April 23, 2024

Bhavana Tv

Its Your Channel

ಕಾಗೋಡ ಸತ್ಯಾಗ್ರಹ ಚಳುವಳಿಗೆ ಇದೇ ಎಪ್ರೀಲ್ ೧೮ ರಂದು ೭೦ ನೇ ವರ್ಷ

ಶಿರಸಿ: ಉಳುವವನೇ ಹೊಲದೊಡೆಯ ಭೂಮಿಯ ಹಕ್ಕನ್ನು ನೀಡಬೇಕೆಂದು ಆರಂಭಿತವಾದ ಕಾಗೋಡ ಸತ್ಯಾಗ್ರಹ ಚಳುವಳಿಗೆ ಇದೇ ಎಪ್ರೀಲ್ ೧೮ ರಂದು ೭೦ ನೇ ವರ್ಷಕ್ಕೆ ಪಾದಾರ್ಪಣೆ ಆಗುತ್ತಿದ್ದು ಈ ಸಂದರ್ಭದಲ್ಲಿ ಇದರ ಅಂಗವಾಗಿ ಎಪ್ರೀಲ್ ೧೮ ರಂದು ಕಾಗೋಡ ರೈತ ಸತ್ಯಾಗ್ರಹ ೭೦ ನೇ ವರ್ಷಾಚರಣೆ ಕಾರ್ಯಕ್ರಮ ಸಾಗರದಲ್ಲಿ ಜರುಗಲಿದೆ.


ಕಾಗೋಡು ರೈತ ಚಳುವಳಿ ಸಂಸ್ಮರಣಾ ಸಮಿತಿ ಹಾಗೂ ಡಾ||ರಾಮ ಮನೋಹರ ಲೋಹಿಯಾ ಸಂಯುಕ್ತ ಆಶ್ರಯದಲ್ಲಿ, ಸಾಗರ ತಾಲೂಕಿನ ಕಣಸೆ ಜಟ್ಯಪ್ಪ ನಾಯ್ಕ ವೇದಿಕೆಯ ಕಾಗೋಡ ತಿಮ್ಮಪ್ಪ ರಂಗಮAದಿರದ ಆವರಣದಲ್ಲಿ ಅಂದು ಮುಂಜಾನೆ ೧೧ ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೧೯೫೧ ಎಪ್ರೀಲ್ ೧೮ ರಂದು ಸತ್ಯಾಗ್ರಹದ ರುವಾರಿ ಹೆಚ್ ಗಣಪತಿಯಪ್ಪ ಹಾಗೂ ಇನ್ನಿತರ ರೈತ ಹೋರಾಟಗಾರರಿಂದ ಪ್ರಾರಂಭವಾದ ಗೇಣಿದಾರರ ಚಳುವಳಿಗೆ ಪ್ರಾರಂಭದಲ್ಲಿ, ರಾಷ್ಟಿçÃಯ ಸಮಾಜವಾದಿ ಚಿಂತಕರಾದ ಡಾ||ರಾಮ ಮನೋಹರ ಲೋಹಿಯಾ ಹಾಗೂ ಸಮಾಜವಾದಿ ಹೋರಾಟಗಾರರ ಶಾಂತವೇರಿ ಗೋಪಾಲಗೌಡ ಮುಂತಾದ ಸಮಾಜವಾದಿ, ಚಿಂತಕ _ ಹೋರಾಟಗಾರರು ಸಾಗರ ತಾಲೂಕಿನ ಕಾಗೋಡ ಹಳ್ಳಿಗೆ ಆಗಮಿಸಿ ಆರ್ಥೀಕವಾಗಿ ದುರ್ಬಲರಾಗಿರುವ ಗೇಣಿದಾರ ರೈತರಿಗೆ ಬೆಂಬಲಿಸಿ, ಹೋರಾಟಕ್ಕೆ ತೀವ್ರತೆಯನ್ನು ನೀಡಿ ಹೋರಾಟವನ್ನು ಆಂದೋಲನ ರೂಪಕ್ಕೆ ನಡೆದು ದೇಶವ್ಯಾಪಿ ಸಂಚಲನ ಮೂಡಿಸಿರುವುದು ಇಂದು ಇತಿಹಾಸ.ಮಲೆನಾಡಿನ ಕಾಗೋಡ ರೈತರ ಚಳುವಳಿಗೆ ಹೋರಾಟದಿಂದ ೧೯೭೪ ರಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದು ಲಕ್ಷಾಂತರ ಗೇಣಿದಾರರಿಗೆ ಭೂ ಒಡೆಯನಾಗುವ ಸುವರ್ಣ ಅವಕಾಶ ದೊರಕಿದ್ದು ಇಂತಹ ಸಂದರ್ಭದಲ್ಲಿ ಕಾಗೋಡ ರೈತ ಚಳುವಳಿಯು ೭೦ ನೇ ವರ್ಷಾಚರಣೆ ಆಚರಿಸುತ್ತಿರುವುದು ಸಾಂದರ್ಭಿಕ. ಕಾಗೋಡ ರೈತ ಹೋರಾಟವು ಅಂದು ಸಂಸತ್ತಿನಲ್ಲೂ ದೇಶದ ಗಮನ ಸೆಳೆದಿರುವುದು ಹಾಗೂ ಇನ್ನಿತರ ರಾಜ್ಯಕ್ಕೂ ಗೇಣಿದಾರರ ಪರವಾದ ಕಾನೂನು ಜಾರಿಗೆ ನಾಂದಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಕಾರ್ಯಕ್ರಮವನ್ನು ರಾಷ್ಟಿçÃಯ ರೈತ ನಾಯಕ ಪ್ರೋ. ಯೋಗೇಂದ್ರ ಯಾದವ್ ಉದ್ಘಾಟಿಸಲಿದ್ದಾರೆ. ಸಮಾಜವಾದಿ ಹಿರಿಯ ನಾಯಕರು ಮತ್ತು ಮಾಜಿ ಸಚಿವರು ಸನ್ಮಾನ ಶ್ರೀ ಕಾಗೋಡು ತಿಮ್ಮಪ್ಪನವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧಪಕ್ಷದ ನಾಯಕರಾದ ಸನ್ಮಾನ್ಯಶ್ರೀ ಸಿದ್ಧರಾಮಯ್ಯನವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಗೇಣಿದಾರ ಭೂ ಹಕ್ಕುದಾರರು ಆಗಮಿಸಲು ಕರೆ:
ಕಾಗೋಡ ರೈತ ಚಳುವಳಿ ದಿನಾಚರಣೆಯ ಅಂಗವಾಗಿ ಎಪ್ರಿಲ್ ೧೮ ರಂದು ಸಾಗರದಲ್ಲಿ ಜರಗುವ ಕಾಗೋಡ ರೈತ ಸತ್ಯಾಗ್ರಹ ೭೦ ನೇ ವರ್ಷಾಚರಣೆಗೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಹಿರಿಯ ಸಮಾಜವಾದಿ ಚಿಂತಕ ಕಾಗೋಡ ತಿಮ್ಮಪ್ಪ ಅವರು ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ತೀ.ನ.ಶ್ರೀನಿವಾಸಮೂರ್ತಿ ಅವರು ಉಪಸ್ಥಿತರಿದ್ದರು.

error: