May 10, 2024

Bhavana Tv

Its Your Channel

ನರ್ಸರಿಯಲ್ಲಿ ಬೆಳೆಸಲಾದ ವಿವಿಧ ಜಾತಿಯ ಸಸ್ಯಗಳು ರೈತರಿಗೆ ಲಭ್ಯ

ಭಟ್ಕಳ: ಭಟ್ಕಳ ಉಪವಿಭಾಗ ವ್ಯಾಪ್ತಿ ಅರಣ್ಯ ಇಲಾಖೆಯ ಸಸ್ಯಪಾಲನಾಲಯದಲ್ಲಿರುವ ವಿವಿಧ ಜಾತಿಯ ಸಸಿಗಳು ರಿಯಾಯಿತಿ ದರದಲ್ಲಿ ರೈತರಿಗೆ ಲಭ್ಯವಿದ್ದು ಅಗತ್ಯವಿದ್ದವರು ಸಸಿಗಳನ್ನು ಪಡೆಯಬಹುದು ಎಂದು ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊನ್ನಾವರ ವಿಭಾಗದ ಭಟ್ಕಳ ಉಪವಿಭಾಗ ವ್ಯಾಪ್ತಿಯಲ್ಲಿ ಭಟ್ಕಳ ವಲಯದ ವೆಂಕಟಾಪುರ ಹಾಗೂ ಮಂಕಿ ವಲಯದ ಬೇರಂಕಿ ಹಾಗೂ ಸೂಳೆಬೀಳು ಸಸ್ಯಪಾಲಯನಾಲಯದಲ್ಲಿ ೧೦೦ಕ್ಕೂ ಹೆಚ್ಚು ವಿವಿಧ ಜಾತಿಯ ಸಸ್ಯಗಳು ಈ ವರ್ಷದ ಜೂನ್ ತಿಂಗಳಲ್ಲಿ (ಮಳೆಗಾಲದಲ್ಲಿ) ನಾಟಿಮಾಡಲು ಲಭ್ಯವಿದ್ದು ರೈತರು ಇವುಗಳನ್ನು ಪಡೆದುಕೊಂಡು ತಮ್ಮ ತಮ್ಮ ಜಮೀನಿನಲ್ಲಿ ನಾಟಿ ಮಾಡಿಕೊಳ್ಳಬಹುದು ಎಂದೂ ತಿಳಿಸಲಾಗಿದೆ.
ಭಟ್ಕಳ ವಲಯದ ವೆಂಕಟಾಪುರ ಸಸ್ಯಪಾಲಯನಾಲಯದಲ್ಲಿ ೨.೪೨ ಲಕ ್ಷ ಸಸಿಗಳು ಲಭ್ಯವಿದ್ದು ಮಂಕಿ ವಲಯದಲ್ಲಿ ೨.೨೯ಲಕ್ಷ ಸಸಿಗಳು ಲಭ್ಯವಿದೆ. ಸಸಿಗಳನ್ನು ವಿವಿದs ಗಾತ್ರದ ಚೀಲಗಳಲ್ಲಿ ಬೆಳೆಸಲಾಗಿದ್ದು ಅವುಗಳಲ್ಲಿ ಮುರುಗಲು, ಸಾಗವಾನಿ, ಗುಲಗುಂಜಿ, ಕೈರ್, ಹೆದ್ದಿ, ಬಿಲ್ವಪತ್ರೆ, ಹಾಲುಮಡ್ಡಿ, ಬಿಲ್ವಾರ, ಬಿಲ್ಕಂಬಿ, ಮದ್ದಲೆ, ರಾಂಪಲ, ತೆಮೆಬಿದಿರು, ಮುತ್ತುಗ, ಬೆತ್ತ, ಸುರಹೊನ್ನೆ, ಬೀಟೆ, ಬೆಟ್ಟನೆಲ್ಲಿ, ಜಾಯಿಕಾಯಿ, ಅಂಟುವಾಳ, ಜುಮ್ಮಾ ಹಣ್ಣುಜಂಭಾ ಇತ್ಯಾಧಿ ಪ್ರಬೇಧಗಳನ್ನು ಬೆಳೆಸಲಾಗಿದ್ದು ಜೂನ್ ಮೊದಲನೆ ವಾರದಿಂದ ನಾಟಿಕಾರ್ಯ ಪ್ರಾರಂಭ ಮಾಡಬಹುದು ಎಂದೂ ತಿಳಿಸಲಾಗಿದೆ.
ಸಾರ್ವಜನಿಕರಿಗೆ ರಿಯಾಯತಿ ದರದಲ್ಲಿ ಸಸಿವಿತರಣೆ ಸಂಬAಧ ಓಟ್ಟು ೮೭೩೦ ಸಸಿಗಳನ್ನು ಬೆಳೆಸಲಾಗಿದ್ದು ೪೦ಕೂ ್ಕ ಹೆಚ್ಚು ವಿವಿಧ ಜಾತಿಯ ಔಷಧಿಯ ಗುಣವುಳ್ಳ ಸಸಿಗಳು ವಿತರಣೆಗೆ ಲಭ್ಯವಿದ್ದು ಉತ್ತರಾಣಿ, ಬಿಲ್ವಪತ್ರೆ, ಬಿಲ್ವಾರ, ಮದ ್ದಲೆ, ರಾಂ¥=ಫಲ, ಲಕ ್ಷಣಫಲ, ಸೀತಾಫಲ, ಕದಂಬಾ, ಗೇರು, ಹಲಸು, ವಾಟೆ, ಕಹಿಬೇವು, ಮಾವು, ಸಂಪಿಗೆ, ಜಜ್ಜುಗ, ಬಿಳಿಎಕ್ಕ, ಸಂದುಬಳ್ಳಿ, ಲಿಂಬು, ದೊಡ್ಡಪತ್ರೆ, ಬೀಟೆ, ಕಿರುಬಿದಿರು, ಅರಲಿ, ಮುರುಗಲು, ಸಂಪಿಗೆ, ಹೆಬ್ಬೇವು, ಮಾವು, ಸಂಪಿಗೆ, ಅಮೃತಬಳ್ಳಿ, ನೋನಿ, ನುಗ್ಗೆ, ಜಾಯಿಕಾಯಿ, ಬೆಟ್ಟನೆಲ್ಲಿ, ಪೇರಲ, ಶ್ರೀಗಂಧ, ಸೀತಾ ಅಶೋಕ, ಸಿಹಿಅಮಟೆ, ನೆರಲೆ, ಹಣ್ಣುಜಂಬೆ, ಲವಂಗ ಇತ್ಯಾದಿ ವಿವಿದs ಜಾತಿಯ ಸಸಿಗಳಿದ್ದು ಸಾರ್ವಜನಿಕರು ತಮ್ಮ ಭೂಮಿಯ ದಾಖಲೆಗಳನ್ನು ನೀಡಿದಲ್ಲಿ ಜೂನ್ ಮೊದಲ ವಾರದಲ್ಲಿ ಸಸಿಗಳ ವಿತರಣೆ ಮಾಡಲಾಗುವುದು. ಭಟ್ಕಳ ತಾಲೂಕಿನ ರೈತರು ಯೋಜನೆಯ ಸಧುಪಯೋಗ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಮಂಕಿ ವಲಯದ ಬೇರಂಕಿ ನರ್ಸರಿ ಹಾಗೂ ಸೂಳೆಬೀಳು ನರ್ಸರಿ ೯೪೮೨೨೨೬೫೫೬, ೯೩೪೧೬೭೭೧೧೬, ೯೪೮೦೮೦೭೫೯೭, ಭಟ್ಕಳ ವಲಯದ ವೆಂಕಟಾಪುರ ನರ್ಸರಿ ೯೪೪೮೬೯೮೩೯೨, ೯೪೮೦೮೦೭೫೯೬ಗೆ ಸಂಪರ್ಕಿಸಬಹುದು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: