಥವಾ ಮಂಜೂರು ಮಾಡಬಹುದಲ್ಲ? ಎನ್ನುವ ಕೆಲವು ಪ್ರಶ್ನೆಗಳಿಗೆಮತ್ತು ಹಕ್ಕೊತ್ತಾಯಕ್ಕೆ ಸರ್ಕಾರ ಸ್ಪಂದಿಸುವ ಮೂಲಕ ಇಲ್ಲಿನ ವಾಣಿಜ್ಯ ಬಂದರು ಸಮಸ್ಯೆಗೂ ಪರಿಹಾರ ಹುಡುಕುವ ಪ್ರಯತ್ನವನ್ನು ಸರ್ಕಾರ ಯಾಕೆ ಮಾಡಬಾರದು? ಎನ್ನುವದು ಸರ್ಕಾರ ಮತ್ತು ಜಿಲ್ಲಾ ಆಡಳಿತಕ್ಕೆ ಮತ್ತು ಕಂಪನಿಗೆ ನಮ್ಮ ಬಹಿರಂಗ ಮನವಿಯಾಗಿದೆ.ಈ ಕಾರ್ಯ ಆಗದಿದ್ದರೆ ಸ್ಥಳೀಯರ ಹೋರಾಟವನ್ನು ಬೆಂಬಲಿಸುವದು ನಮ್ಮ ಸಂಘಟನೆಗೆ ಮುಂದಿನ ದಿನಗಳಲ್ಲಿ ಅನಿವಾರ್ಯವಾಗುತ್ತದೆ ಮತ್ತು ಸ್ಥಳೀಯಮೀನುಗಾರರೊಂದಿಗೆ ಸೇರಿ ಅವರ ಹಿತರಕ್ಷಣೆಗಾಗಿನಮ್ಮ ಸಂಘಟನೆಯೂ ಸಹ ಹೋರಾಟದಲ್ಲಿ ಭಾಗವಹಿಸುವುದು ಅನಿವಾರ್ಯವಾಗುವದು ಎಂದು ಈಮೂಲಕ ಸ್ಪಷ್ಠೀಕರಣವನ್ನು ನೀಡಿದೆ ಎಂದು ಪ್ರಕಟಣೆ ಸಲ್ಲಿಸಿದ್ದಾರೆ.

error: