May 11, 2021

Bhavana Tv

Its Your Channel

ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಎದೆಗೆ ಚಾಕು ಇರಿದು ವ್ಯಕ್ತಿಯ ಬರ್ಬರ ಹತ್ಯೆ

ಹೊನ್ನಾವರ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವಿನ ವಾಗ್ವಾದ ಜಗಳಕ್ಕೆ ತಿರುಗಿ ವ್ಯಕ್ತಿಯೊಬ್ಬ ಎದುರಿದ್ದವನ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಭೀಕರ ಘಟನೆಗೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಘಟನೆ ನಡೆದಿದೆ.

ಕೊಲೆಯಾದವನನ್ನು ಅಬು ತಲೀಬ್ ಎಂದು ಗುರುತಿಸಲಾಗಿದ್ದು ಸಲೀನ್ ಕೋಟೆಬಾಗಿಲ್ ಎಂಬಾತ ಚಾಕು ಇರಿದ ದುಷ್ಕರ್ಮಿಯಾಗಿದ್ದಾನೆ. ಸೋಮವಾರ ಮಧ್ಯಾಹ್ನ ಇಬ್ಬರ ನಡುವೆಯೂ ಕೆಲ ಹೊತ್ತು ಮನೆ ನೀರಿನ ವಿಚಾರಕ್ಕೆ ಸಂಬAಧಿಸಿದAತೆ ವಾಗ್ವಾದ ನಡೆದಿದ್ದು ಸ್ಥಳಿಯರು ಇಬ್ಬರನ್ನೂ ಸಮಾಧಾನಿಸುವ ಪ್ರಯತ್ನದಲ್ಲಿದ್ದರೂ ಇಬ್ಬರ ಜಗಳ ಮುಂದುವರೆದಿದ್ದು ಸಲೀನ್ ನೋಡ ನೋಡುತ್ತಲೇ ಎದುರಿದ್ದವನ ಎದೆಗೆ ಬಲವಾಗಿ ಕೈಯಲ್ಲಿದ್ದ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಈ ಘಟಣೆಯ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಷಯ ತಿಳಿಯುತ್ತಲೇ ಹೊನ್ನಾವರ ಪೊಲೀಸರು ಸ್ಥಳಕ್ಕೆ ದಾವಿಸಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

error: