May 11, 2021

Bhavana Tv

Its Your Channel

ಜನಮೆಚ್ಚಿದ ಅಧಿಕಾರಿ ಪ್ರಕಾಶ ಹೆಗಡೆ ದುಗ್ಗೂರು ಸೇವಾನಿವೃತ್ತಿ


ಹೊನ್ನಾವರ: ಹೆಸ್ಕಾಂನಲ್ಲಿ ಮೂವತ್ತೆöÊದು ವರ್ಷಗಳಿಗೂ ಹೆಚ್ಚು ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿ ಶುಕ್ರವಾರ ಸೇವಾನಿವೃತ್ತಿ ಹೊಂದಿದ ಪ್ರಕಾಶ ಹೆಗಡೆ ದುಗ್ಗೂರು ಇವರನ್ನು ಹೊನ್ನಾವರದ ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಸನ್ಮಾನಿಸಿ ಬೀಳ್ಕೊಟ್ಟರು.
ಹೊನ್ನಾವರ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊನ್ನಾವರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿನೋದ ಭಾಗ್ವತ ಮಾತನಾಡಿ, ಪ್ರಕಾಶ ಹೆಗಡೆ ಅಜಾತ ಶತ್ರು. ಅವರ ಸರಳತೆ ಮತ್ತು ಸಜ್ಜನಿಕೆ ಎಲ್ಲರಿಗೂ ಮಾದರಿ. ಅವರಂತಹ ಕ್ರಿಯಾಶೀಲ ವ್ಯಕ್ತಿತ್ವದವರು ತುಂಬಾ ವಿರಳ ಎಂದು ಅಭಿಪ್ರಾಯಪಟ್ಟರು.
ಲೆಕ್ಕಾಧಿಕಾರಿ ನಾಗರಾಜ ನಾಯ್ಕ ಮಾತನಾಡಿ, ಸರ್ಕಾರಿ ನೌಕರರ ಸೇವಾ ಪುಸ್ತಕ ಹೆಗಡೆಯವರ ವ್ಯಕ್ತಿತ್ವದ ಕನ್ನಡಿ ಇದ್ದಂತೆ. ಸೇವಾಪುಸ್ತಕ ಅವರ ಪ್ರಾಮಾಣಿಕತೆಗೆ ಸಾಕ್ಷಿ ಎಂದರು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಎಸ್.ಭಟ್ ಮಾತನಾಡಿ ಪ್ರಕಾಶ ಹೆಗಡೆಯವರ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಆರ್.ಎನ್.ಪಟಗಾರ, ವಿನಾಯಕ ನಾಯ್ಕ, ಸಿ.ಜೆ. ಅಂಬಿಗ, ರಾಜೇಶ ಮಡಿವಾಳ ಉಪಸ್ಥಿತರಿದ್ದರು. ಸ್ಟೋರ್ ಕೀಪರ್ ಪ್ರಶಾಂತ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ಉಪನ್ಯಾಸಕ ಪ್ರೊ. ಪ್ರಶಾಂತ ಮೂಡಲಮನೆ ನಿರೂಪಿಸಿದರು.


error: