April 27, 2024

Bhavana Tv

Its Your Channel

“ತಾಲೂಕಿನ್ಯಾದಂತಹ ಜಂತು ಹುಳು ನಿವಾರಣಾ ಮಾತ್ರೆ ವಿತರಣೆ”–ಡಾ|| ಉಷಾ ಹಾಸ್ಯಗಾರ

(ಏಪ್ರಿಲ್ ೧೬ ರಿಂದ ಏ ೩೦ ರವರೆಗೆ ರಾಷ್ಟಿçÃಯಜಂತು ಹುಳು ನಿವಾರಣಾಕಾರ್ಯಕ್ರಮದ ಅಂಗವಾಗಿ ಅಲ್ಬೆಂಡ್‌ಝೋಲ್ ಮಾತ್ರೆ ವಿತರಣೆ)
ಹೊನ್ನಾವರ ; ಪ್ರತಿ ವರ್ಷದಂತೆ ಈ ವರ್ಷವೂ ಇಂದಿನಿAದ ಹದಿನೈದು ದಿನಗಳ ಕಾಲ ತಾಲೂಕಿನ್ಯಾದಂತ ರಾಷ್ಟಿçÃಯ ಜಂತು ಹುಳು ನಿವಾರಣೆ ಕಾರ್ಯಕ್ರಮ ನಡೆಯುತ್ತಿದ್ದು ಆಶಾ ಕಾರ್ಯಕರ್ತೆಯರು ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಒಂದರಿAದ ಹತ್ತೊಂಬತ್ತು ವರ್ಷದ ಒಳಗಿನ ಮಕ್ಕಳಿಗೆ ಅಲ್ಬಂಡೆಜಲ್ ಮಾತ್ರೆ ಪೋಷಕರ ಸಮ್ಮುಖದಲ್ಲಿ ಸೇವಿಸಲು ನೀಡಲಾಗುತ್ತದೆ. ಜಗತ್ತಿನಲ್ಲಿ ಪ್ರತಿ ವರ್ಷ ಶೇಕಡ ೨೪ ರಷ್ಟು ಜನ ಮಣ್ಣಿನ ಮುಖಾಂತರ ಜಂತುಹುಳು ಸೊಂಕಿಗೆ ಒಳಗಾಗುತ್ತಿದ್ದಾರೆ. ಮಕ್ಕಳು ಜಂತುಹುಳು ಸೊಂಕಿಗೆ ಒಳಗಾಗುವದರಿಂದ ದೈಹಿಕ ಮತ್ತು ಮಾನಸಿಕವಾಗಿ ತೊಂದರಗೆ ಒಳಗಾಗುತ್ತಿದ್ದಾರೆ. ಜಂತುಹಳುಗಳು ಮನುಷ್ಯ ದೇಹದಲ್ಲಿದ್ದಾಗ ಪೌಷ್ಠಿಕಾಂಶಗಳನ್ನು ದೇಹ ಪಡೆದುಕೊಳ್ಳುವದನ್ನು ತಡೆಯುತ್ತದೆ. ಇದರ ಪರಿಣಾಮ ಮಕ್ಕಳು ರಕ್ತ ಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಾರೆ. ಮಾನಸಿಕವಾಗಿ ದುರ್ಬಲರಾಗುತ್ತಾರೆ ಇದರ ಪರಿಣಾಮ ಶಿಕ್ಷಣಗಳಲ್ಲಿ ಹಿಂದುಳಿಯುವಿಕೆಗೆ ಕಾರಣವಾಗುತ್ತದೆ. ಜಂತು ಹುಳುವಿನ ತೊಂದರೆಯಿAದ ಮುಕ್ತರಾಗಲು ಆರೋಗ್ಯ ಇಲಾಖೆ ಸೂಚಿಸಿದ ಸಂದರ್ಭದಲ್ಲಿ ಅಲ್ಬೆಂಡಜಲ್ ಮಾತ್ರೆಗಳನ್ನು ಪಡೆಯಬೇಕು. ಕೋವಿಡ್ -೧೯ ಹೆಚ್ಚುತ್ತಿರುವುದರಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮನೆ ಮನೆಗೆ ತೆರಳಿ ಮಾತ್ರೆಗಳನ್ನು ನೀಡಲಾಗುತ್ತಿದ್ದು ಸಾರ್ವಜನಿಕರು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ|| ಉಷಾ ಹಾಸ್ಯಗಾರವರು ತಿಳಿಸಿದ್ದಾರೆ.

error: