June 22, 2021

Bhavana Tv

Its Your Channel

ಚಿತ್ರಾಪುರ ಜನಾನುರಾಗಿ ಯುವ ಸ್ನೇಹಿ ಕಿಶೋರ್ ನಾಯ್ಕ ಇನ್ನಿಲ್ಲ

ಚಿತ್ರಾಪುರ ; ಊರಲ್ಲಿ ಪ್ರತಿಯೊಬ್ಬರ ಕಷ್ಟಕ್ಕೂ ಸ್ಪಂದಿಸುವ ಈ ಜೀವ ಇಂದು ಇಲ್ಲವಾಗಿದೆ. ಜಾತಿ ಬೇದ ಮರೆತು ಯಾರೇ ಕಷ್ಟದಲ್ಲಿದ್ದರೂ ಯಾರಿಗೆ ಅನಾಹುತಗಳಾದರೂ, ಊರಲ್ಲಿ ಯಾರಾದರೂ ಮರಣ ಹೊಂದಿದರು ಮೊದಲು ಆ ಜಾಗದಲ್ಲಿ ಹೋಗಿ ನಿಂತು ಸಾಂತ್ವನ ಹೇಳುವುದರ ಜೊತೆಗೆ ಮೊದಲು ಸ್ಪಂದನೆ ನೀಡುತ್ತಿದ್ದ ಪ್ರೀತಿಯ ಜೀವ ಇಂದು ಇಲ್ಲವಾಗಿ ಇಡಿ ಊರನ್ನೆ ಮೌನವಾಗಿಸಿದೆ.

ಚಿತ್ರಾಪುರ ಹೀರೋ ಎಂದೆ ಹೆಸರುಗಳಿಸಿದ ಕಿಶೋರ ಇಂದು ಇಹಲೋಕ ತ್ಯಜಿಸಿದ್ದಾರೆ. ಧಾರಾವಾಹಿಗಳಲ್ಲಿ ನಟನೆ ಮಾಡಿ, ಕೊನೆಗೆ ಊರಿನಲ್ಲಿನ ಸಹಕಾರಿ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ, ಕ್ರೀಡೆಗಳಲ್ಲೂ ಮುಂಚೂಣಿಯಲ್ಲಿದ್ದ ಕಿಶೋರ್ ಈಗ ನೆನಪು ಮಾತ್ರ. ತಾನು ಒಂದು ಹಂತಕ್ಕೆ ಮೇಲೆ ಬರಬೇಕೆನ್ನುವಾಗಲೆ ಅವರ ತಂದೆ ತಾಯಿಗೆ ಆರೋಗ್ಯದ ಸಮಸೈ ಕಾಡಿತ್ತು. ತನ್ನ ಎಲ್ಲಾ ಆಸೆಗಳನ್ನು ಬದಿಗಿಟ್ಟು, ಊರಲ್ಲೇ ಉದ್ಯೋಗ ಆರಂಭಿಸಿ, ಮದುವೆಯಾಗಿ, ೨ ಮುದ್ದು , ಮಕ್ಕಳ ತಂದೆಯಾಗಿ, ಎಷ್ಟೇ ಕಷ್ಟ ಇದ್ದರೂ ಯಾರಿಗೂ ತೋರಿಸಿದೆ ಜೀವನ ನಡೆಸುತ್ತಿದ್ದ ಕಿಶೋರ. ಊರಿನ ಜನರ ನೆಚ್ಚಿನ ವ್ಯಕ್ತಿ, ಯಾರ ಮನೆಯೇ ಆಗಲಿ, ಕಷ್ಟ ಸುಖ ಎರಡರಲ್ಲೂ ಕಿಶೋರ ಎಲ್ಲರಿಗಿಂತ ಮೊದಲು ಇರುತ್ತಿದ್ದ. ಇಂತಹ ವ್ಯಕ್ತಿ ಇಂದು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆಂದರೆ ನಂಬಲೂ ಸಾದ್ಯವಾಗುತ್ತಿಲ್ಲ. ಈ ಮಹಾಮಾರಿ ಕೊರೋನ ಸಮಯದಲ್ಲಿ, ಕಿಶೋರ್‌ನಿಗೆ ನ್ಯುಮೋನಿಯಾ ಇರುವುದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ, ಇವರ ಸಾವಿನ ಸುದ್ದಿಯಿಂದ ಇಡಿ ಚಿತ್ರಾಪುರ ಶೋಕದಲ್ಲಿ ಮುಳುಗಿದೆ, ಎಷ್ಟೋ ತಮ್ಮಂದಿರಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆ, ಬಂಧು ಮಿತ್ರರಿಗೆ ತುಂಬಾ ನೋವಾಗಿದೆ. ಆ ದೇವರು ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳೋ ಶಕ್ತಿ ಕೊಡಲಿ ಅಂತ ಪ್ರಾರ್ಥಿಸಿ ಕಿಶೋರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರಾಪುರ ಗೆಳೆಯರು ಹಾಗೂ
ಭಟ್ಕಳ ಹೊನ್ನಾವರ ಶಾಸಕ ಸುನೀಲ್ ನಾಯ್ಕ ತನ್ನ ಅಪ್ತ ಗೆಳೆಯನ ಸಾವಿಗೆ ಸಂತಾಪ ಸೂಚಿಸಿದ್ದಾರೆ.

error: