May 14, 2024

Bhavana Tv

Its Your Channel

ಅಕ್ರಮ ಗೋ ಸಾಗಾಟ, ಗೋಹತ್ಯೆ ನಿಷೇಧದ ಅಡಿಯಲ್ಲಿ ದಾಖಲಾಯ್ತು ಮೊದಲ ಪ್ರಕರಣ:

ಭಟ್ಕಳ: ಪರವಾನಿಗೆ ಇಲ್ಲದೆ, ಅಕ್ರಮವಾಗಿ ವಧೆಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಭಟ್ಕಳ ನಗರ ಠಾಣಾ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದ ಪ್ರಕರಣ ಶನಿವಾರ ದಾಖಲಾಗಿದೆ.

ಪಟ್ಟಣದ ಮಗ್ದೂಮ್ ಕಾಲನಿ ನಿವಾಸಿ ಇಸ್ಮಾಹಿಲ್ ಶೇಖ್ ಮಹ್ಮದ್ ಹುಸೇನ್ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿ. ಇತನು ವಾಹನವೊಂದಲ್ಲಿ ೫ ಆಕಳು, ೧ ಕರುವನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಹರಠಾಣಾ ಪೊಲೀಸರು ಡೊಂಗರಪಳ್ಳಿ ಹನುಮಂತ ದೇವಸ್ಥಾನದ ಬಳಿ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಗೋಹತ್ಯೆ ನಿಷೇಧದ ಅಡಿಯಲ್ಲಿ ದಾಖಲಾಯ್ತು ಮೊದಲ ಪ್ರಕರಣ:
ಕರ್ನಾಟಕ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುತ್ತಿರುವಂತೆ ಭಟ್ಕಳ ತಾಲೂಕಿನಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆ ಪ್ರಕರಣವನ್ನು ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಶಿಪಾರಸ್ಸು ಮಾಡಿದ್ದು ಅವರು ಗೋವುಗಳನ್ನು ಯಾವ ಗೋಶಾಲೆಗೆ ಕಳಿಸಬೇಕು ಎಂದು ನಿರ್ಧರಿಸಲಿದ್ದಾರೆ. ಪಿಎಸ್‌ಐ ಭರತಕುಮಾರ ಪ್ರಕರಣ ದಾಖಲಿಸಿದ್ದು, ಪಿಎಸ್‌ಐ ಕುಡಗಂಟಿ ತನಿಖೆ ನಡೆಸುತ್ತಿದ್ದಾರೆ.

error: